For Quick Alerts
  ALLOW NOTIFICATIONS  
  For Daily Alerts

  ಡ್ಯಾನ್ಸ್ ಪ್ರ್ಯಾಕ್ಟೀಸ್ ಅಂತ ಕರೆದು ಹಾಸಿಗೆ ಮೇಲೆ ಎಸೆದ: ಗಣೇಶ್ ಆಚಾರ್ಯ ವಿರುದ್ಧ ಸಿಡಿದ ನೃತ್ಯಗಾರ್ತಿ.!

  |

  ಬಾಲಿವುಡ್ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ವಿರುದ್ಧ ಮತ್ತೊಂದು ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. 90 ರ ದಶಕದಲ್ಲಿ ''ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ನನಗೆ ಲೈಂಗಿಕ ಕಿರುಕುಳ ನೀಡಿದ್ದರು'' ಎಂದು ಆರೋಪಿಸಿ ಹಿರಿಯ ಬ್ಯಾಕ್ ಗ್ರೌಂಡ್ ನೃತ್ಯಗಾರ್ತಿ ರಾಷ್ಟ್ರೀಯ ಮಹಿಳಾ ಆಯೋಗದ ಮೆಟ್ಟಿಲೇರಿದ್ದಾರೆ.

  ಕಳೆದ ಒಂದು ವಾರದಲ್ಲಿ ಗಣೇಶ್ ಆಚಾರ್ಯ ವಿರುದ್ಧ ಕೇಳಿಬರುತ್ತಿರುವ ಎರಡನೇ ಲೈಂಗಿಕ ಕಿರುಕುಳದ ಆರೋಪ ಇದು. ''ಅಶ್ಲೀಲ ವಿಡಿಯೋಗಳನ್ನು ನೋಡುವಂತೆ ಗಣೇಶ್ ಆಚಾರ್ಯ ಒತ್ತಾಯಿಸುತ್ತಿದ್ದರು'' ಎಂದು ಕಳೆದ ವಾರ 33 ವರ್ಷದ ಮಹಿಳೆ ದೂರು ನೀಡಿದ್ದರು.

  ಇದನ್ನು ಗಮನಿಸಿದ ಹಿರಿಯ ಬ್ಯಾಕ್ ಗ್ರೌಂಡ್ ನೃತ್ಯಗಾರ್ತಿ, ಮೂರು ದಶಕಗಳ ಹಿಂದೆ ಗಣೇಶ್ ಆಚಾರ್ಯ ಕಡೆಯಿಂದ ತಮಗೆ ಆದ ಕರಾಳ ಅನುಭವವನ್ನು ಬಿಚ್ಚಿಟ್ಟು, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ಮುಂದೆ ಓದಿರಿ..

  ಮೂರು ದಶಕಗಳ ಹಿಂದಿನ ಘಟನೆ

  ಮೂರು ದಶಕಗಳ ಹಿಂದಿನ ಘಟನೆ

  ''ಈ ಘಟನೆ ನಡೆದಿದ್ದು ಮೂರು ದಶಕಗಳ ಹಿಂದೆ. ನನಗೀಗ ಮದುವೆ ಆಗಿ ಮಕ್ಕಳಿದ್ದಾರೆ. ಆದ್ರೆ, ಗಣೇಶ್ ಆಚಾರ್ಯ ವರ್ತನೆ ಮಾತ್ರ ಸ್ವಲ್ಪವೂ ಬದಲಾಗಿಲ್ಲ. ಇತ್ತೀಚೆಗಷ್ಟೇ ಅವರ ವಿರುದ್ಧ ಎಫ್.ಐ.ಆರ್ ಒಂದು ದಾಖಲಾಗಿತ್ತು. ಅದನ್ನ ಕಂಡು ನಾನು ದನಿ ಎತ್ತಬೇಕು ಎನಿಸಿತು'' ಎಂದು ಆ ಹಿರಿಯ ಬ್ಯಾಕ್ ಗ್ರೌಂಡ್ ನೃತ್ಯಗಾರ್ತಿ ಹೇಳಿದ್ದಾರೆ.

  'ಪೈಲ್ವಾನ್' ಡ್ಯಾನ್ಸ್ ಮಾಸ್ಟರ್ ಗಣೇಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ'ಪೈಲ್ವಾನ್' ಡ್ಯಾನ್ಸ್ ಮಾಸ್ಟರ್ ಗಣೇಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

  ಕರಾಳ ಅನುಭವದ ಬಗ್ಗೆ ಮಾತು

  ಕರಾಳ ಅನುಭವದ ಬಗ್ಗೆ ಮಾತು

  ''1990 ರಲ್ಲಿ ಪಶ್ಚಿಮ ಅಂಧೇರಿಯಲ್ಲಿರುವ ಸಾಹಿಬಾ ಹಾಲ್ ಗೆ ಡ್ಯಾನ್ಸ್ ಕ್ಲಾಸ್ ಗೆಂದು ಹೋಗುತ್ತಿದ್ದೆ. ಗಣೇಶ್ ಆಚಾರ್ಯ ಆಗ ಕಮಲ್ ಮಾಸ್ಟರ್ ಗೆ ಅಸಿಸ್ಟೆಂಟ್ ಆಗಿದ್ದರು. ನನಗಾಗ 18 ವರ್ಷ. ಒಂದು ದಿನ ಡ್ಯಾನ್ಸ್ ಕ್ಲಾಸ್ ಗೆಂದು ಗಣೇಶ್ ಆಚಾರ್ಯ ನನ್ನನ್ನ ಕರೆದರು. ಆಗಲೇ ಕರಾಳ ಅನುಭವ ಆಗಿದ್ದು'' ಎಂದು ತಮಗಾದ ಕಹಿ ಘಟನೆಯನ್ನು ಹಿರಿಯ ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಬಹಿರಂಗ ಪಡಿಸಿದ್ದಾರೆ.

  ಹಾಸಿಗೆ ಮೇಲೆ ಎಸೆದಿದ್ದ

  ಹಾಸಿಗೆ ಮೇಲೆ ಎಸೆದಿದ್ದ

  ''ಅವತ್ತು, ಗಣೇಶ್ ಆಚಾರ್ಯ ಅಸಿಸ್ಟೆಂಟ್ ದಿಲಿಪ್ ನನ್ನನ್ನ ಹೋಟೆಲ್ ಈಸ್ಟ್ ಅಂಡ್ ವೆಸ್ಟ್ ಗೆ ಡ್ರಾಪ್ ಮಾಡಿದರು. ಅಲ್ಲಿ ಡ್ಯಾನ್ಸ್ ಕ್ಲಾಸ್ ಗಾಗಿ ಬೇರೆ ಯಾರೂ ಬಂದಿರಲಿಲ್ಲ. ಆಗ ಡ್ಯಾನ್ಸ್ ಪ್ರ್ಯಾಕ್ಟೀಸ್ ಮಾಡುವ ನೆಪದಲ್ಲಿ ಗಣೇಶ್ ಆಚಾರ್ಯ ನನ್ನನ್ನ ಚುಂಬಿಸಿದರು. ನಾನು ಒಲ್ಲೆ ಎಂದಾಗ ಹಾಸಿಗೆ ಮೇಲೆ ಎಸೆದರು'' ಎಂದಿದ್ದಾರೆ ಬ್ಯಾಕ್ ಗ್ರೌಂಡ್ ನೃತ್ಯಗಾರ್ತಿ.

  ಮೂಡು ಹಾಳಾಯ್ತಂತೆ.!

  ಮೂಡು ಹಾಳಾಯ್ತಂತೆ.!

  ''ನಿನ್ನನ್ನ ಪ್ರೀತಿಸ್ತೀನಿ, ಮದುವೆ ಆಗ್ತೀನಿ ಅಂತ ಹೇಳಿ ಅಸಭ್ಯವಾಗಿ ವರ್ತಿಸಿದರು. ನಾನು ಭಯದಿಂದ ಋತುಸ್ರಾವ ಆಗಿದೆ ಎಂದೆ. ಆಗ ಆತ ನನ್ನನ್ನ ಬಿಟ್ಟು, ''ಏನಮ್ಮ.. ಮೂಡು ಹಾಳು ಮಾಡಿದ್ಯಲ್ಲ..'' ಅಂತ ಹೇಳಿದ'' ಎಂದು ಹಿರಿಯ ಬ್ಯಾಕ್ ಗ್ರೌಂಡ್ ನೃತ್ಯಗಾರ್ತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  ಗಣೇಶ್ ಆಚಾರ್ಯ ಏನಂತಾರೆ.?

  ಗಣೇಶ್ ಆಚಾರ್ಯ ಏನಂತಾರೆ.?

  ''ಕೆಲವರು ನನ್ನ ಇಮೇಜ್ ಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವರ ವಿರುದ್ಧ ನಾನು ನಿಂತಿದ್ರಿಂದ ಹೀಗೆ ಆಗುತ್ತಿದೆ. ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವವರ ಬಣ್ಣ ಬಯಲಾಗುತ್ತದೆ'' ಎನ್ನುವ ಮೂಲಕ ತಮ್ಮ ಮೇಲೆ ಬಂದಿರುವ ಎಲ್ಲಾ ಆರೋಪಗಳನ್ನು ಗಣೇಶ್ ಆಚಾರ್ಯ ನಿರಾಕರಿಸಿದ್ದಾರೆ.

  English summary
  Another sexual abuse: Ganesh Acharya threw her on bed says senior background dancer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X