»   » ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವತಾರದಲ್ಲಿರುವ ಈ ನಟ ಯಾರು.?

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವತಾರದಲ್ಲಿರುವ ಈ ನಟ ಯಾರು.?

Posted By:
Subscribe to Filmibeat Kannada

ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತು ಹೊಸ ಸಿನಿಮಾ ಮೂಡಿ ಬರುತ್ತಿದ್ದು, ಈ ಚಿತ್ರದ ಹೊಸ ಪೋಸ್ಟರ್ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಚಿತ್ರಕ್ಕೆ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಎಂದು ಹೆಸರಿಟ್ಟಿದ್ದು, ದೇಶದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ.

ಸೇಮ್ ಮನಮೋಹನ್ ಸಿಂಗ್ ಅವರಂತೆ ಕಾಸ್ಟ್ಯೂಮ್ ತೊಟ್ಟು, ಅವರಂತೆ ಮ್ಯಾನಸರಿಂನಲ್ಲಿ ಕೈ ಮುಗಿಯುತ್ತಾ ಸೂಪರ್ ಆಗಿ ಫೋಸ್ ಕೊಟ್ಟಿದ್ದಾರೆ ಈ ನಟ. ಮನಮೋಹನ್ ಸಿಂಗ್ ಅವರ ಭಾವಚಿತ್ರ ಮತ್ತು ಈ ಚಿತ್ರದ ಪೋಸ್ಟರ್ ಎರಡನ್ನ ಇಟ್ಟು ನೋಡಿದ್ರೆ ಯಾವುದೇ ವ್ಯತ್ಯಾಸ ಕಾಣುವುದಿಲ್ಲ.

ಈ ಫೊಸ್ಟರ್ ನೋಡಿದ್ರೆ ಖಂಡಿತಾ ಇವರು ಯಾರು ಎಂಬುದು ಕಂಡುಹಿಡಿಯುವುದು ಸ್ವಲ್ಪ ಕಷ್ಟವೇ ಆಗಬಹುದು. ಹೋಗ್ಲಿ ಬಿಡಿ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರದಲ್ಲಿ ಮನಮೋಹನ್ ಸಿಂಗ್ ಆಗಿರುವುದು ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್. ಈ ಚಿತ್ರದ ಬಗ್ಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.....

ಮನಮೋಹನ್ ಸಿಂಗ್ ಆದ ಅನುಪಮ್ ಖೇರ್

'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರದಲ್ಲಿ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಆಗಿ ಕಾಣಿಸಿಕೊಂಡಿರುವುದು ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್. ಈಗಾಗಲೇ ಅನುಪಮ್ ಖೇರ್ ಅವರ ಪೋಸ್ಟರ್ ಗಳು ಗಮನ ಸೆಳೆಯುತ್ತಿದೆ.

ಮನಮೋಹನ್ ಸಿಂಗ್ ಕುರಿತು ಸಿನಿಮಾ, ಸೋನಿಯಾ ಪಾತ್ರದಲ್ಲಿ ಯಾರು?

ವಿವಾದಾತ್ಮಕ ಪುಸ್ತಕ ಆಧರಿತ ಕಥೆ

ಮನಮೋಹನ್ ಸಿಂಗ್ ಅವರ ಆಡಳಿತಾವಧಿ 2004-2008ರ ವರೆಗೂ ಮಾಧ್ಯಮ ಸಲಹಗಾರರಾಗಿದ್ದ ಸಂಜಯ್ ಬರು ಅವರು ಬರೆದಿರುವ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಪುಸ್ತಕ ಈಗ ಸಿನಿಮಾ ರೂಪ ಪಡೆಯುತ್ತಿದೆ. ಈ ಪುಸ್ತಕ ಬಿಡುಗಡೆಯಾದಾಗ ಬಾರಿ ವಿರೋಧ ವ್ಯಕ್ತವಾಗಿತ್ತು. ರಾಷ್ಟ್ರ ಮಟ್ಟದಲ್ಲಿ ವಿವಾದ ಹುಟ್ಟುಹಾಕಿತ್ತು. ಈ ವಿವಾದಾತ್ಮಕ ಪುಸ್ತಕದ ಪ್ರತಿರೂಪವೇ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಸಿನಿಮಾ.

'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರದಲ್ಲಿ ಏನಿರಲಿದೆ.?

ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಪ್ರಧಾನಿ ಪಟ್ಟ ಬಯಸದೇ ಬಂದ ಭಾಗ್ಯ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವನ್ನು ಮುನ್ನಡೆಸುವ ಅವಕಾಶ ಸಿಗುತ್ತದೆ ಎಂಬುದು ಅವರಿಗೆ ಹಿಂದಿನ ದಿನದವರೆಗೂ ತಿಳಿದಿರಲಿಲ್ಲ. ಮನಮೋಹನ್ ಸಿಂಗ್ ಪ್ರಧಾನಿ ಆದ ನಂತರ ಅವರ ಕಾರ್ಯ ವೈಖರಿ ಹೇಗಿತ್ತು? ಮನಮೋಹನ್ ಸಿಂಗ್ ಅವರು ಯಾಕೆ ಯುಪಿಎ ಸರ್ಕಾರದ ಕೈಗೊಂಬೆಯಾಗಿದ್ದರು? ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರಿಗೆ ಸರ್ಕಾರಿ ಗೌರವದಿಂದ ಅಂತ್ಯಸಂಸ್ಕಾರ ನಡೆಸಲಿಲ್ಲ ಏಕೆ? ಎಂಬ ವಿಷಯಗಳು ಸೇರಿದಂತೆ ಹಲವು ಕುತೂಹಲಕಾರಿ ಸಂಗತಿಗಳು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆಯಂತೆ.

ಸೋನಿಯಾ-ರಾಹುಲ್ ಇರಬಹುದು.?

ಇನ್ನು ಮನಮೋಹನ್ ಸಿಂಗ್ ಸಿನಿಮಾ ಅಂದ್ಮೇಲೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಸ್ತುತ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪಾತ್ರ ಪ್ರಮುಖವಾದದು. ಸೋನಿಯಾ ಗಾಂಧಿ ಪಾತ್ರದಲ್ಲಿ ಜರ್ಮನ್ ನಟಿಯೊಬ್ಬರು ನಟಿಸುತ್ತಿದ್ದಾರೆ. ರಾಹುಲ್ ಗಾಂಧಿ ಪಾತ್ರದಲ್ಲಿ ಯಾರು ಎಂಬುದು ಬಹಿರಂಗವಾಗಿಲ್ಲ.

ಯಾವಾಗ ಸಿನಿಮಾ ತೆರೆಗೆ ಬರುತ್ತೆ.?

12ಕ್ಕೂ ಹೆಚ್ಚು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎನ್ನಲಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಹನ್ಸಲ್ ಮೆಹ್ತಾ ಚಿತ್ರಕಥೆ ಬರೆಯುತ್ತಿದ್ದು, ವಿಜಯ ರತ್ನಾಕರ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಗೂ ಮುಂಚೆ ಈ ಚಿತ್ರವನ್ನ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಈ ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಆಗಬಹುದು ಎನ್ನಲಾಗಿದೆ.

English summary
The Accidental Prime Minister, a political drama based on the book by Sanjaya Baru and with veteran actor Anupam Kher in the lead role has commenced principal photography in London.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X