For Quick Alerts
  ALLOW NOTIFICATIONS  
  For Daily Alerts

  ಅನುಪಮ್ ಖೇರ್ ಕುಟುಂಬದ ನಾಲ್ಕು ಮಂದಿಗೆ ಕೊರೊನಾ

  |

  ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರ ಕುಟುಂಬದ ನಾಲ್ಕು ಮಂದಿಗೆ ಕೊರೊನಾ ಸೋಂಕು ಧೃಡಪಟ್ಟಿದೆ.

  ಇವತ್ತಿಗೂ ನಾನು ಶಿವಣ್ಣ ಇಬ್ರೇ ವಾಕ್ ಮಾಡೋದು | Raghu ram| Shiva Rajkumar | Filmibeat Kannada

  ನಿನ್ನೆಯಷ್ಟೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರಿಗೆ ಕೊರೊನಾ ದೃಢಪಟ್ಟಿದೆ ಅದರ ಬೆನ್ನಲ್ಲೆ ಇಂದು ಅನುಪಮ್ ಖೇರ್ ಕುಟುಂಬ ಸದಸ್ಯರಿಗೆ ಸೋಂಕಿರುವುದು ದೃಢಪಟ್ಟಿದೆ. ಅನುಪಮ್ ಖೇರ್ ಅವರಿಗೆ ಕೊರೊನಾ ಸೋಂಕು ನೆಗೆಟಿವ್ ವರದಿ ಬಂದಿದೆ.

  ಅಮಿತಾಬ್-ಅಭಿಷೇಕ್ ಬಚ್ಚನ್ ಪಾಸಿಟಿವ್, ಐಶ್ವರ್ಯಾ ರೈ-ಜಯಾ ಬಚ್ಚನ್ ಗೆ ನೆಗೆಟಿವ್ಅಮಿತಾಬ್-ಅಭಿಷೇಕ್ ಬಚ್ಚನ್ ಪಾಸಿಟಿವ್, ಐಶ್ವರ್ಯಾ ರೈ-ಜಯಾ ಬಚ್ಚನ್ ಗೆ ನೆಗೆಟಿವ್

  ಅನುಪಮ್ ಖೇರ್ ಅವರ ವಯಸ್ಸಾದ ತಾಯಿ ದುಲ್ಹಾರಿ, ಅನುಪಮ್ ಖೇರ್ ಅವರ ಸಹೋದರ ರಾಜು ಮತ್ತು ಸಹೋದರನ ಮಡದಿ ರೀಮಾ ಹಾಗೂ ಅವರ ಮಗಳಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.

  ಅನುಪಮ್ ಕೇರ್ ಟ್ವೀಟ್

  ಅನುಪಮ್ ಕೇರ್ ಟ್ವೀಟ್

  ಟ್ವಿಟ್ಟರ್ ಮೂಲಕ ಈ ವಿಷಯವನ್ನು ಖಾತ್ರಿಪಡಿಸಿರುವ ಅನುಪಮ್ ಖೇರ್, ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದರೂ ಸಹ ತಾಯಿ, ಸಹೋದರ, ಆತನ ಪತ್ನಿ ಮತ್ತು ಮಗಳಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ ಎಂದಿದ್ದಾರೆ.

   ಕುಟುಂಬ ಆತಂಕದಲ್ಲಿದೆ

  ಕುಟುಂಬ ಆತಂಕದಲ್ಲಿದೆ

  ಅನುಪಮ್ ಖೇರ್ ಕುಟುಂಬ ಸದಸ್ಯರು ಮುಂಬೈನ ಪ್ರತಿಷ್ಟಿತ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನುಪಮ್ ಖೇರ್ ಅವರ ತಾಯಿ ದುಲ್ಹಾರಿ ಅವರಿಗೆ 95 ಕ್ಕೂ ಹೆಚ್ಚು ವಯಸ್ಸಾಗಿದ್ದು ಅನುಪಮ್ ಖೇರ್ ಕುಟುಂಬ ಆತಂಕದಲ್ಲಿದೆ.

  ಬಿಎಂಸಿ ಜೊತೆ ನಿರಂತರ ಸಂಪರ್ಕ

  ಬಿಎಂಸಿ ಜೊತೆ ನಿರಂತರ ಸಂಪರ್ಕ

  ಅನುಪಮ್ ಖೇರ್ ಅವರು ಟ್ವೀಟ್‌ನಲ್ಲಿ ಹೇಳಿರುವ ಪ್ರಕಾರ, ಅವರ ಕುಟುಂಬ ಸಹ ಐಸೋಲೇಶನ್ ನಲ್ಲಿದ್ದು, ಬಿಎಂಸಿ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅವರ ಸಲಹೆ, ಸೂಚನೆಗಳನ್ನು ಪಾಲಿಸುತ್ತಿದ್ದಾರೆ.

  ಬಚ್ಚನ್ ಕುಟುಂಬಕ್ಕೆ ಕೊರೊನಾ

  ಬಚ್ಚನ್ ಕುಟುಂಬಕ್ಕೆ ಕೊರೊನಾ

  ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಕುಟುಂಬಕ್ಕೆ ಕೊರೊನಾ ಸೋಂಕು ದೃಢವಾಗಿದೆ. ಅಮಿತಾಬ್ ಪತ್ನಿ ಜಯಾ ಬಚ್ಚನ್ ಹಾಗೂ ಅಭಿಷೇಕ್ ಪತ್ನಿ ಐಶ್ವರ್ಯಾ ರೈ ಅವರಿಗೆ ಕೊರೊನಾ ವರದಿ ನೆಗೆಟಿವ್ ಬಂದಿದೆ.

  English summary
  Bollywood actor Anupam Kher's family members tested positive for coronavirus. Anupam's mother, brother, sister in law and their daughter tested positive.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X