For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ವೈರಲ್: ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ತುಂಬು ಗರ್ಭಿಣಿ ಅನುಷ್ಕಾ

  |

  ಬಾಲಿವುಡ್ ನಟಿ, ತುಂಬು ಗರ್ಭಿಣಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ತಿಂಗಳು ಮಗುವಿಗೆ ಜನ್ಮ ನೀಡಲಿರುವ ಅನುಷ್ಕಾ ಸದ್ಯ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ವರ್ಕೌಟ್ ವಿಡಿಯೋವನ್ನು ವಿರಾಟ್ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಬಿಳಿ ಟಿ ಶರ್ಟ್ ಧರಿಸಿ ಜಿಮ್ ನಲ್ಲಿ ಟ್ರೆಡ್ ಮಿಲ್ ತುಳಿಯುತ್ತಾ ಬೆವರಿಳಿಸುತ್ತಿರುವ ಅನುಷ್ಕಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುಂಬು ಗರ್ಭಿಣಿ ಅನುಷ್ಕಾ ವೈದ್ಯರ ಸಲಹೆಯಂತೆ ನಿಯಮಿತವಾದ ವರ್ಕೌಟ್ ಗಳನ್ನು ಮಾಡುತ್ತಿದ್ದಾರೆ.

  ವೋಗ್ ಮ್ಯಾಗಜೈನ್‌ಗೆ ಫೋಸ್ ಕೊಟ್ಟ ಗರ್ಭಿಣಿ ಅನುಷ್ಕಾ ಶರ್ಮಾ

  ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅನುಷ್ಕಾ ಇತ್ತೀಚಿಗೆ ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ಕೊರೊನಾ ಲಾಕ್ ಡೌನ್ ನಮಗೆ ಒಂದು ರೀತಿಯಲ್ಲಿ, ಅನುಕೂಲವಾಗಿದೆ. ವಿರಾಟ್ ಯಾವಾಗಲು ನನ್ನ ಜೊತೆಯೇ ಇರುತ್ತಿದ್ದರು. ನಾವು ವೈದ್ಯರ ಬಳಿ ಹೋಗಲು ಮಾತ್ರ ಮನೆಯಿಂದ ಹೊರಬರುತ್ತಿದ್ದೆವು. ರಸ್ತೆಯಲ್ಲಿ ಯಾರು ಇರುತ್ತಿರಲಿಲ್ಲ. ಹಾಗಾಗಿ ನಾನು ಗರ್ಭಿಣಿ ಆಗಿರುವುದನ್ನು ಯಾರಿಗೂ ಗುರುತಿಸಲು ಸಾಧ್ಯವಾಗಿರಲಿಲ್ಲ.' ಎಂದಿದ್ದಾರೆ.

  ಇನ್ನು ಇತ್ತೀಚಿಗೆ ಅನುಷ್ಕಾ ಶಿರ್ಸಾಸನ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಪತಿ ವಿರಾಟ್ ಸಹಾಯದಿಂದ ಶಿರಸಾಸನ ಮಾಡಿರುವ ಫೋಟೋಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನು ಕೆೆಲವರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು.

  ಇತ್ತೀಚಿಗೆ ಅನುಷ್ಕಾ ಮ್ಯಾಗಜಿನ್ ಒಂದಕ್ಕೆ ಫೋಟೋಶೂಟ್ ಮಾಡಿಸಿದ್ದರು. ಗರ್ಭಿಣಿ ಅನುಷ್ಕಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಅನುಷ್ಕಾ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕೊರೊನಾ ಕಾಲದಲ್ಲೂ ಚಿತ್ರೀಕರಣ ಭಾಗಿಯಾಗಿದ್ದರು.

  ಇನ್ನು ಸಿನಿಮಾಗಳ ವಿಚಾರಕ್ಕೆ ಬರುವುದಾದರೆ, ಝೀರೋ ಸಿನಿಮಾಗಳ ಮೂಲಕ ಅನುಷ್ಕಾ ಕೊನೆಯದಾಗಿ ಬೆಳ್ಳಿ ಪರದೆಮೇಲೆ ಮಿಂಚಿದ್ದರು. ಬಳಿಕ ಯಾವುದೇ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿರಲಿಲ್ಲ. ಬಳಿಕ ವೆಬ್ ಸೀರಿಸ್ ಲೋಕದಲ್ಲಿ ಸಕ್ರೀಯರಾಗಿದ್ದ ಅನುಷ್ಕಾ ಕೆಲವು ವೆಬ್ ಸೀರಿಸ್ ಗಳಿಗೆ ಬಂಡವಾಳ ಹೂಡಿಸಿದ್ದಾರೆ. ಮಗುವಿಗೆ ಜನ್ಮ ನೀಡಿದ ಬಳಿಕ ಮತ್ತೆ ಕೆಲಸಕ್ಕೆ ಮರಳುವುದಾಗಿ ಅನುಷ್ಕಾ ಹೇಳಿದ್ದಾರೆ.

  English summary
  Bollywood Actress Anushka Sharma Doing Workout In Gym In Pregnancy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X