For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯ ರೈ ಅಪರೂಪದ ಫೋಟೋ ಹಂಚಿಕೊಂಡ ಆಮಿ ಜಾಕ್ಸನ್

  |

  ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಮತ್ತು ಅವರ ತಾಯಿ ವೃಂದಾ ಒಟ್ಟಿಗೆ ಊಟ ಮಾಡುತ್ತಿರುವ ಫೋಟೋವೊಂದು ವೈರಲ್ ಆಗಿದೆ. 1994ರಲ್ಲಿ ಐಶ್ವರ್ಯ ವಿಶ್ವ ಸುಂದರಿ ಪಟ್ಟ ಗೆದ್ದ ಸಂದರ್ಭದಲ್ಲಿ ಕ್ಲಿಕ್ಕಿಸಿರುವ ಫೋಟೋ ಇದಾಗಿದ್ದು, ನೆಲೆದ ಮೇಲೆ ಕೂತು ಐಶ್ ಮತ್ತು ತಾಯಿ ಭೋಜನ ಸೇವಿಸುತ್ತಿದ್ದಾರೆ.

  ಅಂದ್ಹಾಗೆ, ಈ ಫೋಟೋವನ್ನು ನಟಿ ಆಮಿ ಜಾಕ್ಸನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಸ್ಟೋರಿಸ್‌ನಲ್ಲಿ ಹಂಚಿಕೊಂಡಿದ್ದು, ''ಕ್ವೀನ್'' ಎಂದು ಕರೆದಿದ್ದಾರೆ. ಐಶ್ವರ್ಯ ರೈ ಫೋಟೋ ಶೇರ್ ಮಾಡಿ 'ಫಾರ್‌ ಎವರ್ ಫೇವರಿಟ್' ಎಂದು ಪೋಸ್ಟ್‌ನಲ್ಲಿ ಕ್ಯಾಪ್ಸನ್ ಹಾಕಿದ್ದಾರೆ.

  'ದಿ ವಿಲನ್' ನಟಿಯ ಹಾಟ್ ಫೋಟೋ ವೈರಲ್: ಬಿಕಿನಿ ಧರಿಸಿ ಪೋಸ್ ನೀಡಿದ ಆಮಿ ಜಾಕ್ಸನ್'ದಿ ವಿಲನ್' ನಟಿಯ ಹಾಟ್ ಫೋಟೋ ವೈರಲ್: ಬಿಕಿನಿ ಧರಿಸಿ ಪೋಸ್ ನೀಡಿದ ಆಮಿ ಜಾಕ್ಸನ್

  ಯುಕೆಯಲ್ಲಿ ಆಮಿ ಜಾಕ್ಸನ್

  ಪ್ರಸ್ತುತ, ಆಮಿ ಜಾಕ್ಸನ್ ತನ್ನ ಬಾಯ್ ಫ್ರೆಂಡ್ ಜೊತೆ ಜಾರ್ಜ್ ಪನಯೌಟು ಹಾಗೂ ಮಗನ ಜೊತೆ ಯುಕೆಯಲ್ಲಿದ್ದಾರೆ. 2019ರ ಸೆಪ್ಟೆಂಬರ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಆಮಿ ತದನಂತರ ಯಾವ ಸಿನಿಮಾಗಳಲ್ಲಿಯೂ ನಟಿಸಿಲ್ಲ. ಆದರೆ, ಭಾರತದಲ್ಲಿ ನಡೆಯುವ ಘಟನೆಗಳೊಂದಿಗೆ ಆಮಿ ಸಂಪರ್ಕದಲ್ಲಿದ್ದಾರೆ.

  ಶಂಕರ್ ನಿರ್ದೇಶನದ 2.0 ಸಿನಿಮಾದಲ್ಲಿ ಆಮಿ ಜಾಕ್ಸನ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯಿಸಿದ್ದರು.

  ಮಣಿರತ್ನಂ ಸಿನಿಮಾದಲ್ಲಿ ಐಶ್

  Recommended Video

  ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಟ ನಟಿಯಾದ ಹರಿಪ್ರಿಯಾ | Filmibeat Kannada

  2018ರಲ್ಲಿ ಬಿಡುಗಡೆಯಾದ ಫೆನ್ನಿ ಖಾನ್ ಸಿನಿಮಾದಲ್ಲಿ ಐಶ್ವರ್ಯ ರೈ ಕೊನೆಯದಾಗಿ ಬಣ್ಣ ಹಚ್ಚಿದ್ದರು. ಸದ್ಯ ಮಣಿರತ್ನಂ ನಿರ್ದೇಶನದ 'ಪೊನ್ನಿಯನ್ ಸೆಲ್ವನ್' ಸಿನಿಮಾದಲ್ಲಿ ನಟಿಸಿದ್ದಾರೆ. ಅದರ ಜೊತೆಗೆ 'ಮೊಘಲ್' ಎಂಬ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

  English summary
  Actress Amy Jackson shared Aishwarya Rai Bachchan rare photo and she called Queen.
  Thursday, July 8, 2021, 15:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X