For Quick Alerts
  ALLOW NOTIFICATIONS  
  For Daily Alerts

  ತನುಶ್ರೀ ದತ್ತಾ ಬೆನ್ನಿಗೆ ನಿಂತ ಅನುಷ್ಕಾ ಶರ್ಮಾ

  |

  ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಲ್ಲಿ ಬರೀ ತನುಶ್ರೀ ದತ್ತಾ ಬಗ್ಗೆಯೇ ಸದ್ದು-ಸುದ್ದಿ. ಒಂಬತ್ತು ವರ್ಷಗಳ ಕಾಲ ಯು.ಎಸ್.ಎ ನಲ್ಲಿದ್ದ ತನುಶ್ರೀ ದತ್ತಾ ಇತ್ತೀಚೆಗಷ್ಟೇ ಮುಂಬೈಗೆ ವಾಪಸ್ ಆದರು.

  ಮುಂಬೈಗೆ ಬರುತ್ತಿದ್ದಂತೆಯೇ, ದಶಕದ ಹಿಂದೆ ತಾವು ಅನುಭವಿಸಿದ ನೋವು-ಯಾತನೆಯನ್ನ ತನುಶ್ರೀ ದತ್ತಾ ಬಟಾ ಬಯಲು ಮಾಡಿದ್ದಾರೆ. 'ಹಾರ್ನ್ ಓಕೆ ಪ್ಲೀಸ್' ಸಿನಿಮಾ ಸೆಟ್ ನಲ್ಲಿ ನಾನಾ ಪಾಟೇಕರ್ ಅಸಭ್ಯವಾಗಿ ವರ್ತಿಸಿದ ರೀತಿ ಬಗ್ಗೆ ತನುಶ್ರೀ ದತ್ತಾ ತುಟಿ ಎರಡು ಮಾಡಿದ್ದಾರೆ.

  ಸಾಲದಕ್ಕೆ, ವಿವೇಕ್ ಅಗ್ನಿಹೋತ್ರಿ ವಿರುದ್ಧವೂ ತನುಶ್ರೀ ದತ್ತಾ ಬಾಂಬ್ ಸಿಡಿಸಿದ್ದಾರೆ. ಪ್ರಿಯಾಂಕಾ ಛೋಪ್ರಾ, ಸೋನಂ ಕಪೂರ್, ಸ್ವರ ಭಾಸ್ಕರ್ ಸೇರಿದಂತೆ ಹಲವು ತಾರೆಯರು ತನುಶ್ರೀ ದತ್ತಾ ಪರವಾಗಿ ದನಿಯೆತ್ತಿದ್ದಾರೆ.

  ತನುಶ್ರೀ ದತ್ತಾ ಪರವಾಗಿ ದನಿಯೆತ್ತಿದ್ದ ಬಾಲಿವುಡ್ ತಾರೆಯರಿವರು..

  ಇದೀಗ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ತನುಶ್ರೀ ದತ್ತಾಗೆ ಸಪೋರ್ಟ್ ಮಾಡಿದ್ದಾರೆ. ಮುಂದೆ ಓದಿರಿ...

  ಗೌರವ ಕೊಡಬೇಕು

  ಗೌರವ ಕೊಡಬೇಕು

  ''ತಮಗಾದ ನೋವಿನ ಬಗ್ಗೆ ತನುಶ್ರೀ ದತ್ತಾ ಬಹಿರಂಗ ಪಡಿಸಿರುವುದಕ್ಕೆ ಗೌರವ ಕೊಡಬೇಕು. ಯಾರೇ ಆಗಲಿ, ಕೆಲಸ ಮಾಡುವ ಸ್ಥಳ ಸುರಕ್ಷಿತವಾಗಿರಬೇಕು. ಯಾವುದೇ ವೃತ್ತಿಯಾಗಿರಲಿ, ನೀವು ಕೆಲಸ ಮಾಡುವಾಗ ನಿಮಗೆ ಭಯದ ವಾತಾವರಣ ಉಂಟಾಗಬಾರದು'' ಎಂದು ಪ್ರೆಸ್ ಮೀಟ್ ಒಂದರಲ್ಲಿ ಅನುಷ್ಕಾ ಶರ್ಮಾ ಹೇಳಿದ್ದಾರೆ.

  ತನುಶ್ರೀ ದತ್ತಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ವಿವೇಕ್ ಅಗ್ನಿಹೋತ್ರಿ

  ಹೆದರಿಕೆ ಆಗುತ್ತೆ

  ಹೆದರಿಕೆ ಆಗುತ್ತೆ

  ''ತನುಶ್ರೀ ದತ್ತಾ ಆಡಿರುವ ಮಾತುಗಳನ್ನು ಕೇಳಿಸಿಕೊಂಡರೆ ನಿಜಕ್ಕೂ ಹೆದರಿಕೆ ಆಗುತ್ತೆ. ಆಕೆಗೆ ಇರುವ ಧೈರ್ಯವನ್ನು ಮೆಚ್ಚಬೇಕು'' ಅಂತಾರೆ ನಟಿ ಅನುಷ್ಕಾ ಶರ್ಮಾ.

  ತನುಶ್ರೀ ದತ್ತಾಗೆ 'ಬಟ್ಟೆ ಬಿಚ್ಚು' ಅಂತ ಹೇಳಿದ್ನಂತೆ ಬಾಲಿವುಡ್ ನಿರ್ದೇಶಕ.!

  ಎಚ್ಚರ ವಹಿಸುವೆ

  ಎಚ್ಚರ ವಹಿಸುವೆ

  ''ಘಟನೆ ನಡೆದಿದ್ದು 2008 ರಲ್ಲಿ. ನಾವು ಪ್ರತಿಕ್ರಿಯೆ ಕೊಡುತ್ತಿರುವುದು 2018 ರಲ್ಲಿ. ಇದು ಒಳ್ಳೆಯದ್ದಲ್ಲ. ಈ ತರಹ ಘಟನೆ ನನ್ನ ಸಿನಿಮಾ ಸೆಟ್ ನಲ್ಲಿ ನಡೆಯದಿರಲು ನಾನು ಖಂಡಿತ ಎಚ್ಚರ ವಹಿಸುವೆ'' ಎಂದಿದ್ದಾರೆ ನಟ ವರುಣ್ ಧವನ್.

  ನಾನಾ ಪಾಟೇಕರ್ ಬಗ್ಗೆ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ ತನುಶ್ರೀ ದತ್ತಾ.!

  ಶಿಕ್ಷೆ ಆಗಬೇಕು

  ಶಿಕ್ಷೆ ಆಗಬೇಕು

  ''ಈ ಘಟನೆ ಬಗ್ಗೆ ಚರ್ಚೆಗಿಂತ ಮಾಡಿದ್ದು ಸಾಕು. ಇನ್ನಾದರೂ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು'' ಅಂತಾರೆ ವರುಣ್ ಧವನ್.

  English summary
  Anushka Sharma and Varun Dhawan supports Tanushree Dutta.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X