twitter
    For Quick Alerts
    ALLOW NOTIFICATIONS  
    For Daily Alerts

    ವಂಚನೆ ಪ್ರಕರಣ: ಸಂಕಷ್ಟದಲ್ಲಿ ಶಿಲ್ಪಾ ಶೆಟ್ಟಿ ಮತ್ತು ಕುಟುಂಬ

    |

    ನಟಿ ಶಿಲ್ಪಾ ಶೆಟ್ಟಿ ಕಳೆದ ವರ್ಷ ಸಾಕಷ್ಟು ಕಷ್ಟ ಅನುಭವಿಸಿದರು. ಪತಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ಪ್ರಸಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಶಿಲ್ಪಾ ಶೆಟ್ಟಿ ವಿರುದ್ಧವೂ ಹಲವು ಆರೋಪಗಳು ಕೇಳಿ ಬಂದಿದ್ದವು.

    ರಾಜ್ ಕುಂದ್ರಾ ಜೈಲು ಪಾಲಾಗಿದ್ದಾಗ ಆಳಿಗೊಂದರಂತೆ ಶಿಲ್ಪಾ ಶೆಟ್ಟಿ ಹಾಗೂ ಕುಟುಂಬದ ವಿರುದ್ಧ ಕಲ್ಲು ಒಗೆಯಲಾಯಿತು. ಹಲವು ಪ್ರಕರಣಗಳು ಈ ಹಂತದಲ್ಲಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಹಾಗೂ ಕುಟುಂಬದ ಮೇಲೆ ದಾಖಲಾದವು.

    ರಾಜ್ ಕುಂದ್ರಾ ಜೈಲಿನಲ್ಲಿದ್ದ ಸಮಯದಲ್ಲಿಯೇ ಶಿಲ್ಪಾ ಶೆಟ್ಟಿ ಹಾಗೂ ಕುಟುಂಬದ ವಿರುದ್ಧ ಉದ್ಯಮಿಯೊಬ್ಬ ಪ್ರಕರಣ ದಾಖಲಿಸಿದ್ದು ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

    Andheri Court Issue Summons To Shilpa Shetty And Family In A Cheating Case
    ರಾಜ್ ಕುಂದ್ರಾ ಜೈಲಿನಲ್ಲಿದ್ದ ಸಂದರ್ಭದಲ್ಲಿ ಉದ್ಯಮಿಯೊಬ್ಬ ಶಿಲ್ಪಾ ಶೆಟ್ಟಿ, ಸಹೋದರಿ ಶಮಿತಾ ಶೆಟ್ಟಿ ಹಾಗೂ ತಾಯಿ ಸುನಂದಾ ಶೆಟ್ಟಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದ. 21 ಲಕ್ಷ ರುಪಾಯಿ ಸಾಲವನ್ನು ಹಿಂತಿರುಗಿಸದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

    ಪ್ರಕರಣದ ವಿಚಾರಣೆ ಮುಂಬೈನ ಅಂಧೇರಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿತ್ತು. ಇದೀಗ ನ್ಯಾಯಾಲಯವು ಶಿಲ್ಪಾ, ಶಮಿತಾ ಹಾಗೂ ತಾಯಿ ಸುನಂದಾಗೆ ಸಮನ್ಸ್ ಜಾರಿ ಮಾಡಿದ್ದು, ಫೆಬ್ರವರಿ 28 ರ ಒಳಗಾಗಿ ಈ ಮೂವರೂ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಸೂಚಿಸಿದೆ.

    ಫರ್ಹಾದ್ ಅಮ್ರ ಹೆಸರಿನ ಉದ್ಯಮಿ ಜುಹು ಪೊಲೀಸ್ ಠಾಣೆಯಲ್ಲಿ ಶಿಲ್ಪಾ ಹಾಗೂ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ್ದರು. 2015 ರಲ್ಲಿ ಶಿಲ್ಪಾ ಶೆಟ್ಟಿಯ ತಂದೆ 21 ಲಕ್ಷ ರುಪಾಯಿ ಸಾಲ ಪಡೆದಿದ್ದು, ಸಾಲವನ್ನು 2017 ರಲ್ಲಿ ತೀರಿಸಬೇಕಿತ್ತು ಆದರೆ ತೀರಿಸಿಲ್ಲ. ಇದೀಗ ಅವರ ಮಕ್ಕಳಾದ ಶಿಲ್ಪಾ, ಶಮಿತಾ ಹಾಗೂ ತಾಯಿ ಪಂಕಜಾ ಆ ಸಾಲವನ್ನು ತೀರಿಸಬೇಕಿದೆ. ಆದರೆ ತಾವು ಸಾಲ ತೀರಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಹಾಗಾಗಿ ಉದ್ಯಮಿ ಪರ್ಹಾದ್ ಅಮ್ರ ಶಿಲ್ಪಾ ಶೆಟ್ಟಿ ಹಾಗೂ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ.

    ಇದು ಮಾತ್ರವೇ ಅಲ್ಲದೆ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ವಿರುದ್ಧ ಇನ್ನೂ ಕೆಲವು ವಂಚನೆ ಪ್ರಕರಣಗಳು ಕಳೆದ ವರ್ಷ ದಾಖಲಾಗಿವೆ. ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ ಜಂಟಿಯಾಗಿ ಆರಂಭಿಸಿದ್ದ ಚಿನ್ನದ ಉದ್ಯಮದ ಕುರಿತು ಕೆಲವು ಪ್ರಕರಣಗಳು ದಾಖಲಾಗಿವೆ.

    ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ ಜೊತೆಯಾಗಿ ಆರಂಭಿಸಿದ್ದ ಫಿಟ್‌ನೆಸ್ ಸೆಂಟರ್ ಬಗ್ಗೆಯೂ 1.51 ಕೋಟಿ ವಂಚನೆ ಪ್ರಕರಣ ದಾಖಲಾಗಿದೆ. ಉದ್ಯಮಿ ನಿತಿನ್ ಬರಾರಿ ಎಂಬುವರು ಈ ದೂರು ದಾಖಲಿಸಿದ್ದಾರೆ.

    ದೆಹಲಿ ಮೂಲದ ಉದ್ಯಮಿಯೊಬ್ಬ ಸಹ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಈ ದಂಪತಿ ತಮಗೆ 41 ಲಕ್ಷ ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ತಮ್ಮನ್ನು ಬಲವಂತ ಪಡಿಸಿ 41.30 ಲಕ್ಷ ಹಣವನ್ನು ತಮ್ಮ ಸಂಸ್ಥೆಯಲ್ಲಿ ಹೂಡಿಕೆ ಮಾಡುವಂತೆ ಮಾಡಿದರು. ಮತ್ತು ಆ ಹಣವನ್ನು ತಮ್ಮ ವೈಯಕ್ತಿಕ ಖರ್ಚುಗಳಿಗೆ ಬಳಸಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ. ಹೀಗೆ ಹಲವು ಉದ್ಯಮಿಗಳು, ಖಾಸಗಿ ವ್ಯಕ್ತಿಗಳು ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ವಿರುದ್ಧ ದೂರು ನೀಡಿದ್ದಾರೆ.

    ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಜುಲೈ 19ರಂದು ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಮುಂಬೈನಲ್ಲಿ ಸ್ಥಳೀಯ ನಟಿಯರಿಂದ ಅಶ್ಲೀಲ ವಿಡಿಯೋ ಚಿತ್ರೀಕರಿಸಿಕೊಂಡು ಅದನ್ನು ಲಂಡನ್‌ನಲ್ಲಿರುವ ತಮ್ಮ ಸಂಬಂಧಿಯೊಬ್ಬರ ಸಂಸ್ಥೆಯ ಮೂಲಕ ಹಾಟ್‌ಶಾಟ್ಸ್ ಹೆಸರಿನ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಿಸುತ್ತಿದ್ದರು, ಆ ಮೂಲಕ ದಿನಕ್ಕೆ ಲಕ್ಷಾಂತರ ಹಣವನ್ನು ರಾಜ್ ಕುಂದ್ರಾ ಗಳಿಸುತ್ತಿದ್ದರು ಎಂದು ಮುಂಬೈ ಪೊಲೀಸರು ಆರೋಪ ಮಾಡಿದ್ದರು. ಪ್ರಕರಣದಲ್ಲಿ ರಾಜ್ ಕುಂದ್ರಾಗೆ ಜಾಮೀನು ದೊರೆತಿದೆ.

    English summary
    Mumbai's Andheri court issues summons to actress Shilpa Shetty her sister Shamita Shetty and mother Sunanda Sheety in a cheating case.
    Sunday, February 13, 2022, 16:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X