»   » 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರೀಕರಣದ ಬಿಗ್‌ಬಿ ಫಸ್ಟ್ ಶೆಡ್ಯೂಲ್ ಮುಕ್ತಾಯ

'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರೀಕರಣದ ಬಿಗ್‌ಬಿ ಫಸ್ಟ್ ಶೆಡ್ಯೂಲ್ ಮುಕ್ತಾಯ

Posted By:
Subscribe to Filmibeat Kannada

'ದಂಗಲ್' ಚಿತ್ರದ ನಂತರ ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮತ್ತು ಅಮಿತಾಬ್ ಬಚ್ಚನ್ ರವರು 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈಗ ಬಿಗ್ ಬಿ ಚಿತ್ರದ ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿಸಿದ್ದಾರೆ.

'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ಶೂಟಿಂಗ್ ಪ್ರಸ್ತುತ ಯೂರೋಪ್‌ನ ಮಲ್ಟಾ ದಲ್ಲಿ ನಡೆಯುತ್ತಿದ್ದು, ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮೊದಲ ಶೆಡ್ಯೂಲ್ ಶೂಟಿಂಗ್ ಮುಗಿಸಿರುವ ಬಗ್ಗೆ ಒಂದು ಸುಂದರ ಚಿತ್ರಸಹಿತ "ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ನನ್ನ ಫಸ್ಟ್ ಶೆಡ್ಯೂಲ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.

Amitabh Bachchan Completes Thugs Of Hindostan First Schedule

74 ವರ್ಷದ ಅಮಿತಾಬ್ ಬಚ್ಚನ್ ಈ ಹಿಂದೆಯೂ ಈ ಚಿತ್ರದಲ್ಲಿ ವರ್ಕ್ ಮಾಡಿದ ಬಗ್ಗೆ ಇದು ತುಂಬಾ ರಫ್ ಅಂಡ್ ಟಫ್ ಆಗಿದೆ ಎಂದು ಟ್ವೀಟ್ ಮಾಡಿದ್ದರು.

'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದಲ್ಲಿ ಕತ್ರಿನಾ ಕೈಫ್, ಫಾತಿಮಾ ಸನಾ ಶೇಖ್ ಅಭಿನಯಿಸಿದ್ದಾರೆ. ಚಿತ್ರವನ್ನು ವಿಜಯ್ ಕೃಷ್ಣ ಆಚಾರ್ಯ ರವರು ನಿರ್ದೇಶನ ಮಾಡುತ್ತಿದ್ದು, 'ಯಶ್ ರಾಜ್ ಫಿಲ್ಮ್ಸ್' ಬ್ಯಾನರ್ ಅಡಿ ಆದಿತ್ಯ ಚೋಪ್ರಾ ನಿರ್ಮಾಣ ಮಾಡುತ್ತಿದ್ದಾರೆ.

ಈ ಚಿತ್ರವು ಲೇಖಕ Philip Meadows Taylor ಬರೆದಿರುವ 1839 ರ 'ಕನ್ಫೆಶನ್ಸ್ ಆಫ್ ಎ ಥಗ್' ಕಾದಂಬರಿ ಆಧರಿತ ಸಿನಿಮಾ. ಈ ಚಿತ್ರವನ್ನು 2018 ರ ದೀಪಾವಳಿ ಹಬ್ಬದ ವೇಳೆಗೆ ರಿಲೀಸ್ ಮಾಡಲು ಚಿತ್ರತಂಡ ಉದ್ದೇಶಿಸಿರುವ ಬಗ್ಗೆ ತಿಳಿದಿದೆ.

English summary
Megastar Amitabh Bachchan has completed the first schedule of the upcoming film 'Thugs Of Hindostan' in Malta.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada