For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಾವಿನ ಪ್ರಕರಣದಲ್ಲಿ ಅರ್ಬಾಜ್ ಹೆಸರು: ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಲ್ಮಾನ್ ಸಹೋದರ

  |

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಪ್ರಕರಣ ಇದೀಗ ಡ್ರಗ್ಸ್ ಮಾಫಿಯಾದತ್ತ ಸಾಗಿದ್ದು, ಸುಶಾಂತ್ ಪ್ರಕರಣಕ್ಕಿಂತ ಮಾದಕ ವಸ್ತು ದಂಧೆ ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ವಿಚಾರವಾಗಿ ಈಗಾಗಲೇ ಎನ್ ಸಿ ಬಿ ಅನೇಕ ನಟಿಯರನ್ನು ವಿಚಾರಣೆ ಮಾಡಿದೆ.

  ಈ ನಡುವೆ ಈಗ ಸುಶಾಂತ್ ಸಿಂಗ್ ಸಾವಿನ ಪ್ರಕರಣ ನಟ ಸಲ್ಮಾನ್ ಖಾನ್ ಕುಟುಂಬಕ್ಕೂ ದೊಡ್ಡ ತಲೆನೋವಾಗಿದೆ. ಸುಶಾಂತ್ ಮತ್ತು ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ ಆತ್ಮಹತ್ಯೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಭಾಗಿಯಾಗಿದ್ದಾರೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅರ್ಬಾಜ್ ಖಾನ್ ಹೆಸರನ್ನು ಎಳೆದುತರುತ್ತಿರುವವರ ವಿರುದ್ಧ ಅರ್ಬಾಜ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಮುಂದೆ ಓದಿ...

  ಡ್ರಗ್ಸ್ ಪ್ರಕರಣದಲ್ಲಿ ಸಲ್ಮಾನ್ ಖಾನ್ ಹೆಸರು: ಸ್ಪಷ್ಟನೆ ನೀಡಿದ ಸಲ್ಮಾನ್ ಪರ ವಕೀಲರುಡ್ರಗ್ಸ್ ಪ್ರಕರಣದಲ್ಲಿ ಸಲ್ಮಾನ್ ಖಾನ್ ಹೆಸರು: ಸ್ಪಷ್ಟನೆ ನೀಡಿದ ಸಲ್ಮಾನ್ ಪರ ವಕೀಲರು

  ಸುಶಾಂತ್ ಸಾವಿನ ಪ್ರಕರಣದಲ್ಲಿ ಅರ್ಬಾಜ್ ಹೆಸರು

  ಸುಶಾಂತ್ ಸಾವಿನ ಪ್ರಕರಣದಲ್ಲಿ ಅರ್ಬಾಜ್ ಹೆಸರು

  ಸುಶಾಂತ್ ಮತ್ತು ಮ್ಯಾನೇಜರ್ ದಿಶಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಬಾಜ್ ಖಾನ್ ಹೆಸರನ್ನು ಲಿಂಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋಗಳು ಮತ್ತು ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ. ಅರ್ಬಾಜ್ ಖಾನ್ ಮಾನಹಾನಿ ಮಾಡುವಂತಹ ಪೋಸ್ಟ್ ಗಳು ವೈರಲ್ ಆಗಿವೆ. ಇಂತಹ ಪೋಸ್ಟ್ ಗಳನ್ನು ಹರಿಬಿಡುತ್ತಿರುವ ಕಿಡಿಗೇಡಿಗಳ ವಿರುದ್ಧ ಅರ್ಬಾಜ್ ಖಾನ್ ಕೋರ್ಟ್ ಮೆಟ್ಟಿಲೇರಿದ್ದಾರೆ.

  ಸುಶಾಂತ್ ಸಿಂಗ್ ಪ್ರಕರಣ: ಸಿಬಿಐ ಗೆ ಅಭಿಪ್ರಾಯ ಸಲ್ಲಿಸಿದ ಏಮ್ಸ್ ವೈದ್ಯರುಸುಶಾಂತ್ ಸಿಂಗ್ ಪ್ರಕರಣ: ಸಿಬಿಐ ಗೆ ಅಭಿಪ್ರಾಯ ಸಲ್ಲಿಸಿದ ಏಮ್ಸ್ ವೈದ್ಯರು

  ಪೋಸ್ಟ್, ವಿಡಿಯೋಗಳನ್ನು ಹಿಂತೆಗೆಯುವಂತೆ ಕೋರ್ಟ್ ಆದೇಶ

  ಪೋಸ್ಟ್, ವಿಡಿಯೋಗಳನ್ನು ಹಿಂತೆಗೆಯುವಂತೆ ಕೋರ್ಟ್ ಆದೇಶ

  ಕೆಲವು ಸಾಮಾಜಿಕ ಜಾಲತಾಣದ ಬಳಕೆದಾರರ ವಿರುದ್ಧ ಅರ್ಬಾರ್ ಖಾನ್ ಬಾಂಬೆ ಸಿವಿಲ್ ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅರ್ಬಾಜ್ ಖಾನ್ ಕೇಸ್ ದಾಖಲಿಸುತ್ತಿದ್ದಂತೆ ಪೋಸ್ಟ್ ಗಳನ್ನು ಹಿಂತೆಗೆದುಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿದೆ.

  ಕುಟುಂಬದ ವಿರುದ್ಧ ಮಾನಹಾನಿ ಪೋಸ್ಟ್ ಮಾಡುವ ಹಾಗಿಲ್ಲ

  ಕುಟುಂಬದ ವಿರುದ್ಧ ಮಾನಹಾನಿ ಪೋಸ್ಟ್ ಮಾಡುವ ಹಾಗಿಲ್ಲ

  ಟ್ವಿಟ್ಟರ್, ಫೇಸ್ ಬುಕ್, ಯೂ ಟ್ಯೂಬ್ ಸೇರಿದಂತೆ ಇತರ ಮಾಧ್ಯಮಗಳಲ್ಲಿ ಅರ್ಬಾಜ್ ಖಾನ್ ಮತ್ತು ಅವರ ಕುಟುಂಬ ಸದಸ್ಯರ ಬಗ್ಗೆ ಮಾತನಾಡುವುದು, ಪೋಸ್ಟ್ ಗಳನ್ನು ಹಾಕುವುದು, ವಿಡಿಯೋ, ಸಂದರ್ಶನಗಳನ್ನು ಮಾಡುವ ಹಾಗಿಲ್ಲ. ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿಯೂ ಸಲ್ಮಾನ್ ಖಾನ್ ಹೆಸರು ಕೇಳಿಬರುತ್ತಿದೆ. ಅರ್ಬಾಜ್ ಖಾನ್ ಇತ್ತೀಚಿಗೆ ತನ್ನ ಬ್ಯಾನರ್ ನಲ್ಲಿ ದಬಾಂಗ್-3 ಸಿನಿಮಾವನ್ನು ನಿರ್ಮಿಸಿದ್ದಾರೆ. ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ.

  ರಾಗಿಣಿ, ಸಂಜನಾ ಮೊಬೈಲ್ ನಿಂದ ಬಯಲಾಯ್ತು ಸ್ಪೋಟಕ ಮಾಹಿತಿ..? | Filmibeat Kannada
  ಡ್ರಗ್ಸ್ ಪ್ರಕರಣದಲ್ಲಿ 20ಕ್ಕು ಅಧಿಕ ಮಂದಿಯ ಬಂಧನ

  ಡ್ರಗ್ಸ್ ಪ್ರಕರಣದಲ್ಲಿ 20ಕ್ಕು ಅಧಿಕ ಮಂದಿಯ ಬಂಧನ

  ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಸೇರಿದಂತೆ 20 ಮಂದಿಯನ್ನು ಎನ್ ಸಿ ಬಿ ಬಂಧಿಸಿದೆ. ನಟಿ ರಿಯಾ ಚಕ್ರವರ್ತಿಯನ್ನು ಸೆಪ್ಟಂಬರ್ 8ರಂದು ಬಂಧಿಸಲಾಗಿದೆ. ಸದ್ಯ ರಿಯಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಕ್ಟೋಬರ್ 6ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ.

  English summary
  Arbaaz Khan files defamation case on his name dragging in sushant singh and Disha Salian case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X