»   » 26 ವರ್ಷದ ನಂತರ ಬಾಲಿವುಡ್ ನಲ್ಲೊಂದು ಅಪೂರ್ವ ಸಂಗಮ

26 ವರ್ಷದ ನಂತರ ಬಾಲಿವುಡ್ ನಲ್ಲೊಂದು ಅಪೂರ್ವ ಸಂಗಮ

Written By:
Subscribe to Filmibeat Kannada

ಬಾಲಿವುಡ್‌ ದಿಗ್ಗಜ ನಟರಾದ ಅಮಿತಾಬ್ ಬಚ್ಚನ್ ಮತ್ತು ರಿಷಿ ಕಪೂರ್ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ 26 ವರ್ಷದ ನಂತರ ಬಾಲಿವುಡ್ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗುತ್ತಿದೆ.

ಹೌದು, ಈ ಸುದ್ದಿಯನ್ನ ಸ್ವತಃ ಹಿರಿಯ ನಟ ರಿಷಿ ಕಪೂರ್ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದ್ದಾರೆ. ''ಬಿಗ್-ಬಿ ಅವರೊಂದಿಗೆ ಕೆಲಸ ಮಾಡುವುದು ತುಂಬ ಸಂತೋಷದ ಸಂಗತಿ. ಇತ್ತೀಚಿಗಷ್ಟೆ ಚಿತ್ರದ ಸ್ಕ್ರಿಪ್ಟ್ ಓದಲು ಆರಂಭಿಸಿದ್ದೇನೆ'' ಎಂದು 64 ವರ್ಷದ ನಟ ರಿಷಿ ಕಪೂರ್ ಸಂತಸ ಹಂಚಿಕೊಂಡಿದ್ದಾರೆ.

Amitabh Bachchan and Rishi Kapoor to Come together After 26 Years

ಈ ಇಬ್ಬರು 'ಕಭಿ ಕಭಿ', 'ಅಮರ್ ಅಕ್ಬರ್ ಅಂಥೋನಿ','ನಸೀಬ್', ಕೂಲಿ, ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದರು. ಆದ್ರೆ, ಕಳೆದ 26 ವರ್ಷದಿಂದ ಮತ್ಯಾವ ಚಿತ್ರದಲ್ಲಿ ಇವರಿಬ್ಬರು ಒಂದೇ ತೆರೆಯಲ್ಲಿ ಕಾಣಿಸಲೇ ಇಲ್ಲ.

ಕೊನೆಯದಾಗಿ 1991 ರಲ್ಲಿ ತೆರೆಕಂಡಿದ್ದ 'ಅಜೂಬಾ' ಚಿತ್ರದಲ್ಲಿ ತೆರೆಹಂಚಿಕೊಂಡಿದ್ದರು. ಈಗ ಮತ್ತೆ ಹೊಸ ಚಿತ್ರದ ಮೂಲಕ ಬಿಗ್ ಸ್ಕ್ರೀನ್ ನಲ್ಲಿ ಒಟ್ಟಾಗಿ ಬರ್ತಿದ್ದಾರೆ. ಅಂದ್ಹಾಗೆ, ಈ ಚಿತ್ರವನ್ನ ಉಮೇಶ್ ಶುಕ್ಲಾ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದ ಹೆಸರು '102 ನಾಟ್ ಔಟ್' ಎಂದು ಹೆಸರಿಡಲಾಗಿದೆ. ಚಿತ್ರದಲ್ಲಿ ಅಮಿತಾಬ್ 102 ವರ್ಷದ ವ್ಯಕ್ತಿ ಪಾತ್ರವನ್ನ ನಿರ್ವಹಿಸುತ್ತಿದ್ದು, ರಿಷಿಕಪೂರ್ ಅಮಿತಾಬ್ ಮಗನ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರಂತೆ.

English summary
Amitabh Bachchan is all set to reunite with Rishi Kapoor after a gap of 26 years for a film. Read on to know more.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X