»   » ಶ್ರೀದೇವಿ ಮನೆಯಲ್ಲಾದ ಹೊಸ ಬೆಳವಣಿಗೆ ಇದು.!

ಶ್ರೀದೇವಿ ಮನೆಯಲ್ಲಾದ ಹೊಸ ಬೆಳವಣಿಗೆ ಇದು.!

Posted By:
Subscribe to Filmibeat Kannada

ನಟಿ ಶ್ರೀದೇವಿಯ ಅಕಾಲಿಕ ಮರಣದಿಂದ ಇಡೀ ಕಪೂರ್ ಕುಟುಂಬ ಇನ್ನೂ ನೋವಿನ ಮಡುವಿನಲ್ಲಿದೆ. ಶ್ರೀದೇವಿಯ ಮಕ್ಕಳಾದ ಜಾಹ್ನವಿ ಹಾಗೂ ಖುಷಿಗೆ ಮಾನಸಿಕ ಸ್ಥೈರ್ಯ ತುಂಬಲು ಇಡೀ ಬಾಲಿವುಡ್ ಮುಂದಾಗಿದೆ.

ಇತ್ತ ವೈಯುಕ್ತಿಕ ಮನಸ್ತಾಪ ಮರೆತು ಬೋನಿ ಕಪೂರ್ ಮೊದಲ ಪತ್ನಿಯ ಮಕ್ಕಳಾದ ಅರ್ಜುನ್ ಕಪೂರ್ ಹಾಗೂ ಅನ್ಷುಲಾ ಕಪೂರ್ ಕೂಡ ಶ್ರೀದೇವಿಯ ಮಕ್ಕಳಿಗೆ ಮನೋಬಲ ತುಂಬಿದ್ದಾರೆ.

ಶ್ರೀದೇವಿಯ ನಿಧನದ ಸುದ್ದಿ ಕೇಳಿದ್ಮೇಲೆ, ಶೂಟಿಂಗ್ ನಲ್ಲಿ ಬಿಜಿಯಾಗಿದ್ದರೂ, ಚಿತ್ರೀಕರಣವನ್ನ ಅರ್ಧಕ್ಕೆ ಬಿಟ್ಟು ತಂದೆ ಬೋನಿ ಕಪೂರ್ ಗೆ ಬೆನ್ನೆಲುಬಾಗಲು ಅರ್ಜುನ್ ಕಪೂರ್ ದುಬೈಗೆ ಹಾರಿದ್ದರು. ಇತ್ತ ಜಾಹ್ನವಿ ಹಾಗೂ ಖುಷಿಗೆ ಅನ್ಷುಲಾ ಧೈರ್ಯ ಹೇಳುತ್ತಿದ್ದರು.

ಶ್ರೀದೇವಿ ಬದುಕಿದ್ದಾಗ, ಜಾಹ್ನವಿ-ಖುಷಿ ಜೊತೆಗೆ ಅರ್ಜುನ್-ಅನ್ಷುಲಾ ಅಷ್ಟಾಗಿ ಕಾಲ ಕಳೆದಿರಲಿಲ್ಲ. ಆದ್ರೆ, ಶ್ರೀದೇವಿ ಸಾವಿನ ಬಳಿಕ ಬೋನಿ ಕಪೂರ್ ಮಕ್ಕಳೆಲ್ಲ ಒಂದಾಗಿದ್ದಾರೆ. ಸಾಲದಕ್ಕೆ ಎಲ್ಲರೂ ಒಂದೇ ಸೂರಿನಡಿ ನೆಲೆಸಲು ನಿರ್ಧಾರ ಮಾಡಿದ್ದಾರಂತೆ. ಮುಂದೆ ಓದಿರಿ....

ತಂದೆ ಜೊತೆ ನೆಲೆಸಲು ಅರ್ಜುನ್, ಅನ್ಷುಲಾ ನಿರ್ಧಾರ

ಶ್ರೀದೇವಿ ಮನೆಯಲ್ಲಾಗಿರುವ ಹೊಸ ಬೆಳವಣಿಗೆ ಅಂದ್ರೆ ಇದೇ.! ಮೊದಲ ಮದುವೆಯನ್ನ ಮುರಿದುಕೊಂಡು ಶ್ರೀದೇವಿಯನ್ನ ಬೋನಿ ಕಪೂರ್ ಕೈಹಿಡಿದ್ಮೇಲೆ, ಮೋನಾ ಕಪೂರ್ ಹಾಗೂ ಮಕ್ಕಳಾದ ಅರ್ಜುನ್-ಅನ್ಷುಲಾ ಪ್ರತ್ಯೇಕವಾಗಿ ವಾಸವಿದ್ದರು. ತಂದೆಯ ಸಹಾಯ ಇಲ್ಲದೆ ಬಾಲಿವುಡ್ ನಲ್ಲಿ ಅರ್ಜುನ್ ಕಪೂರ್ ನೆಲೆಯೂರಿದರು. ತಾಯಿಯ ಸಾವಿನ ಬಳಿಕವೂ ತಂದೆಯ ಆಸರೆಗಾಗಿ ಅರ್ಜುನ್ ಹಾಗೂ ಅನ್ಷುಲಾ ಬಯಸಲಿಲ್ಲ. ಆದ್ರೆ, ಶ್ರೀದೇವಿ ಮರಣದ ನಂತರ ತಂದೆ ಬೋನಿ, ಜಾಹ್ನವಿ ಹಾಗೂ ಖುಷಿ ಜೊತೆಗೆ ವಾಸಿಸಲು ಅರ್ಜುನ್ ಹಾಗೂ ಅನ್ಷುಲಾ ತೀರ್ಮಾನ ಮಾಡಿದ್ದಾರಂತೆ. ಹಾಗಂತ ಬಿಟೌನ್ ನಲ್ಲಿ ಗುಲ್ಲೋ ಗುಲ್ಲು.

ಜಾಹ್ನವಿ-ಖುಷಿ ಕಪೂರ್ ಬಗ್ಗೆ ಕೆಟ್ಟ ಬೈಗುಳ: ನೆಟ್ಟಿಗರಿಗೆ ಪಾಠ ಕಲಿಸಿದ ಅನ್ಷುಲಾ!

ಸಹೋದರಿಯರ ಬಗ್ಗೆ ಅರ್ಜುನ್ ಕಾಳಜಿ

ಇಷ್ಟು ದಿನ ಸ್ವತಂತ್ರವಾಗಿ ಬದುಕಿದ್ದ ಅರ್ಜುನ್ ಕಪೂರ್ ಹಾಗೂ ಅನ್ಷುಲಾ ಇದೀಗ ತಂದೆ ಜೊತೆ ಇರಲು ಮನಸ್ಸು ಮಾಡಿದ್ದಾರಂತೆ. ಶ್ರೀದೇವಿಯನ್ನ ಕಳೆದುಕೊಂಡ ಆಘಾತದಲ್ಲಿರುವ ಬೋನಿ, ಜಾಹ್ನವಿ ಹಾಗೂ ಖುಷಿಗೂ ಅರ್ಜುನ್-ಅನ್ಷುಲಾ ಅವಶ್ಯಕತೆ ಇದ್ಯಂತೆ. ಸಹೋದರಿಯರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿರುವ ಅರ್ಜುನ್ ಕಪೂರ್, ಎಲ್ಲರ ಜೊತೆಯಲ್ಲೇ ಇರಲು ಡಿಸೈಡ್ ಮಾಡಿದ್ದಾರಂತೆ.

ಒಡೆದ ಕಪೂರ್ ಕುಟುಂಬ ಒಂದಾಗಿಸಿದ ಶ್ರೀದೇವಿ ಸಾವು!

ಜಾಹ್ನವಿ ಮುಖದಲ್ಲಿ ಮಂದಹಾಸ

ಹುಟ್ಟುಹಬ್ಬದ ದಿನ ಜಾಹ್ನವಿ ಖುಷಿಯಾಗಿರಬೇಕು ಎಂಬುದು ಬೋನಿ ಕಪೂರ್ ಬಯಕೆ ಆಗಿತ್ತು. ಜನ್ಮದಿನದಂದು ಜಾಹ್ನವಿ, ತನ್ನ ತಾಯಿಯನ್ನ ಮಿಸ್ ಮಾಡಿಕೊಳ್ಳುತ್ತಿದ್ದ ಕಾರಣ, ಆಕೆಯ ಮುಖದಲ್ಲಿ ಮಂದಹಾಸ ಮೂಡಿಸಲು ಫ್ಯಾಮಿಲಿ ಗೆಟ್ ಟು ಗೆದರ್ ಅರೇಂಜ್ ಮಾಡಿದ್ದು ಅನ್ಷುಲಾ ಕಪೂರ್.

ತಾಯಿಯನ್ನ ಕಳೆದುಕೊಂಡ ಬೋನಿ ಮೊದಲ ಪತ್ನಿಯ ಪುತ್ರ ಅಂದು ಆಡಿದ್ದ ಮಾತೇನು.?

ಎಲ್ಲರೂ ಒಟ್ಟಿಗೆ ಇರಲಿ

ಜಾಹ್ನವಿ ಹುಟ್ಟುಹಬ್ಬದ ದಿನ ಇಡೀ ಕಪೂರ್ ಕುಟುಂಬದ ಹೆಣ್ಮಕ್ಕಳೆಲ್ಲ ಒಂದಾಗಿದ್ದರು. ಅದನ್ನ ನೋಡಿ ಬೋನಿ ಕಪೂರ್ ಭಾವುಕರಾದರು. ಮಕ್ಕಳ ಒಡನಾಟ, ಹೊಂದಾಣಿಕೆ ನೋಡಿ ಎಲ್ಲರೂ ಒಟ್ಟಾಗಿ, ಒಗ್ಗಟ್ಟಾಗಿರಲಿ ಎಂಬುದೇ ಬೋನಿ ಕಪೂರ್ ಇಚ್ಛೆಯಾಗಿದೆ.

ಶ್ರೀದೇವಿಯನ್ನ ಬೋನಿ ಕೈಹಿಡಿದಾಗ, ಮೊದಲ ಪತ್ನಿ ಮೋನಾಗಾದ ಆಘಾತ ಅಷ್ಟಿಷ್ಟಲ್ಲ.!

English summary
After Sridevi's demise, Arjun Kapoor might move in with Father Boney Kapoor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada