ಹೊಸ ಕಾರು ಖರೀದಿಸಿದ ಅಮಿತಾಬ್ ಬಚ್ಚನ್: ಬೆಲೆ ಎಷ್ಟು ಗೊತ್ತೆ?

ಕೆಲವು ದಿನಗಳ ಹಿಂದಷ್ಟೆ ಕೊರೊನಾ ವೈರಸ್‌ನೊಂದಿಗೆ ಹೋರಾಡಿ ಗುಣಮುಖವಾಗಿ ಮನೆಗೆ ಮರಳಿರುವ ಅಮಿತಾಬ್ ಬಚ್ಚನ್ ಹೊಸ ಐಶಾರಾಮಿ ಕಾರೊಂದನ್ನು ಖರೀದಿಸಿದ್ದಾರೆ.

Recommended Video

Bollywood ಹಾಗು ನಮ್ಮ ಇಂಡಸ್ಟ್ರಿಗೂ Drugs link ತಿಳಿಸಿದ Prashanth Sambargi | Filmibeat Kannada

ಅಮಿತಾಬ್ ಬಚ್ಚನ್ ಬಳಿ ಈಗಾಗಲೇ ಐಶಾರಾಮಿ ಕಾರುಗಳ ಸಂಗ್ರಹ ಇದೆ. ಹಾಗಿದ್ದಾಗ್ಯೂ ಹೊಸ ಕಾರು ಖರೀದಿಸಿದ್ದಾರೆ ಅಮಿತಾಬ್. ಅವರು ತಮ್ಮ ಹೊಸ ಕಾರಿನೊಂದಿಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದು, ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದೇಶವೇ ಕೊರೊನಾ ಸಂಕಷ್ಟದಲ್ಲಿರುವ ಹೀಗೆ ಐಶಾರಾಮಿ ಕಾರು ಖರೀದಿಸುವ ಅಗತ್ಯವಿತ್ತೆ? ಎಂದು ಹಲವರು ಪ್ರಶ್ನಿಸಿದ್ದಾರೆ. ಹಾಗಾದರೆ ಅಮಿತಾಬ್ ಖರೀದಿಸಿದ ಕಾರು ಯಾವುದು? ಕಾರಿನ ಬೆಲೆ? ವಿಶಿಷ್ಟತೆಗಳೇನು? ಮುಂದಿದೆ ಮಾಹಿತಿ...

ಕಾರಿನ ಬೆಲೆ ಎಷ್ಟು?

ಕಾರಿನ ಬೆಲೆ ಎಷ್ಟು?

ಅಮಿತಾಬ್ ಬಚ್ಚನ್ ಖರೀದಿಸಿರುವುದು ಎಸ್ ಕ್ಲಾಸ್ ಮರ್ಸಿಡೀಸ್ ಬೆನ್ಜ್. ಹಲವು ನವ ನವೀನ ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರಿನ ಎಕ್ಸ್ ಶೋ ರೂಂ ಬೆಲೆ 1.35 ಕೋಟಿ. ಆನ್‌ ರೋಡ್ ಬೆಲೆ ಸುಮಾರು 2 ಕೋಟಿ ಆಗುತ್ತದೆ.

'ಐಶಾರಾಮಿ ಕಾರು ಕೊಳ್ಳುವ ಅಗತ್ಯವಿತ್ತೆ'

'ಐಶಾರಾಮಿ ಕಾರು ಕೊಳ್ಳುವ ಅಗತ್ಯವಿತ್ತೆ'

ಕಾರು ಖರೀದಿಸಿದ ಅಮಿತಾಬ್ ಬಚ್ಚನ್ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ನೆಟ್ಟಿಜನರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ದೇಶವೇ ಕೊರೊನಾ ಸಂಕಷ್ಟದಲ್ಲಿರುವಾಗ ಐಶಾರಾಮಿ ಕಾರು ಕೊಳ್ಳುವ ಅಗತ್ಯವಿತ್ತೆ ಎಂದು ಪ್ರಶ್ನಿಸಿದ್ದಾರೆ.

ಸೋನು ಸೂದ್ ಇಂದ ಕಲಿಯಿರಿ ಎಂದ ನೆಟ್ಟಿಗರು

ಸೋನು ಸೂದ್ ಇಂದ ಕಲಿಯಿರಿ ಎಂದ ನೆಟ್ಟಿಗರು

ಸೋನು ಸೂದ್ ತನ್ನ ಗಳಿಕೆಯಿಂದಲೇ ಲಕ್ಷಾಂತರ ಜನಕ್ಕೆ ಸಹಾಯ ಮಾಡುತ್ತಿದ್ದಾರೆ. ಅವರನ್ನು ನೋಡಿ ಕಲಿಯಿರಿ ಎಂದು ಇನ್ನು ಕೆಲವರು ಹೇಳಿದ್ದಾರೆ. ಅಮಿತಾಬ್ ಬಚ್ಚನ್ ಅಭಿಮಾನಿಗಳು ನೆಚ್ಚಿನ ನಟನನ್ನು ಸಮರ್ಥಿಸಿಕೊಂಡು ಸಹ ಪೋಸ್ಟ್‌ ಹಾಕಿದ್ದಾರೆ.

ಅಮಿತಾಬ್ ಬಚ್ಚನ್ ಕುಟುಂಬದ ಇರುವ ಕಾರುಗಳ ಸಂಗ್ರಹ

ಅಮಿತಾಬ್ ಬಚ್ಚನ್ ಕುಟುಂಬದ ಇರುವ ಕಾರುಗಳ ಸಂಗ್ರಹ

ಅಮಿತಾಬ್ ಬಚ್ಚನ್ ಕುಟುಂಬದ ಬಳಿ ಐಶಾರಾಮಿ ಕಾರುಗಳ ದೊಡ್ಡ ಸಂಗ್ರಹವೇ ಇದೆ. 4 ಕೋಟಿಗೂ ಹೆಚ್ಚು ಮೌಲ್ಯದ ರೋಲ್ಸ್ ರಾಯ್ಸ್ ಪ್ಯಾಂಟಮ್, ಪೋರ್ಶೆ ಕೇಮನ್ ಎಸ್, ಬೆಂಟ್ಲಿ ಕಾಂಟಿನೆಂಟಲ್ ಜಿಟಿ, ಬೆನ್ಜ್‌ ಎಸ್500, ಮರ್ಸಿಡೀಸ್ ಜಿಎಲ್‌63, ಲ್ಯಾಂಡ್ ಕ್ರೂಸರ್ ಎಲ್‌ಸಿ200, ರೇಂಜ್ ರೋವರ್, ಆಡಿ ಎ8ಎಲ್, ಟೊಯೋಟಾ ಕ್ರ್ಯಾಮಿ, ಮಿನಿ ಕೂಪರ್ ಕಾರುಗಳಿವೆ.

More from Filmibeat

English summary
Actor Amitabh Bachchan bought new car. Netizen slams his for purchasing costly car in COVID 19 time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X