Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅವರ ರೀತಿ ರಿಷಬ್ ಶೆಟ್ಟಿ ಆಗುವುದು ಬೇಡ, ಎಚ್ಚರಿಕೆ ನೀಡಿದ ಬಾಲಿವುಡ್ ಸ್ಟಾರ್ ನಿರ್ದೇಶಕ
'ಕಾಂತಾರ' ಒಂದೇ ಸಿನಿಮಾ ಮೂಲಕ ರಿಷಬ್ ಶೆಟ್ಟಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ನಿರ್ದೇಶಕ ಎನಿಸಿಕೊಂಡಿದ್ದಾರೆ.
ಹಿಂದಿಯ ಜನಪ್ರಿಯ ಮಾಧ್ಯಮ ಸಂಸ್ಥೆಗಳು ರಿಷಬ್‌ರನ್ನು ಕರೆದು ವಿಶೇಷ ಸಂದರ್ಶನಗಳನ್ನು ಮಾಡಿವೆ. ಮಾಧ್ಯಮಗಳ ಕಾನ್‌ಕ್ಲೇವ್‌ಗಳಲ್ಲಿ ಭಾಗವಹಿಸಿದ್ದಾರೆ. ಬಾಲಿವುಡ್-ದಕ್ಷಿಣದ ಸಿನಿಮಾ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.
ಕೆಲವು ಬಾಲಿವುಡ್ ನಿರ್ದೇಶಕರು ರಿಷಬ್ ಅವರನ್ನು ಉದಾಹರಣೆಯಾಗಿ ನೀಡಿ ಬಾಲಿವುಡ್‌ನವರು ಹೀಗೆ ಸಿನಿಮಾ ಮಾಡಬೇಕು ಎಂದಿದ್ದಾರೆ. ಈ ನಡುವೆ ಬಾಲಿವುಡ್‌ನ ಟಾಪ್ ನಿರ್ದೇಶಕನೊಬ್ಬ ರಿಷಬ್ ಶೆಟ್ಟಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ರಿಷಬ್ ಮಾತ್ರವೇ ಅಲ್ಲದೆ, ರಾಜ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿಗೂ ಕೆಲವು ಎಚ್ಚರಿಕೆ ಹಾಗೂ ಸಲಹೆಗಳನ್ನು ನೀಡಿದ್ದಾರೆ.
ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ಅನುರಾಗ್ ಕಶ್ಯಪ್, ಸಂದರ್ಶನವೊಂದರಲ್ಲಿ ರಿಷಬ್ ಶೆಟ್ಟಿ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ 'ಗರುಡ ಗಮನ ವೃಷಭ ವಾಹನ' ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದ ಅನುರಾಗ್ ಕಶ್ಯಪ್, ರಾಜ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಬಗ್ಗೆಯೂ ಅದೇ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅವರಿಗೆ ಕೆಲವು ಸಲಹೆಗಳನ್ನು ಸಹ ನೀಡಿದ್ದಾರೆ.

ರಿಷಬ್ ಶೆಟ್ಟಿಗೆ ಅನುರಾಗ್ ಕಶ್ಯಪ್ ಸಲಹೆ
ರಿಷಬ್ ತಮ್ಮ ತನ ಬಿಟ್ಟುಕೊಡಬಾರದು. ಒಂದೊಮ್ಮೆ ಅವರು ಬಾಕ್ಸ್ ಆಫೀಸ್ ಅನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಲು ಮುಂದಾದರೆ ಮರಾಠಿ ಚಿತ್ರರಂಗ ಹಾಳಾದಂತೆ ಕನ್ನಡವೂ ಆಗುತ್ತದೆ ಎಂದಿದ್ದಾರೆ. ಮರಾಠಿಯ 'ಸೈರಾಟ್' ಸಿನಿಮಾ ಹಿಟ್ ಆದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಅಷ್ಟು ಕಡಿಮೆ ಬಜೆಟ್‌ನಲ್ಲಿ ಕೋಟಿಗಳು ಸಂಪಾದಿಸಬಹುದು ಎಂಬುದು ಗೊತ್ತಾಯಿತು. ಆದರೆ ಸೈರಾಟ್ ನಿಂದಾಗಿ ಮರಾಠಿ ಚಿತ್ರರಂಗ ಹಾಳಾಯಿತು ಎಂದಿದ್ದಾರೆ ಅನುರಾಗ್ ಕಶ್ಯಪ್.

'ಮರಾಠಿ ಚಿತ್ರರಂಗವನ್ನು ಹಾಳು ಮಾಡಿತು 'ಸೈರಾಟ್'
'ಸೈರಾಟ್' ಸಿನಿಮಾ ಹಿಟ್ ಆದ ಬಳಿಕ ಎಲ್ಲರೂ ಅದೇ ರೀತಿಯ ಸಿನಿಮಾ ಮಾಡಲು ಮುಂದಾದರು. ಎಲ್ಲರೂ ಸಹ ದೊಡ್ಡ ಮೊತ್ತದ ಕಲೆಕ್ಷನ್ ಮೇಲೆ ಕಣ್ಣಿಟ್ಟರು. ಕಡಿಮೆ ಬಜೆಟ್‌ನಲ್ಲಿ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದ ನಿರ್ದೇಶಕರು ಸಹ ಸೈರಾಟ್‌ನಿಂದ ಪ್ರೇರಣೆಗೊಂಡು ಬಾಕ್ಸ್ ಆಫೀಸ್‌ಗಾಗಿ ಸಿನಿಮಾ ಮಾಡಲು ಆರಂಭಿಸಿದರು ಇದರಿಂದಾಗಿ ಮರಾಠಿ ಸಿನಿಮಾಗಳ ಗುಣಮುಟ್ಟವೇ ಕುಸಿಯಿತು ಎಂದಿದ್ದಾರೆ ಅನುರಾಗ್ ಕಶ್ಯಪ್.

ಬಾಕ್ಸ್ ಆಫೀಸ್‌ಗಾಗಿ ರಿಷಬ್ ಸಿನಿಮಾ ಮಾಡಬಾರದು: ಅನುರಾಗ್
ರಿಷಬ್ ಶೆಟ್ಟಿ ಸಹ ಬಾಕ್ಸ್ ಆಫೀಸ್ ಅನ್ನು ಗಮನದಲ್ಲಿಟ್ಟುಕೊಳ್ಳದೆ ತಮ್ಮದೇ ಮಾದರಿಯಲ್ಲಿ ಸಿನಿಮಾ ಮಾಡುತ್ತಾ ಸಾಗಬೇಕು. ಒಂದೊಮ್ಮೆ ಅವರು ಬಾಕ್ಸ್ ಆಫೀಸ್ ಅನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಲು ಮುಂದಾದರೆ ಸೋಲನುಭವಿಸುತ್ತಾರೆ. ಅನವಶ್ಯಕವಾಗಿ ತಮ್ಮ ಸಿನಿಮಾ ಬಜೆಟ್ ಏರಿಸಿಕೊಳ್ಳುವುದು ಸಹ ಸೂಕ್ತವಲ್ಲ. ರಿಷಬ್ ಮಾತ್ರವಲ್ಲ, ರಾಜ್ ಬಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಸಹ ತಮ್ಮ ತನವನ್ನು ಬಿಟ್ಟು ಬಾಕ್ಸ್ ಆಫೀಸ್‌ಗಾಗಿ ಸಿನಿಮಾ ಮಾಡಬಾರದು ಎಂದಿದ್ದಾರೆ.

ಹಾಲಿವುಡ್ ನಿರ್ದೇಶಕನ ಉದಾಹರಣೆ
ಹಾಲಿವುಡ್ ನಿರ್ದೇಶಕನೊಬ್ಬನ ಉದಾಹರಣೆಯನ್ನೂ ಅನುರಾಗ್ ಕಶ್ಯಪ್ ನೀಡಿದ್ದು, ಜೇಸಮ್ ಬ್ಲಮ್ ಈ ವಿಷಯದಲ್ಲಿ ನನಗೆ ಬಹಳ ಇಷ್ಟ. ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಎಷ್ಟೇ ದೊಡ್ಡ ಹಿಟ್ ಆದರೂ ಸಹ ಅವರು ತಮ್ಮ ಸಿನಿಮಾಗಳ ಬಜೆಟ್ ಅನ್ನು ಹೆಚ್ಚಿಸಿಕೊಳ್ಳಲಿಲ್ಲ. ತಾವು ಹೇಗೆ ಸಿನಿಮಾ ಮಾಡುತ್ತಿದ್ದರೋ ಆ ವಿಧಾನಕ್ಕೆ ನಿಷ್ಠರಾಗಿದ್ದು ಅವರ ಸ್ಟೈಲ್‌ನಂತೆಯೇ ಸಿನಿಮಾ ಮಾಡುತ್ತಾ ಹೋದರು ಎಂದಿದ್ದಾರೆ ಅನುರಾಗ್.