For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಬಿಗ್‌ಬಿ ಅಮಿತಾಬ್‌ ಬಚ್ಚನ್‌ಗೆ ಪೆಟ್ಟಾಗಿ ರಕ್ತಸ್ರಾವ: ವೈದ್ಯರು ಹೇಳಿದ್ದೇನು?

  |

  ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ನಟ ಬಿಗ್‌ಬಿ ಅಭಿಮಾನಿಗಳು ಆತಂಕಕ್ಕೆ ಗುರಿಯಾಗುವಂತಾಯಿತು. ತಮಗೆ ಪೆಟ್ಟಾದ ವಿಚಾರವನ್ನು ಬಿಗ್‌ಬಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಬೇಗ ಗುಣಮುಖರಾಗುವಂತೆ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಅವರು ಕ್ಷೇಮವಾಗಿ ಇರಬೇಕೆಂದು ಕೋರುತ್ತಿದ್ದಾರೆ. ಕೌನ್ ಬನೇಗಾ ಕರೋಡ್‌ಪತಿ ಸೆಟ್‌ನಲ್ಲಿ ಕಬ್ಬಿಣದ ತುಂಡು ಕಾಲಿಗೆ ತಗುಲಿ ತೀವ್ರ ರಕ್ತಸ್ರಾವ ಆಗಿದ್ದು, ಕೂಡಲೇ ಸೆಟ್‌ನಲ್ಲಿ ಇದ್ದವರು ಬಿಗ್‌ಬಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವಿಚಾರವನ್ನು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

  ವೈದ್ಯರು ಗಾಯಕ್ಕೆ ಹೊಲಿಗೆ ಹಾಕಿ ಪ್ರಥಮ ಚಿಕಿತ್ಸೆ ಮಾಡಿದ್ದಾರೆ. ಜೊತೆಗೆ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದಾರೆ. ಟ್ರೆಡ್‌ಮಿಲ್ ಮೇಲೆ ಕೂಡ ನಡೆಯದಂತೆ ಹೇಳಿದ್ದು, ಯಾವುದೇ ಒತ್ತಡ ಇಲ್ಲದೇ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಪ್ರಸ್ತುತ ನಾನು ಆರೋಗ್ಯವಾಗಿ ಇದ್ದೀನಿ ಯಾರು ಆತಂಕಪಡಬೇಡಿ ಎಂದು ಅಮಿತಾಬ್ ಬಚ್ಚನ್ ತಿಳಿಸಿದ್ದಾರೆ. ಅಭಿಮಾನಿಗಳು ಶೀಘ್ರ ಗುಣಮುಖರಾಗುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಬಿಗ್‌ಬಿ ಅಮಿತಾಬ್ ಬಚ್ಚನ್ ನಟನೆಯ 'ಬ್ರಹ್ಮಾಸ್ತ್ರ' ಹಾಗೂ 'ಗುಡ್‌ಬೈ' ಸಿನಿಮಾಗಳು ಬಿಡುಗಡೆ ಆಗಿತ್ತು.

  ಕೆಬಿಸಿ 14 ಶೂಟಿಂಗ್‌ನಲ್ಲಿ ಅಮಿತಾಬ್ ಬಚ್ಚನ್ ಭಾಗವಹಿಸಿದ್ದರು. ಹಲವು ವರ್ಷಗಳಿಂದ ಬಿಗ್‌ಬಿ ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಶೂಟಿಂಗ್‌ ವೇಳೆ ಅಚಾನಕ್‌ ಆಗಿ ಕಬ್ಬಿಣದ ತುಂಡು ತಗುಲಿ ಈ ಘಟನೆ ನಡೆದಿದೆ. ಸದ್ಯ ಅಮಿತಾಬ್ ಪ್ರಭಾಸ್ ನಟನೆಯ 'ಪ್ರಾಜೆಕ್ಟ್ - K' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 'ಉಂಚೈ', 'ಗಣಪತ್', 'ಘೂಮೆರ್' ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಮೇಶ್ ಅರವಿಂದ್ ನಿರ್ದೇಶನದ 'ಬಟರ್‌ಫ್ಲೈ' ಕನ್ನಡ ಚಿತ್ರಕ್ಕೆ ಹಾಡೊಂದನ್ನು ಹಾಡಿದ್ದಾರೆ. ಕಾಲಿಗೆ ಪೆಟ್ಟಾಗಿ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿರುವುದರಿಂದ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸುವುದು ತಡವಾಗುತ್ತದೆ.

  English summary
  Amitabh Bachchan Suffered leg injury on sets kaun banega crorepati season 14. on the sets of his KBc 14 cut a vein on his left calve. He was rushed to the hospital and treated with stitches to stop the bleeding. Know More.
  Sunday, October 23, 2022, 18:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X