»   » ಬಾಲಿವುಡ್ ಗೆ ಅಡಿಯಿಡಲಿರುವ ನಟಿ ಅನುಷ್ಕಾ ಶೆಟ್ಟಿ

ಬಾಲಿವುಡ್ ಗೆ ಅಡಿಯಿಡಲಿರುವ ನಟಿ ಅನುಷ್ಕಾ ಶೆಟ್ಟಿ

Posted By:
Subscribe to Filmibeat Kannada

ದಕ್ಷಿಣ ಭಾರತದಲ್ಲಿ ಬಲು ಬೇಡಿಕೆಯಲ್ಲಿರುವ ತಾರೆ ಅನುಷ್ಕಾ ಶೆಟ್ಟಿ. ತೆಲುಗಿನ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಆಕ್ಷನ್ ಕಟ್ ಹೇಳುತ್ತಿರುವ 'ಬಾಹುಬಲಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದು ಜೊತೆಗೆ 'ರುದ್ರಮದೇವಿ' ಎಂಬ ಐತಿಹಾಸಿಕ ತ್ರಿಡಿ ಚಿತ್ರದಲ್ಲೂ ಬಿಜಿಯಾಗಿದ್ದಾರೆ.

ಶೀಘ್ರದಲ್ಲೇ ಈ ಬೆಡಗಿ ಬಾಲಿವುಡ್ ಚಿತ್ರದ ಅಂಗಳಕ್ಕೆ ಅಡಿಯಿಡಲು ಸಿದ್ಧವಾಗಿದ್ದಾರೆ. ದಕ್ಷಿಣದ ಬೆಡಗಿಯರಾದ ಇಲಿಯಾನಾ, ಕಾಜಲ್ ಅಗರವಾಲ್, ತ್ರಿಷಾ ಹಾಗೂ ಚಾರ್ಮಿ ಬಳಿಕ ಇದೀಗ ಅನುಷ್ಕಾ ಶರ್ಮಾ ಬಾಲಿವುಡ್ ಗೆ ಹೊಸ ಸೇರ್ಪಡೆಯಾಗುತ್ತಿರುವ ಬೆಡಗಿ.


'ಅಮನ್ ಕಿ ಆಶಾ' ಚಿತ್ರವನ್ನು ನಿರ್ದೇಶಿಸಿದ್ದ ಈ ನಿವಾಸ್ ಅವರ ಹೊಸ ಚಿತ್ರ 'ಜುವೆನೈಲ್'ಗಾಗಿ ಅನುಷ್ಕಾ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಐಎಎನ್ಎಸ್ ಜೊತೆಗೆ ಮಾತನಾಡಿರುವ ನಿರ್ದೇಶಕರು, "ಈಗಾಗಲೆ ಅನುಷ್ಕಾ ಅವರಿಗೆ ಕಥೆ ಹೇಳಿದ್ದೇನೆ. ಅವರಿಗೆ ಬಹಳಷ್ಟು ಇಷ್ಟವಾಗಿದೆ. ಆದರೆ ಇನ್ನೂ ಅವರು ಅಭಿನಯಿಸುತ್ತೀನಿ ಎಂದೂ ಹೇಳಿಲ್ಲ, ಆಗಲ್ಲ ಎಂದೂ ಹೇಳಿಲ್ಲ" ಎಂದಿದ್ದಾರೆ.

ಈ ಚಿತ್ರದ ಪಾತ್ರ ಅವರಿಗೆ ಹೇಳಿ ಮಾಡಿಸಿದಂತಿದೆ. ಬಹುಶಃ ಅವರು ಒಪ್ಪಿಕೊಳ್ಳುತ್ತಾರೆ. ಸೆಪ್ಟೆಂಬರ್ ಕೊನೆಗೆ ಅವರಿಂದ ಒಳ್ಳೆಯ ಸುದ್ದಿ ನಿರೀಕ್ಷಿಸಿದ್ದೇವೆ ಎಂದಿದ್ದಾರೆ ನಿರ್ದೇಶಕರು. ಇನ್ನು ಅವರು ಚಿತ್ರದ ಬಗ್ಗೆ ಹೇಳುವುದೇನೆಂದರೆ...

"ಇದೊಂದು ಬಹುತಾರಾಗಣದ ಚಿತ್ರ. ಇದೊಂದು ಫ್ರೆಶ್ ಸ್ಕ್ರಿಪ್ಟ್ ಆಗಿದ್ದು ರೀಮೇಕ್ ಚಿತ್ರವಲ್ಲ. ಹಾಗೆಯೇ ಮಹಿಳಾ ಪ್ರಧಾನ ಚಿತ್ರವೂ ಇದಲ್ಲ. ಹಲವಾರು ಕಥೆಗಳನ್ನು ಒಳಗೊಂಡಿದ್ದು ಕ್ಲೈಮ್ಯಾಕ್ಸ್ ನಲ್ಲಿ ಎಲ್ಲವೂ ಒಂದಕ್ಕೊಂದು ಥಳುಕು ಹಾಕಿಕೊಳ್ಳುತ್ತವೆ. ಜನವರಿ 2015ರಲ್ಲಿ ಚಿತ್ರೀಕರಣ ಆರಂಭಿಸುತ್ತೇನೆ" ಎಂದಿದ್ದಾರೆ. (ಐಎಎನ್ಎಸ್)

English summary
Anushka Shetty is one of the most sought after actresses in South India. The actress, who is currently busy with Baahubali and Rudhramadevi, is all set to debut in Bollywood soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada