»   » ಸಭ್ಯ 'ಖಳ' ಪ್ರಾಣ್ ಎಂದರೆ ನೆನಪಾಗೋ ಚಿತ್ರಗಳು

ಸಭ್ಯ 'ಖಳ' ಪ್ರಾಣ್ ಎಂದರೆ ನೆನಪಾಗೋ ಚಿತ್ರಗಳು

By Mahesh
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸಭ್ಯ ನಟ, ಹೀರೋ, ಖಳ, ಪೋಷಕ ಪಾತ್ರ ಹೀಗೆ ಎಲ್ಲಾ ಬಗೆ ಪಾತ್ರಗಳಲ್ಲಿ ತಲ್ಲೀನರಾಗಿ ನಟಿಸುತ್ತಿದ್ದ ಪ್ರಾಣ್ ಕಿಶನ್ ಸಿಕಂದ್ ಅಲಿಯಾಸ್ ಪ್ರಾಣ್ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ. 93 ವರ್ಷದ ಪ್ರಾಣ್ ಅವರ ಸಾವಿಗೆ ಇಡೀ ಚಿತ್ರ ಜಗತ್ತು ಕಂಬನಿ ಮಿಡಿದಿದೆ.

  ಪಾಕಿಸ್ತಾನದ ಲಾಹೋರ್ ನ ಶ್ರೀಮಂತ ಕುಟುಂಬವೊಂದರಲ್ಲಿ ಫೆ .12, 1920 ರಲ್ಲಿ ಪ್ರಾಣ್ ಜನನವಾಯಿತು. 1945ರಲ್ಲಿ ಶುಕ್ಲಾ ಅವರನ್ನು ವರಿಸಿದ ಪ್ರಾಣ್ ಭಾರತ ಪಾಕಿಸ್ತಾನ ವಿಭಜನೆ ನಂತರ ಮುಂಬೈಗೆ ಬಂದು ನೆಲೆಸಿದರು. ದಂಪತಿಗೆ ಅರವಿಂದ್, ಸುನಿಲ್ ಎಂಬ ಪುತ್ರರು ಹಾಗೂ ಪಿಂಕಿ ಎಂಬ ಪುತ್ರಿ ಇದ್ದಾರೆ.

  ಲಾಹೋರ್ ನಿಂದ ಬಂದ ಪ್ರಾಣ್ ಹೀರೋ ವೃತ್ತಿ ಜೀವನ ಆರಂಭಿಸಿದರು. ಅದರೆ, ಖಳ ಪಾತ್ರಕ್ಕೆ ಅವರು ಜೀವಂತಿಕೆ ತುಂಬಿದ್ದನ್ನು ಮೆಚ್ಚಿದ ಸಿನಿರಸಿಕರು ಕಂಚಿನ ಕಂಠದ ಪ್ರಾಣ್ ಅವರನ್ನು ಖಳನಟನಾಗೇ ಕಾಣಲು ಬಯಸಿದರು. 1940-47 ರವರೆಗೂ ಹೀರೋ ಆಗಿದ್ದ ಪ್ರಾಣ್ ಅವರು 1942-91ರ ವರೆಗೂ ಖಳ ನಟ, ಪೋಷಕ ಪಾತ್ರಗಳಲ್ಲಿ ಮಿಂಚಿದರು. ಪ್ರಾಣ್ ಎಂದ ಕೂಡಲೇ ನೆನಪಾಗೋ ಕೆಲವು ಚಿತ್ರಗಳನ್ನು ಇಲ್ಲಿ ಆಯ್ದು ನೀಡುತ್ತಿದ್ದೇವೆ ಒಪ್ಪಿಸಿಕೊಳ್ಳಿ

  ಮಧುಮತಿ

  1958ರಲ್ಲಿ ತೆರೆ ಕಂಡ ಮಧುಮತಿ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದು ಭಿಮಲ್ ರಾಯ್, ತಿತ್ವಿಕ್ ಘಾತಕ್, ರಾಜಿಂದರ್ ಸಿಂಗ್ ಬೇಡಿ ಚಿತ್ರ ಕಥೆ ಇತ್ತ್ತು. ಪ್ರಾಣ್ ಅವರು ರಾಜಾ ಉಗ್ರನಾರಾಯಣನ್ ಪಾತ್ರದಲ್ಲಿ ಒರಟುತನ, ದರ್ಪ ಅಂಶ ಜನ ಮೆಚ್ಚುಗೆ ಗಳಿಸಿತ್ತು.

  ಹಾಫ್ ಟಿಕೆಟ್

  1962ರಲ್ಲಿ ತೆರೆ ಕಂಡ ಹಾಫ್ ಟಿಕೆಟ್ ಚಿತ್ರದಲ್ಲಿ ಕಿಶೋರ್ ಕುಮಾರ್, ಮಧುಬಾಲಾ,ಹೆಲೆನ್ ಹಾಗೂ ಪ್ರಾಣ್ ಮುಖ್ಯಭೂಮಿಕೆಯಲ್ಲಿದ್ದಾರೆ. ಕಾಳಿದಾಸ್ ನಿರ್ದೇಶನದ ಈ ಚಿತ್ರದಲ್ಲಿ ರಾಜಾ ಬಾಬು ಅಲಿಯಾಸ್ ಚಾಚಾ ಪಾತ್ರದಲ್ಲಿ ಕುಖ್ಯಾತ ಕಳ್ಳನಾಗಿ ಪ್ರಾಣ್ ಕಾಣಿಸಿಕೊಂಡಿದ್ದಾರೆ.

  ಉಪಕಾರ್

  1967ರ ಈ ಚಿತ್ರವನ್ನು ಮನೋಜ್ ಕುಮಾರ್ ನಟಿಸಿ ನಿರ್ದೇಶಿಸಿದ್ದಾರೆ. ಆಶಾ ಪರೇಖ್, ಪ್ರೇಮ್ ಛೋಪ್ರಾ ಇನ್ನಿತರ ಪಾತ್ರದಲ್ಲಿದ್ದಾರೆ. ಈ ಚಿತ್ರದಲ್ಲಿ ಮಲಾಂಗ್ ಚಾಚಾ ನಾಗಿ ಸಜ್ಜನನ ಪಾತ್ರ ಪೋಷಣೆ ಮಾಡಿದ ಪ್ರಾಣ್ ವಿಭಿನ್ನತೆ ಜನರಿಗೆ ಇಷ್ಟವಾಯಿತು.

  ಜಂಜೀರ್

  ಅಮಿತಾಬ್ ಬಚ್ಚನ್ ನಟನೆಯ ಜಂಜೀರ್ ಚಿತ್ರದಲ್ಲಿ ಶೇರ್ ಖಾನ್ ಆಗಿ ಕಾಣಿಸಿಕೊಂಡ ಪ್ರಾಣ್, ಬಚ್ಚನ್ ಅವರ ಸಮಾನಕ್ಕೆ ನಟಿಸಿದ್ದರು. ಈ ಚಿತ್ರದ ಸದ್ಯ ರೀಮೇಕ್ ಆಗುತ್ತಿದ್ದು ಸಂಜಯ್ ದತ್ ಅವರು ಪ್ರಾಣ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಮ್ ಚರಣ್ ತೇಜ ಅವರು ಅಮಿತಾಬ್ ಪಾತ್ರವಹಿಸಿದ್ದಾರೆ.

  ಅಮರ್ ಅಕ್ಬರ್ ಅಂಟೋನಿ

  ಮನಮೋಹನ್ ದೇಸಾಯಿ ಅವರ ಅಮಿತಾಬ್ ಬಚ್ಚನ್, ವಿನೋದ್ ಖನ್ನಾ, ರಿಷಿ ಕಪೂರ್, ಪರ್ವೀನ್ ಬಾಬಿ, ನೀತು ಸಿಂಗ್, ಶಬನಾ ಅಜ್ಮಿ ಬಹು ತಾರಾಗಣದ ಚಿತ್ರದಲ್ಲಿ ಮೂವರು ಮಕ್ಕಳ ತಂದೆ, ನಿರುಪಮಾ ರಾಯ್ ಪತಿ, ಡಾನ್ ಆಗಿ ಪ್ರಾಣ್ ಅದ್ಭುತ ನಟನೆ ನೀಡಿದ್ದಾರೆ.

  ಷೆಹನ್ ಷಾಹ

  ಟೀನು ಆನಂದ್ ನಿರ್ದೇಶನದ 1988ರ ಸೂಪರ್ ಹೀರೋ ಚಿತ್ರ ಷೆಹನ್ ಷಹ ಚಿತ್ರ ಅಮಿತಾಬ್ ಚೇಸ್ ಮಾಡುವ ನಿಷ್ಠಾವಂತ ಪೊಲೀಸ್ ಅಸ್ಲಾಂ ಖಾನ್ ಆಗಿ ಪ್ರಾಣ್ ಕಾಣಿಸಿಕೊಂಡಿದ್ದಾರೆ.

  English summary
  Legendary actor Pran Kishan Sikand, who popular known by the name Pran passed away on Friday evening. On the occasion, we would like to remember the best movies of Pran.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more