»   » ಅಭಿಮಾನಿಗಳಿಗೆ ನಿರಾಶೆ ಮಾಡಿದ ಬಿಗ್ ಬಿ

ಅಭಿಮಾನಿಗಳಿಗೆ ನಿರಾಶೆ ಮಾಡಿದ ಬಿಗ್ ಬಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸುಮಾರು 2 ದಶಕಗಳ ಹಿಂದೆ ಹಿಂದಿ ಚಿತ್ರರಂಗ ಕ್ರೇಜ್ ಹುಟ್ಟಿಸಿದ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಚಿರಸುಂದರಿ ರೇಖಾ ಮತ್ತೆ ಆನ್ ಸ್ಕ್ರೀನ್ ಒಂದಾಗ್ತಾರಂತೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಥ್ರಿಲ್ ಆಗಿದ್ದ ಅಭಿಮಾನಿಗಳಿಗೆ ಬಿಗ್ ಬಿ ಸಕತ್ ಶಾಕ್ ನೀಡಿದ್ದಾರೆ.

ಅಮಿತಾಬ್ ಬಚ್ಚನ್ ಜತೆ ಕೃಷ್ಣ ಸುಂದರಿ ರೇಖಾ ಒಟ್ಟಿಗೆ ಪ್ರಯಾಣಿಸಿದ್ದಾರೆ ಎಂಬ ಚಿತ್ರಇಂಟರ್ನೆಟ್ ನಲ್ಲಿ ಹರಿದಾಡಿದ ಮೇಲಂತೂ ಸುದ್ದಿಗೆ ರೆಕ್ಕೆ ಪುಕ್ಕ ಹುಟ್ಟಿಕೊಂಡಿತ್ತು. ಈ ಅಮರ ಜೋಡಿಗೆ ಆನ್ ಸ್ಕ್ರೀನ್ ವೆಲ್ ಕಮ್ ಬ್ಯಾಕ್ ಹೇಳಲು ಅನೀಸ್ ಬಾಜ್ಮಿ ಸಿದ್ಧರಾಗಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.

2007ರಲ್ಲಿ ಬಿಡುಗಡೆಯಾದ ವೆಲ್ ಕಮ್ ಚಿತ್ರದ ಸೀಕ್ವೆಲ್ ಚಿತ್ರವನ್ನು ನಿರ್ಮಿಸಲು ನಿರ್ಮಾಪಕ ಫಿರೋಜ್ ನಡಿಯಾಡ್ವಾಲಾ ಹಾಗೂ ನಿರ್ದೇಶಕ ಅನೀಸ್ ಬಾಜ್ಮಿ ಮುಂದಾಗಿದ್ದಾರೆ. ಈ ಚಿತ್ರದಲ್ಲಿ ಬಚ್ಚನ್ ಹಾಗೂ ರೇಖಾ ನಟಿಸಬೇಕೆಂಬುದು ಚಿತ್ರತಂಡದ ಬಯಕೆ, ಚಿತ್ರತಂಡ ಈಗಾಗಲೇ ಅಮಿತಾಭ್ ಬಚ್ಚನ್ ರನ್ನು ಭೇಟಿ ಮಾಡಿ, ಚಿತ್ರದಲ್ಲಿ ನಟಿಸುವಂತೆ ಕೇಳಿಕೊಂಡಿದ್ದಾರೆ. ವೆಲ್ ಕಮ್ ಸೀಕ್ವೆಲ್ ನಲ್ಲಿ ದಿ. ಶ್ರೇಷ್ಠ ನಟ ಫಿರೋಜ್ ಖಾನ್ ನಟಿಸಿದ್ದ ಡಾನ್ ಪಾತ್ರದಲ್ಲಿ ಅಮಿತಾಭ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ರೇಖಾ ಚಿತ್ರವನ್ನು ಒಪ್ಪಿಕೊಂಡ ಪಕ್ಷದಲ್ಲಿ ಶ್ರೀಮಂತ ಮಹಿಳೆ ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿತ್ತು.

Amitabh Bachchan Speaks Up On Working With Rekha!

ಆದರೆ, ಈ ಬಗ್ಗೆ ಮಾತನಾಡಿದ ಅಮಿತಾಬ್ ಬಚ್ಚನ್ ಅವರು 'ನಾನು ಈ ಪಾತ್ರ ಮಾಡುತ್ತಿಲ್ಲ, ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಗಳು ಬಂದಿರುವುದನ್ನು ಗಮನಿಸಿದ್ದೇನೆ.ಆದರೆ, ಅದೆಲ್ಲವೂ ಸತ್ಯಕ್ಕೆ ದೂರವಾದ ಸುದ್ದಿಯಾಗಿದೆ. ಆದರೆ, ಯಾರಾದರೂ ಆತನ(ದಿವಂಗತ ಯಶ್ ರಾಜ್ ) ರೀತಿ ಸಿಕ್ಕಿದರೆ ನನ್ನ ಹೆಸರು ಧೈರ್ಯವಾಗಿ ಸೂಚಿಸಿ ನಾನು ಮನಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಸದ್ಯಕ್ಕಂತೂ ಒಟ್ಟಿಗೆ ನಟಿಸಲು ಸಾಧ್ಯವಿಲ್ಲ' ಎಂದಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಅನೀಸ್ ಬಾಜ್ಮೀ, ಅಮಿತಾಬ್ ಹಾಗೂ ರೇಖಾ ಅವರನ್ನು ಮತ್ತೊಮ್ಮೆ ಒಟ್ಟಿಗೆ ನಟಿಸುವಂತೆ ಮಾಡಲು ಯತ್ನಿಸುತ್ತಿದ್ದೇವೆ. ಅಮಿತಾಬ್ ಏನೋ ಒಪ್ಪಿಗೆ ಸೂಚಿಸಿದ್ದಾರೆ. ನಾನು ರೇಖಾರವರ ಅಭಿಮಾನಿ. ಇದೊಂದು ಹಾಸ್ಯಮಯ ಚಿತ್ರವಾಗಿರುವುದರಿಂದ ಈ ಚಿತ್ರಕ್ಕೆ ರೇಖಾ ಒಪ್ಪುವ ನಿರೀಕ್ಷೆ ಇದೆ. ಆದರೆ, ಇನ್ನೂ ರೇಖಾ ಜೊತೆ ಮಾತಾಡಿಬೇಕು ಎಂದು ಬಾಜ್ಮಿ ಹೇಳಿದ್ದಾರೆ.

ಈ ಹಿಂದೆ ಅಮಿತಾಬ್ ಹಾಗೂ ರೇಖಾ ದೋ ಅಂಜಾನೆ, ಮುಖಾದ್ದರ್ ಕಾ ಸಿಕಂದರ್, ಮಿ.ನಟ್ವರ್ ಲಾಲ್, ಸುಹಾಗ್, ಸಿಲ್ ಸಿಲ್ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದರು. ಜಾನ್ ಅಬ್ರಹಾಂ ಹಾಗೂ ಶ್ರುತಿ ಹಾಸನ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಮೊದಲ ಅವತರಣಿಕೆಯಲ್ಲಿ ಅಕ್ಷಯ್ ಕುಮಾರ್ ಹಾಗೂ ಕತ್ರೀನಾ ಕೈಫ್ ನಟಿಸಿದ್ದರು. ನಾನಾ ಪಾಟೇಕರ್ ಹಾಗೂ ಅನಿಲ್ ಕಪೂರ್ ಅವರು ಎಂದಿನಂತೆ ಉದಯ ಕುಮಾರ್ ಶೆಟ್ಟಿ ಹಾಗೂ ಮಜ್ನು ಭಾಯಿ ಪಾತ್ರದಲ್ಲಿ ಮತ್ತೊಮ್ಮೆ ರಂಜಿಸಲಿದ್ದಾರೆ.

English summary
Amitabh Bachchan- Rekha, who worked last in the movie Silsila, are likely to come together for Anees Bazmee's upcoming comedy film Welcome Back. But, the Big B has reportedly refuted all such claims.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada