»   » ಅಭಿಮಾನಿಗಳಿಗೆ ಬೆದರಿಕೆಯೊಡ್ಡಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

ಅಭಿಮಾನಿಗಳಿಗೆ ಬೆದರಿಕೆಯೊಡ್ಡಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Posted By:
Subscribe to Filmibeat Kannada

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅಭಿಮಾನಿಗಳಿಗೆ ಬೆದರಿಕೆಯೊಡ್ಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಬಿಗ್ ಬಿ ಟ್ವಿಟ್ಟರ್ ನಿಂದ ಹೊರಬರುತ್ತೇನೆ ಎಂದು ತಿಳಿಸಿದ್ದಾರೆ.

ಅದಕ್ಕೆ ಕಾರಣ ಕೊಟ್ಟಿರುವ ಅಮಿತಾಬ್, ತಮ್ಮ ಫಾಲೋವರ್ಸ್ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ಟ್ವಿಟ್ಟರ್ ನಿಂದ ಹೊರಬರಲು ನಿರ್ಧರಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದೆಡೆ ಅಮಿತಾಬ್ ಬಚ್ಚನ್ ಅವರಿಗಿಂತ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ. ಸದ್ಯ, ಅಮಿತಾಬ್ ಬಚ್ಚನ್ ಅನುಯಾಯಿಗಳ ಸಂಖ್ಯೆ 3,29,02,353 ಇದ್ರೆ, ಶಾರೂಖ್ ಅನುಯಾಯಿಗಳ ಸಂಖ್ಯೆ 3,29,44,338 ಇದೆ. ಈ ಮೂಲಕ ಟ್ವಿಟ್ಟರ್ ನಲ್ಲಿ ಶಾರೂಕ್ ಖಾನ್ ನಂಬರ್ ವನ್ ಸ್ಥಾನದಲ್ಲಿದ್ದಾರೆ.

ಅದ್ಭುತ ಕಲಾವಿದ ಬಚ್ಚನ್ ಅವರ ಅದ್ಭುತ ಸಿನಿಮಾಗಳ ಜೊತೆ ಒಂದು ಸುತ್ತು

Amitabh Bachchan Threatens To Leave Twitter

ಇತ್ತೀಚೆಗಷ್ಟೇ ಅಮೆರಿಕಾದ ಫೆಡರಲ್ ಮತ್ತು ಸ್ಟೇಟ್ ಏಜೆನ್ಸಿಗಳು ನಕಲಿ ಅನುಯಾಯಿಗಳನ್ನು ಪತ್ತೆಹಚ್ಚಿ ಕ್ರಮ ತೆಗೆದುಕೊಳ್ಳಲು ಮುಂದಾಗಿತ್ತು. ಬಹುಶಃ ಈ ಕಾರಣದಿಂದ ಅಮಿತಾಬ್ ಫಾಲೋವರ್ಸ್ ಕಡಿಮೆ ಆಗಿರಬಹುದು ಎನ್ನಲಾಗಿದೆ.

English summary
Bollywood star Shah Rukh Khan clocked in his 32.9million followers on Twitter, megastar Amitabh Bachchan took to Twitter to post a tweet threatening to quit the social networking platform.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada