For Quick Alerts
  ALLOW NOTIFICATIONS  
  For Daily Alerts

  ಪತ್ನಿಯಿಂದ ದೂರು: ನವಾಜುದ್ಧೀನ್ ಸಿದ್ಧಿಕಿ ಬಂಧನಕ್ಕೆ ಹೈಕೋರ್ಟ್‌ ತಡೆ

  |

  ಪತ್ನಿಯಿಂದಲೇ ಲೈಂಗಿಕ ಹಿಂಸೆ, ಕೌಟುಂಬಿಕ ದೌರ್ಜನ್ಯ ಆರೋಪಕ್ಕೆ ಗುರಿಯಾಗಿರುವ ಖ್ಯಾತ ನಟ ನವಾಜುದ್ಧೀನ್ ಸಿದ್ಧಿಕಿ ಬಂಧನ ಭೀತಿ ಎದುರಿಸುತ್ತಿದ್ದರು. ಆದರೆ ಅಲಹಾಬಾದ್ ಹೈಕೋರ್ಟ್ ನವಾಜುದ್ಧಿನ್‌ ಬಂಧನಕ್ಕೆ ತಡೆ ನೀಡಿದೆ.

  ನವಾಜುದ್ಧಿನ್ ಸಿದ್ಧಿಕಿ ಪತ್ನಿ ಆಲಿಯಾ ಸಿದ್ಧಿಕಿ ಕೆಲವು ದಿನಗಳ ಹಿಂದೆ ನವಾಜುದ್ಧೀನ್ ಸಿದ್ಧಿಕಿ ಹಾಗೂ ಅವರ ಕುಟುಂಬದ ಮೂವರ ವಿರುದ್ಧ ಕೌಟುಂಬಿಕ ದೌರ್ಜನ್ಯ ಹಾಗೂ ಲೈಂಗಿಕ ಹಿಂಸೆಯ ದೂರು ನೀಡಿದ್ದರು. ನವಾಜುದ್ಧಿನ್ ಸಿದ್ಧಿಕಿ ಹಾಗೂ ಇತರೆ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು, ನವಾಜುದ್ಧೀನ್ ಅನ್ನು ಬಂಧಿಸಲು ಸಹ ಪೊಲೀಸರು ತಯಾರಿದ್ದರು.

  ಆದರೆ ತಮ್ಮ ವಿರುದ್ಧ ಪ್ರಕರಣದ ಕುರಿತು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು ನವಾಜುದ್ಧೀನ್ ಸಿದ್ಧಿಕಿ, ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್, ನವಾಜುದ್ಧೀನ್ ಸಿದ್ಧಿಕಿ ಹಾಗೂ ಮೂವರನ್ನು ಬಂಧಿಸದಂತೆ ತಡೆ ನೀಡಿದೆ.

  ನವಾಜುದ್ಧೀನ್ ಕಿರಿಯ ಸಹೋದರನ ಬಂಧನಕ್ಕೆ ತಡೆ ಇಲ್ಲ

  ನವಾಜುದ್ಧೀನ್ ಕಿರಿಯ ಸಹೋದರನ ಬಂಧನಕ್ಕೆ ತಡೆ ಇಲ್ಲ

  ನವಾಜುದ್ಧೀನ್ ಸಿದ್ಧಿಕಿ, ಮಿನಾಜುದ್ಧೀನ್ ಸಿದ್ಧಿಕಿ, ಫೈಜುದ್ಧೀನ್ ಸಿದ್ಧಿಕಿ, ಮೆಹರುನ್ನೀಸಾ ಸಿದ್ಧಿಕಿ, ಅಯಾಜುದ್ಧೀನ್ ಸಿದ್ಧಿಕಿ ವಿರುದ್ಧ ನವಾಜುದ್ದೀನ್ ಪತ್ನಿ ಆಲಿಯಾ ಸಿದ್ಧಿಕಿ ದೂರು ನೀಡಿದ್ದರು. ಎಲ್ಲರ ಬಂಧನಕ್ಕೆ ತಡೆ ನೀಡಿದ ಹೈಕೋರ್ಟ್, ಮಿನಾಜುದ್ಧೀನ್ ಸಿದ್ಧಿಕಿ ಬಂಧನಕ್ಕೆ ಮಾತ್ರ ತಡೆ ನೀಡಿಲ್ಲ, ಹಾಗಾಗಿ ಆತನ ಬಂಧನವಾಗುವ ಸಾಧ್ಯತೆ ಇದೆ.

  ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲು

  ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲು

  ಮಿನಾಜುದ್ಧೀನ್ ಸಿದ್ಧಿಕಿ ವಿರುದ್ಧ ಮಕ್ಕಳ ಮೇಲೆ ಲೈಂಗಿಕ ಹಿಂಸೆ ಪ್ರಕರಣ ದಾಖಲಾಗಿದೆ. ಹಾಗಾಗಿ ತ್ರಿಸದಸ್ಯ ಪೀಠವು ಮಿನಾಜುದ್ಧೀನ್‌ ಬಂಧನಕ್ಕೆ ತಡೆ ನೀಡಿಲ್ಲ. ಉಳಿದ ಆರೋಪಿಗಳ ಬಂಧನಕ್ಕೆ ತಡೆ ನೀಡಿದೆ. ಇದು ನವಾಜುದ್ಧೀನ್‌ಗೆ ತಾತ್ಕಾಲಿಕ ನಿರಾಳ ಮಾತ್ರವೇ ಆಗಿದೆ.

  ಎಫ್‌ಐಆರ್‌ನಲ್ಲಿ ಎರಡು ಭಾಗವಿದೆ

  ಎಫ್‌ಐಆರ್‌ನಲ್ಲಿ ಎರಡು ಭಾಗವಿದೆ

  ಎಫ್‌ಐಆರ್ ಎರಡು ಭಾಗದಲ್ಲಿದ್ದು, ಮೊದಲ ಭಾಗದಲ್ಲಿ ಮಿನಾಜುದ್ಧಿನ್‌ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ ಎಂಬುದಾಗಿದ್ದು, ಎರಡನೇ ಭಾಗದಲ್ಲಿ ನವಾಜುದ್ಧೀನ್ ಸಿದ್ಧಿಕಿಯ ಇಡೀಯ ಕುಟುಂಬ ದೂರುದಾರರ ವಿರುದ್ಧ ಒಟ್ಟುಗೂಡಿದ ಬಗ್ಗೆ ಇದೆ ಎಂಬುದನ್ನು ಗಮನಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

  Celebrities Dasara Special : ಭರ್ಜರಿ ಆಯುಧ ಪೂಜೆ ಮಾಡಿದ ತಾರೆಯರು | Filmibeat Kannada
  ನವಾಜುದ್ಧೀನ್ ತಾಯಿ ವಿರುದ್ಧವೂ ದೂರು

  ನವಾಜುದ್ಧೀನ್ ತಾಯಿ ವಿರುದ್ಧವೂ ದೂರು

  ನವಾಜುದ್ಧೀನ್ ಪತ್ನಿ ಆಲಿಯಾ, ಮುಝಪ್ಫರ್ ನಗರ ಪೊಲೀಸ್ ಠಾಣೆಯಲ್ಲಿ ನವಾಜುದ್ಧೀನ್ ಹಾಗೂ ಅವರ ಮೂವರು ಸಹೋದರರು ಹಾಗೂ ನವಾಜುದ್ಧೀನ್ ತಾಯಿ ವಿರುದ್ಧ ದೂರು ದಾಖಲಿಸಿದ್ದರು. ಮಿನಾಜುದ್ಧೀನ್ ಪಪ್ರಾಪ್ತೆಯ ಮೇಲೆ ಲೈಂಗಿಕ ಹಿಂಸೆ ನಡೆಸಿದ್ದಾನೆ ಎಂಥಲೂ, ನವಾಜುದ್ಧೀನ್ ಹಾಗೂ ಅವರ ಸಹೋದರ ಹಾಗೂ ತಾಯಿ ತಮ್ಮ ಮೇಲೆ ಕೌಂಟುಂಬಿಕ ದೌರ್ಜನ್ಯ ಎಸಗಿದ್ದಾರೆ ಎಂಥಲೂ ದೂರು ದಾಖಲಿಸಿದ್ದರು.

  English summary
  Actor Nawazuddin Siddiqui's arrest was stayed by Allahabad high court. Nawazuddin's wife gave complaint against him and his family members.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X