For Quick Alerts
  ALLOW NOTIFICATIONS  
  For Daily Alerts

  ಎರಡು ದಶಕಗಳ ಹಿಂದೆಯೇ ಸಂಬಂಧ ಮುರಿದು ಬಿದ್ದಿತ್ತು: ನಟ ಅರ್ಬಾಜ್ ಖಾನ್

  |

  ಬಾಲಿವುಡ್ ನಟ ಅರ್ಬಾಜ್ ಖಾನ್ ಮತ್ತು ಮಲೈಖಾ ಅರೋರ ವಿಚ್ಛೇಧನ ಪಡೆದು ಮೂರು ವರ್ಷಗಳೇ ಆಗಿವೆ. ಸುಮಾರು ಎರಡು ದಶಕಗಳಿಗೂ ಅಧಿಕಾ ಕಾಲ ಒಟ್ಟಿಗೆ ಸಂಸಾರ ಮಾಡಿದ್ದ ಈ ಜೋಡಿ ದಿಢೀರನೆ ದೂರ ಆಗಿದ್ದು ಬಾಲಿವುಡ್ ಮಂದಿಗೆ ಶಾಕ್ ಆಗಿತ್ತು. ಆದ್ರೀಗ ಬೇರೆ ಬೇರೆ ಆಗಿ ಮೂರು ವರ್ಷಗಳಾದರೂ ಅರ್ಬಾಜ್ ಮತ್ತು ಮಲೈಖಾ ವಿಚ್ಛೇಧನ ವಿಷಯ ಇವತ್ತಿಗೂ ಚರ್ಚೆಯಾಗುತ್ತಿದೆ.

  ಇಬ್ಬರು ದೂರ ದೂರ ಆದ ಬಗ್ಗೆ ಅಥವಾ ಇಬ್ಬರ ದಾಂಪತ್ಯ ಜೀವನದ ಬಗ್ಗೆಯಾಗಲಿ ಅರ್ಬಾಜ್ ಅಥವಾ ಮಲೈಖಾ ಎಲ್ಲಿಯೂ ಮಾತನಾಡಿರಲ್ಲಿಲ. ಆದ್ರೀಗ ಮಲೈಖಾ ಎರಡನೇ ಮದುವೆ ವಿಚಾರ ಸದ್ದು ಮಾಡುತ್ತಿದೆ. ಈ ನಡುವೆ ಅರ್ಬಾಜ್ ಖಾನ್ ಸಂದರ್ಶನ ಒಂದರಲ್ಲಿ ವಿಚ್ಛೇಧನದ ಬಗ್ಗೆ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ.

  ಮಾಜಿ ಪತ್ನಿ ಮಲೈಕಾ ಮದುವೆ ಬಗ್ಗೆ ಅರ್ಬಾಜ್ ಖಾನ್ ಹೇಳಿದ್ದೇನು?

  ಎರಡು ದಶಕಗಳ ಹಿಂದೆಯೇ ಅರ್ಬಾಜ್ ಮತ್ತು ಮಲೈಖಾ ಇಬ್ಬರ ಸಂಬಂಧ ಮುರಿದು ಬಿದ್ದಿತ್ತು ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ. "ನೋಡೋಕೆ ಎಲ್ಲವು ಚೆನ್ನಾಗಿ ಇತ್ತು. ಆದ್ರೆ ಅದೂ ಮುರಿದು ಬಿತ್ತು" ಎಂದು ಹೇಳುತ್ತಲೇ ಇಬ್ಬರ ಮದುವೆ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. "ಗಂಡ ಹೆಂಡತಿ ಇಬ್ಬರು ಅವರವರ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ, ಅವರಿಗೆ ಬೇಕಾದ ಹಾಗೆ ಜೀವನ ನಡೆಸಲು ಹೊರಟರೆ ಮದುವೆ ಎನ್ನುವ ಪದಕ್ಕೆ ಅರ್ಥವೆ ಇರಲ್ಲ. ಇಬ್ಬರ ಜೀವನದಲ್ಲೂ ಆಗಿದ್ದು ಹಾಗೆ. ಇಬ್ಬರ ಸಂಬಂಧ ಮುರಿದು ಬಿದ್ದಿದ್ದು ಎರಡು ದಶಕಗಳೆ ಕಳೆದಿವೆ" ಎಂದು ಹೇಳಿದ್ದಾರೆ.

  ಏಪ್ರಿಲ್ 19ಕ್ಕೆ ಅರ್ಜುನ್ ಕಪೂರ್ ಜೊತೆ ಮಲೈಕಾ ಮದುವೆ?

  ಇದರ ಜೊತೆಗೆ ಎರಡನೇ ಮದುವೆಯ ಬಗ್ಗೆಯೂ ಸುಳಿವು ನೀಡಿದ್ದಾರೆ. "ಮತ್ತೊಮ್ಮೆ ಜೀವನದಲ್ಲಿ ಮದುವೆ ಆಗುವ ಅವಕಾಶ ಬಂದರೆ ಖಂಡಿತ ಮದುವೆ ಆಗುವೆ" ಎಂದು ಹೇಳಿದ್ದಾರೆ. ಅರ್ಬಾಜ್ ಈಗ ಮಾಡೆಲ್ ಜಾರ್ಜಿಯಾ ಆಂಡ್ರಿಯಾನಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಹಾಗಾಗಿ ಸಧ್ಯದಲ್ಲೇ ಜಾರ್ಜಿಯಾ ಜೊತೆ ಅರ್ಬಾಜ್ ಮದುವೆ ಆಗಲಿದ್ದಾರಾ ಎನ್ನುವ ಅನುಮಾನ ಮೂಡಿದೆ.

  English summary
  bollywood actor Arbaaz Khan said about their marriage, their marriage that lasted for nearly two decades. Everything seemed fine but it crumbled.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X