For Quick Alerts
  ALLOW NOTIFICATIONS  
  For Daily Alerts

  ನಟಿ ತಾಪಸಿಗೆ ಪಬ್ಲಿಕ್ ನಲ್ಲೇ ಮುತ್ತಿನ ಸುರಿಮಳೆ

  By ಉದಯರವಿ
  |

  ಇದು ಮತ್ತೊಂದು ಶಿಲ್ಪಾ ಶೆಟ್ಟಿ ಹಾಗೂ ರಿಚರ್ಡ್ ಗೇರ್ ಚುಂಬನ ಪ್ರಸಂಗವನ್ನು ನೆನಪಿಸುವಂತಿದೆ. ದಕ್ಷಿಣದ ಚೆಂದುಳ್ಳಿ ಚೆಲುವೆಯನ್ನು ಪಬ್ಲಿಕ್ ಆಗಿ ಮುದ್ದಾಡಿ ಮುತ್ತಿನ ಸುರಿಮಳೆ ಸುರಿಸಿದ್ದಾರೆ ಆಕೆಯ ಸಹನಟ.

  ತಾಪಸಿ ಅಭಿನಯಿಸಿರುವ ರನ್ನಿಂಗ್ ಶಾದಿ ಡಾಟ್ ಕಾಮ್ ಚಿತ್ರದ ಸುದ್ದಿಗೋಷ್ಠಿಗೆ ಹಾಜರಾಗುವ ಸಂದರ್ಭದಲ್ಲಿ ಈ ರೋಚಕ ಘಟನೆ ನಡೆಯಿತು. ಇವರಿಬ್ಬರೂ ತಮ್ಮಷ್ಟಕ್ಕೆ ತಾವು ಮುದ್ದಾಡುತ್ತಿದ್ದರು. ಛಾಯಾಗ್ರಾಹಕರ ಕಣ್ಣಿಗೆ ಬಿದ್ದಿದ್ದೇ ತಡ ಕ್ಯಾಮೆರಾದಲ್ಲಿ ಬಂಧಿಯಾದರು.

  ತಾಪಸಿಯ ಗುಲಾಬಿ ಕೆನ್ನೆಗೆ ಮುತ್ತಿರುವ ನಟನ ಹೆಸರು ಅಮಿತ್ ಸಾಧ್. ಬಾಲಿವುಡ್ ಚಿತ್ರ ರನ್ನಿಂಗ್ ಶಾದಿ ಡಾಟ್ ಕಾಮ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದು ನಿಜವಾದ ಮುತ್ತಿನಾಟವೋ ಅಥವಾ ಕೇವಲ ಪಬ್ಲಿಸಿಟಿ ಗಿಮ್ಮಿಕ್ ಇರಬಹುದಾ ಎಂಬ ಅನುಮಾನವೂ ವ್ಯಕ್ತವಾಗಿದೆ.

  ದಾರಿಯಲ್ಲೇ ತಾಪಸಿಗೆ ಚುಂಬನದ ಮಳೆ

  ದಾರಿಯಲ್ಲೇ ತಾಪಸಿಗೆ ಚುಂಬನದ ಮಳೆ

  ಸುದ್ದಿಗೋಷ್ಠಿಗೆ ಬರುವ ದಾರಿಯಲ್ಲಿ ಇಬ್ಬರೂ ಹೀಗೆ ಜೊತೆಯಾಗಿ ಕಾಣಿಸಿಕೊಂಡರು. ಬಳಿಕ ಅದೇನಾಯಿತೋ ಏನೋ ಬಹಿರಂಗವಾಗಿಯೇ ತಾಪಸಿಯನ್ನು ಅಪ್ಪಿಕೊಂಡು ಅಮಿತ್ ಸಾಧ್ ಚುಂಬಿಸಿದರು.

  ಕೊಸರಾಡದೆ ಸಹಕರಿಸಿದ ತಾಪಸಿ

  ಕೊಸರಾಡದೆ ಸಹಕರಿಸಿದ ತಾಪಸಿ

  ಅಮಿತ್ ಸಾಧ್ ಚುಂಬಿಸುತ್ತಿದ್ದರೆ ತಾಪಸಿ ಕೂಡ ಕೊಸರಾಡದೆ ಸಹರಿಸುತ್ತಿರುವುದು ಈ ಚಿತ್ರದಲ್ಲಿ ಗೊತ್ತಾಗುತ್ತದೆ. ಇವರಿಬ್ಬರ ಮುದ್ದಾಟ ಚಿತ್ರಗಳು ಕ್ಯಾಮೆರಾದಲ್ಲಿ ಬಂಧಿಯಾದವು.

  ಮುತ್ತಿನ ಸುರಿಮಳೆ ಸುರಿಸಿದ ಅಮಿತ್

  ಮುತ್ತಿನ ಸುರಿಮಳೆ ಸುರಿಸಿದ ಅಮಿತ್

  ಛಾಯಾಗ್ರಾಹಕರು ಮುಗಿಬಿದ್ದು ಇವರಿಬ್ಬರ ರೊಮ್ಯಾಂಟಿಕ್ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರೆ ಮತ್ತಷ್ಟು ರೊಚ್ಚಿಗೆದ್ದ ಅಮಿತ್ ಮುತ್ತಿನ ಸುರಿಮಳೆಯನ್ನೇ ಸುರಿಸಿದ.

  ಅಮಿತ್ ರಾಯ್ ಚೊಚ್ಚಲ ನಿರ್ದೇಶನದ ಚಿತ್ರ

  ಅಮಿತ್ ರಾಯ್ ಚೊಚ್ಚಲ ನಿರ್ದೇಶನದ ಚಿತ್ರ

  ಅಮಿತ್ ರಾಯ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. ಅವರ ನಿರ್ದೇಶನದಲ್ಲಿ ಬರುತ್ತಿರುವ ಚೊಚ್ಚಲ ಚಿತ್ರ ಇದಾಗಿದೆ. ಶೂಜಿತ್ ಸರ್ಕಾರ್ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಚಿತ್ರ ಇದು.

  ಸಮಾನ ಮನಸ್ಕ ಪ್ರೇಮಿಗಳ ಕಥೆ

  ಸಮಾನ ಮನಸ್ಕ ಪ್ರೇಮಿಗಳ ಕಥೆ

  ಅಂದಹಾಗೆ ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರ ಇಬ್ಬರು ಸಮಾನ ಮನಸ್ಕ ಪ್ರೇಮಿಗಳ ಕಥೆಯನ್ನು ಒಳಗೊಂಡಿದೆಯಂತೆ. ಈ ಚಿತ್ರ ಖಂಡಿತ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತದೆ ಎಂಬ ವಿಶ್ವಾಸಲ್ಲಿ ನಿರ್ದೇಶಕರಿದ್ದಾರೆ.

  English summary
  South Indian beauty Tapsi Pannu was being kissed by her co-star in public on Monday (February 24). She was in Mumbai to attend the press meet of her forthcoming Hindi movie Running Shaadi.com.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X