For Quick Alerts
  ALLOW NOTIFICATIONS  
  For Daily Alerts

  ಸಮಧುರವಾಗಿ ಹಾಡಿ ಮನಸೆಳೆದ ಎಆರ್ ರೆಹಮಾನ್‌ ಪುತ್ರಿ ಖತೀಜಾ!

  |

  ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಅವರ ಪುತ್ರಿ ಖತೀಜಾ ರೆಹಮಾನ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಇದ್ದಾರೆ. ಖತೀಜಾ ಕೂಡ ಅಪ್ಪನಂತೆಯೇ ಸಂಗೀತದ ವಿಚಾರದಲ್ಲಿ ಸುದ್ದಿ ಆಗಿದ್ದಾರೆ.

  ಇಷ್ಟು ದಿನ ಎ.ಆರ್ ರೆಹಮಾನ್ ಮಾತ್ರ ತಮ್ಮ ಪ್ರತಿಭೆಯಿಂದ ಜನಮನ ಗೆಲ್ಲುತ್ತಿದ್ದರು. ಸಾಕಷ್ಟು ಹಾಡುಗಳು ಮತ್ತು ಸಂಗೀತದಿಂದ ಎ.ಆರ್ ರೆಹಮಾನ್ ಅಪಾರ ಮನಸ್ಸುಗಳಿಗೆ ಹತ್ತಿರ ಆಗಿದ್ದಾರೆ.

  ಈ ಅಪ್ಪನ ಹಾದಿಯಲ್ಲಿ ಸಾಗಲು ಮಗಳು ಖತೀಜಾ ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಖತೀಜಾ ಬಹಿರಂಗವಾಗಿ ಕಾರ್ಯಕ್ರಮದಲ್ಲಿ ಹಾಡಿದ್ದಾರೆ.

  ದುಬೈನಲ್ಲಿ ಹಾಡಿದ ಖತೀಜಾ ರೆಹಮಾನ್!

  ದುಬೈನಲ್ಲಿ ಹಾಡಿದ ಖತೀಜಾ ರೆಹಮಾನ್!

  ಖತೀಜಾ ಈಗ ಮೊದಲ ಬಾರಿಗೆ ಆಧ್ಯಾತ್ಮದ ಕುರಿತ ಹಾಡು ಹಾಡಿದ್ದಾರೆ. ಖತೀಜಾ ಮಧುರ ಧ್ವನಿಯಲ್ಲಿ ಮೂಡಿ ಬಂದಿರುವ ಹಾಡು ಮೆಚ್ಚುಗೆ ಗಳಿಸಿದೆ. ಇನ್ನೂ ಖತೀಜಾ ಧ್ವನಿಗೆ ಅದಾಗಲೇ ಅಭಿಮಾನಿಗಳು ಖತೀಜಾ ಹಾಡಿಗೆ ಎಲ್ಲರೂ ಮನಸೋತಿದ್ದಾರೆ. ಆಕೆ ಹಾಡಿರುವ ಹಾಡು ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಖತೀಜಾಳಿಗೆ ಎಲ್ಲಿಲ್ಲದ ಪ್ರಶಂಸೆ ವ್ಯಕ್ತವಾಗುತ್ತಿದೆ.

  ನವೆಂಬರ್ 20 ರಂದು ವಿಶ್ವ ಮಕ್ಕಳ ದಿನಾಚರಣೆಯ ಪ್ರಯುಕ್ತ 'ದುಬೈ ಎಕ್ಸ್‌ಪೋ 2020' ಕಾರ್ಯಕ್ರಮದಲ್ಲಿ ಖತೀಜಾ ಹಾಡಿದ್ದಾರೆ. 'ಫಿರ್ದೌಸ್ ಆರ್ಕೆಸ್ಟ್ರಾ' ಟೀಂನಲ್ಲಿ ಎಆರ್ ರೆಹಮಾನ್ ಪುತ್ರಿ ಹಾಡಿದ್ದಾರೆ.

  ಎಆರ್ ರೆಹಮಾನ್ ಸಂಯೋಜನೆಗೆ ಹಾಡಿದ ಪುತ್ರಿ!

  ಎಆರ್ ರೆಹಮಾನ್ ಸಂಯೋಜನೆಗೆ ಹಾಡಿದ ಪುತ್ರಿ!

  ಖತೀಜಾ ಹಾಡಿದ ಚೊಚ್ಚಲ ಹಾಡನ್ನು ಸ್ವತಃ ತಂದೆ ಎಆರ್ ರೆಹಮಾನ್ ಸಂಯೋಜಿಸಿದ್ದಾರೆ. ಮಗಳು ಹಾಡಿರುವ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಎಆರ್ ರೆಹಮಾನ್ ಹಂಚಿಕೊಂಡಿದ್ದಾರೆ. ಜೊತೆಗೆ ಈ ಬಗ್ಗೆ ಬರೆದು ಕೊಂಡಿದ್ದಾರೆ. "ವಿಶ್ವ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿರುವ ಖತೀಜಾ ರೆಹಮಾನ್ ಮತ್ತು ಫಿರ್ದೌಸ್ ಆರ್ಕೆಸ್ಟ್ರಾ ಅವರ ಪ್ರದರ್ಶನವನ್ನು ವೀಕ್ಷಿಸಲು ತಪ್ಪಿಸಿಕೊಂಡಿದ್ದಲ್ಲಿ ಇದು ನಿಮಗಾಗಿ. ಫಿರ್ದೌಸ್ ಆರ್ಕೆಸ್ಟ್ರಾ ಮತ್ತು ಎಕ್ಸ್‌ಪೋ 2020 ದುಬೈನ ಇಡೀ ತಂಡಕ್ಕೆ, ಇಂತಹ ಅದ್ಭುತ ಪ್ರದರ್ಶನವನ್ನು ನೀಡಿದ್ದಕ್ಕಾಗಿ ದೊಡ್ಡ ಧನ್ಯವಾದಗಳು". ಎನ್ನುವ ಸಾಲುಗಳನ್ನು ಬರೆದಿದ್ದಾರೆ.

  ಖತೀಜಾ ಸುಮಧುರ ಧ್ವನಿಗೆ ಮರುಳಾದ ಮಂದಿ!

  ಖತೀಜಾ ಸುಮಧುರ ಧ್ವನಿಗೆ ಮರುಳಾದ ಮಂದಿ!

  ಖತೀಜಾ ಭಾವಪೂರ್ಣ ಮತ್ತು ಸುಮಧುರ ಧ್ವನಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೇಳುಗರನ್ನು ಖತೀಜ ತನ್ನ ಧ್ವನಿಯ ಮೂಲಕ ವಿಸ್ಮಯಗೊಳಿಸಿದ್ದಾಳೆ. ಆಕೆಯ ಹಾಡಿಗೆ ಸಾಕಷ್ಟು ಮಂದಿ ಮೆಚ್ಚುಗೆಯ ಸಾಲುಗಳನ್ನು ಬರೆಯುತ್ತಾರೆ.

  ಅನೇಕರು ಆಕೆಯನ್ನು 'ದೇವದೂತ' ಎಂದು ಕರೆದಿದ್ದಾರೆ. ಹಾಗೆ "ಹೆವೆನ್ಲಿ ಸಂಯೋಜನೆ ರೆಹಮಾನ್ ಸರ್ ಮತ್ತು ಸಹಜವಾಗಿ ಸುಂದರ ಧ್ವನಿ ಖತೀಜಾ ಜಿ", "ಎಂತಹ ಅದ್ಭುತ ಮತ್ತು ಭಾವಪೂರ್ಣ ಸಂಯೋಜನೆ" ಎಂದು ಬರೆದಿದ್ದಾರೆ. ಜೊತೆ ಆ ಸ್ಟಾರ್ ಈಸ್ ಬಾರ್ನ್ ಎಂದು ಹೆಚ್ಚು ಜನರು ಹೇಳಿದ್ದಾರೆ.

  ಬಾರ್ನ್ ಸ್ಟಾರ್ ಖತೀಜಾ ರೆಹಮಾನ್!

  ಬಾರ್ನ್ ಸ್ಟಾರ್ ಖತೀಜಾ ರೆಹಮಾನ್!

  ಖತೀಜಾ ರೆಹಮಾನ್ ಕೇವಲ 14 ವರ್ಷ ವಯಸ್ಸಿನವರಾಗಿದ್ದಾಗಲೇ ಸಂಗೀತ ಲೋಕಕ್ಕೆ ಎಂಟ್ರಿ ಮಾಡಿದ್ದಾರೆ.

  2010 ರಲ್ಲಿ ತಮಿಳಿನ ಬ್ಲಾಕ್ಬಸ್ಟರ್ 'ಎಂಥಿರನ್' ಮೂಲಕ ಸಂಗೀತಕ್ಕೆ ಪದಾರ್ಪಣೆ ಮಾಡಿದರು. ಈಗ 'ಫರಿಶ್ಟನ್' ನೊಂದಿಗೆ ಸ್ವತಂತ್ರ ಗಾಯಕಿಯಾಗಿ ಖತೀಜಾ ತಮ್ಮ ಸಂಗೀತ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ.

  English summary
  AR Rahman's daughter amazes with spiritual singing at Dubai Expo 2020 I it is Her First Singing,know more

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X