For Quick Alerts
  ALLOW NOTIFICATIONS  
  For Daily Alerts

  ವಿಧಿಯಾಟ: ಅಭಿಮಾನಿಯಿಂದಲೇ ಅಮಿತಾಬ್ ಬಚ್ಚನ್ ದೇಹದ ಭಾಗ ನಶಿಸುತ್ತಿದೆ!

  |

  ಸಿನಿಮಾ ತಾರೆಯರಿಗೆ ಅಭಿಮಾನಿಗಳೇ ಆಮ್ಲಜನಕ. ಅಭಿಮಾನಿಗಳಿಲ್ಲದಿದ್ದೆ ಸ್ಟಾರ್‌ಗಳಿಲ್ಲ. ಹಾಗಾಗಿಯೇ ಬಹುತೇಕ ಸ್ಟಾರ್‌ಗಳು, ತಮ್ಮ ಕುಟುಂಬದ ನಂತರ ತಮ್ಮ ಅಭಿಮಾನಿಗಳಿಗೇ ಆದ್ಯತೆ ನೀಡಿದ್ದಾರೆ.

  ಒಂದು ಫೋಟೋಗೆ ಸ್ಟಾರ್ ನಟರ ಸಂಭಾವನೆ ಎಷ್ಟು? | Priyanka Chopra | Instagram | Filmibeat Kannada

  ಆದರೆ ಅಭಿಮಾನಿಗಳಿಂದ ಸ್ಟಾರ್‌ ಗಳು ತೊಂದರೆ ಅನುಭವಿಸಿರುವ ಘಟನೆಗಳೂ ಸಾಕಷ್ಟಿವೆ. ಅಭಿಮಾನಿಗಳಿಂದಾಗಿ ಕಿರಿ-ಕಿರಿ ಅನುಭವಿಸುವುದು, ವೈಯಕ್ತಿಕ ಜೀವನ ಇಲ್ಲದಾಗುವುದು, ಸ್ಟಾರ್ ನಟನ ಹೆಸರಲ್ಲಿ ಹುಚ್ಚಾಟ ನಡೆಸುವ ಅಭಿಮಾನಿಗಳೂ ಇದ್ದಾರೆ ಇಂಥಹವೇ ಕೆಲವು ಸಮಸ್ಯೆಗಳನ್ನು ಅಭಿಮಾನಿಗಳಿಂದ ಸ್ಟಾರ್‌ ಗಳು ಅನುಭವಿಸುತ್ತಾರೆ.

  ಆದರೆ ನಟ ಅಮಿತಾಬ್ ಬಚ್ಚನ್ ಕತೆಯೇ ಬೇರೆ. ಅಭಿಮಾನಿಯೊಬ್ಬನಿಂದಾಗಿ ತಮ್ಮ ದೇಹದ ಒಂದು ಭಾಗವನ್ನೇ ಕಳೆದುಕೊಳ್ಳುವ ಸ್ಥಿತಿಗೆ ಅಮಿತಾಬ್ ಬಚ್ಚನ್ ತಲುಪಿದ್ದಾರೆ! ಆದರೆ ಇದಕ್ಕೆ ಅಭಿಮಾನಿಯನ್ನು ದೂಷಿಸುವಂತಿಲ್ಲ, ಆತನ ತಪ್ಪೂ ಇಲ್ಲ, ವಿಧಿಯಷ್ಟೆ ಇದಕ್ಕೆ ಹೊಣೆ.

  38 ವರ್ಷಗಳ ಹಿಂದೆ ಬೆಂಗಳೂರಲ್ಲಿ ಅಪಘಾತ

  38 ವರ್ಷಗಳ ಹಿಂದೆ ಬೆಂಗಳೂರಲ್ಲಿ ಅಪಘಾತ

  38 ವರ್ಷದ ಹಿಂದೆ ಅಮಿತಾಬ್ ಬಚ್ಚನ್‌ ಗೆ ಬೆಂಗಳೂರಿನಲ್ಲಿಯೇ ಚಿತ್ರೀಕರಣ ನಡೆಸುವಾದ ದೊಡ್ಡ ಅಪಘಾತವೊಂದು ಆಗಿತ್ತು. ಅವರ ಲಿವರ್‌ ಗೆ ತೀವ್ರವಾಗಿ ಪೆಟ್ಟಾಗಿತ್ತು. ಅವರು ಕೋಮಾಕ್ಕೆ ಜಾರಿಬಿಟ್ಟಿದ್ದರು. ಅವರು ಬದುಕುವುದೇ ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿತ್ತು.

  200 ಮಂದಿಯಿಂದ ರಕ್ತ ಪಡೆಯಲಾಗಿತ್ತು

  200 ಮಂದಿಯಿಂದ ರಕ್ತ ಪಡೆಯಲಾಗಿತ್ತು

  ಅದೇ ಸಮಯದಲ್ಲಿ ಅಮಿತಾಬ್ ಬಚ್ಚನ್ ಅವರಿಗೆ ಚಿಕಿತ್ಸೆ ನಡೆಸಲು 60 ಬಾಟೆಲ್‌ಗಳಷ್ಟು ರಕ್ತದ ಅವಶ್ಯಕತೆ ಇತ್ತು. ರಕ್ತ ನೀಡಲು ಲಕ್ಷಾಂತರ-ಕೋಟ್ಯಂತರ ಅಭಿಮಾನಿಗಳು ತಯಾರಾಗಿದ್ದರು. ಪರೀಕ್ಷೆಗಳನ್ನು ನಡೆಸಿ 200 ವ್ಯಕ್ತಿಗಳಿಂದ 62 ಬಾಟೆಲ್ ನಷ್ಟು ರಕ್ತವನ್ನು ಅಮಿತಾಬ್ ಬಚ್ಚನ್ ದೇಹಕ್ಕೆ ಏರಿಸಲಾಯಿತು.

  ಒಬ್ಬರಿಗೆ ಹೆಪಿಟೈಟಿಸ್ ಬಿ ಸೋಂಕು ಇತ್ತು

  ಒಬ್ಬರಿಗೆ ಹೆಪಿಟೈಟಿಸ್ ಬಿ ಸೋಂಕು ಇತ್ತು

  ಅಮಿತಾಬ್ ಬಚ್ಚನ್‌ ಗೆ ರಕ್ತ ಕೊಟ್ಟ ಆ 200 ಮಂದಿ ಅಭಿಮಾನಿಗಳಲ್ಲಿ ಒಬ್ಬ ವ್ಯಕ್ತಿಗೆ ಹೆಪಿಟೈಟಿಸ್-ಬಿ ಇತ್ತು! ಆ ಸೋಂಕಿತ ರಕ್ತದಿಂದಾಗಿ ಅಮಿತಾಬ್ ಬಚ್ಚನ್‌ ಗೆ ಸಹ ಹೆಪಿಟೈಟಿಸ್-ಬಿ ಆಯಿತು. ಅದು ಹೊಸ ಮಾದರಿಯ ಹೆಪಿಟೈಟಿಸ್-ಬಿ ಆಗಿದ್ದ ಕಾರಣ ಆಗ ಮಾಡಿದ ಪರೀಕ್ಷೆಯಲ್ಲಿ ಅದು ಪತ್ತೆಯಾಗಿರಲಿಲ್ಲ.

  ಹೆಪಿಟೈಟಿಸ್-ಬಿ ಸೋಂಕಿತ ರಕ್ತದಿಂದ ಲಿವರ್‌ಗೆ ಸಮಸ್ಯೆ

  ಹೆಪಿಟೈಟಿಸ್-ಬಿ ಸೋಂಕಿತ ರಕ್ತದಿಂದ ಲಿವರ್‌ಗೆ ಸಮಸ್ಯೆ

  ಹೆಪಿಟೈಟಿಸ್-ಬಿ ಸೋಂಕಿತ ರಕ್ತದಿಂದಾಗಿ ಅಮಿತಾಬ್ ಬಚ್ಚನ್ ಅವರ ಲಿವರ್‌ ಗೆ ತೀವ್ರ ಸಮಸ್ಯೆಯಾಯಿತು. ತಮಗೆ ಸೋಮಕಿತ ರಕ್ತ ನೀಡಲಾಗಿದೆ ಎಂಬ ವಿಷಯವೂ ಸಹ ಅಮಿತಾಬ್ ಅವರಿಗೆ ಹಲವು ವರ್ಷಗಳ ನಂತರ ಗೊತ್ತಾಯಿತು. ಅಷ್ಟರಲ್ಲಾಗಲೆ ಅವರ ಲಿವರ್‌ ನ 75% ಭಾಗ ನಾಶವಾಗಿತ್ತು, ಉಳಿದ 25% ಲಿವರ್‌ನಲ್ಲಿಯೇ ಅವರು ಬದುಕುತ್ತಿದ್ದಾರೆ.

  ಮಾಹಿತಿ ಹೊರಗೆಡವಿದ ಅಮಿತಾಬ್

  ಮಾಹಿತಿ ಹೊರಗೆಡವಿದ ಅಮಿತಾಬ್

  ಇತ್ತೀಚೆಗಷ್ಟೆ ಅಮಿತಾಬ್ ಬಚ್ಚನ್ ಅವರ ಕಣ್ಣು ಸಹ ಮಂಜಾಗಿದೆ. ಈ ಬಗ್ಗೆ ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಅಮಿತಾಬ್ ಬಹಿರಂಗವಾಗಿ ಮಾತನಾಡುತ್ತಾರೆ. ಅಭಿಮಾನಿಗಳೊಂದಿಗೆ ತಮ್ಮ ಆರೋಗ್ಯ ಮಾಹಿತಿಯನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.

  English summary
  Actor Amitabh Bachchan surviving on 25% his liver. Doctors gave him Hepatitis B infection blood while a operation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X