»   » 'ಗೂಗ್ಲಿ' ಸುಂದರಿ ಕೃತಿ ಕರಬಂಧ ಚಿತ್ರಕ್ಕೆ ಶುಭ ಕೋರಿದ ಬಚ್ಚನ್

'ಗೂಗ್ಲಿ' ಸುಂದರಿ ಕೃತಿ ಕರಬಂಧ ಚಿತ್ರಕ್ಕೆ ಶುಭ ಕೋರಿದ ಬಚ್ಚನ್

Posted By:
Subscribe to Filmibeat Kannada

'ಗೂಗ್ಲಿ' ಚೆಲುವೆ ನಟಿ ಕೃತಿ ಕರಬಂಧ ಈಗ ಬಾಲಿವುಡ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಅವರ ಹೊಸ ಸಿನಿಮಾ 'ಶಾದಿ ಮೇ ಜರೂರ್ ಆನಾ' (Shaadi Mein Zaroor Aana) ಚಿತ್ರಕ್ಕೆ ಇದೀಗ ಬಿಗ್ ಬಿ ಅಮಿತಾಭ್ ಬಚ್ಚನ್ ಶುಭ ಕೋರಿದ್ದಾರೆ.

ಬಚ್ಚನ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಚಿತ್ರಕ್ಕೆ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಸಿನಿಮಾದ ಒಂದು ಹಾಡನ್ನು ಸಹ ಪೋಸ್ಟ್ ಮಾಡಿದ್ದಾರೆ. ಇನ್ನು ಇದು ಕೃತಿ ಕರಬಂಧ ಅವರ ಮೂರನೇ ಬಾಲಿವುಡ್ ಸಿನಿಮಾಗಿದೆ. ಇಲ್ಲಿ ರಾಜ್ ಕುಮಾರ್ ರಾವ್ ಜೋಡಿಯಾಗಿ ಕೃತಿ ನಟಿಸಿದ್ದಾರೆ. ಚಿತ್ರದಲ್ಲಿ ಸಖತ್ ಕ್ಯೂಟ್ ಆಗಿ ಕೃತಿ ಕಾಣಿಸಿಕೊಂಡಿದ್ದಾರೆ.

Amitabh Bachchan wishes 'Shaadi Mein Zaroor Aana' movie.

ಈಗಾಗಲೇ 'ಶಾದಿ ಮೇ ಜರೂರ್ ಆನಾ' (Shaadi Mein Zaroor Aana) ಚಿತ್ರ ಟ್ರೇಲರ್ ಮೂಲಕ ನಿರೀಕ್ಷೆಯನ್ನು ಹುಟ್ಟಿಸಿದೆ. ರತ್ನ ಸಿನ್ಹಾ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ನವೆಂಬರ್ 10ಕ್ಕೆ ಸಿನಿಮಾ ದೇಶದ್ಯಾಂತ ಬಿಡುಗಡೆ ಆಗಲಿದೆ.

English summary
Amitabh Bachchan has taken his twitter account to wish 'Shaadi Mein Zaroor Aana' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada