Don't Miss!
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- News
ಜೆಡಿಎಸ್ ನಿಂದ ರಾಜ್ಯಕ್ಕೆ ಭವಿಷ್ಯವಿಲ್ಲ ಎಂದು ತೀರ್ಮಾನಿಸಿ ಹಲವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ: ಡಿ.ಕೆ.ಶಿವಕುಮಾರ್
- Technology
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- Sports
U-19 Women's T20 World Cup 2023: ನ್ಯೂಜಿಲೆಂಡ್ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟ ಭಾರತ ವನಿತೆಯರು
- Finance
PM kisan: ಬಜೆಟ್ನಲ್ಲಿ ಪಿಎಂ ಕಿಸಾನ್ ಯೋಜನೆ ಮೊತ್ತ ಏರಿಸಲಾಗುತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಲಯಾಳಂ ರಿಮೇಕ್ ಚಿತ್ರದಿಂದ ಹಿಂದೆ ಸರಿದ ಜೂ ಬಚ್ಚನ್, ಮತ್ತೊಬ್ಬ ನಟ ಎಂಟ್ರಿ
ಬಾಲಿವುಡ್‌ನಲ್ಲಿ ರಿಮೇಕ್ ಸಂಸ್ಕೃತಿ ಮುಂದುವರಿದಿದೆ. ಸೌತ್ ಇಂಡಸ್ಟ್ರಿಯಲ್ಲಿ ಹಿಟ್ ಚಿತ್ರಗಳನ್ನು ಹಿಂದಿಯಲ್ಲಿ ತಯಾರಿಸುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಸದ್ಯ ಮಲಯಾಳಂ ಸಿನಿಮಾದ ರಿಮೇಕ್ ಸುದ್ದಿ ಬಿಟೌನ್‌ನಲ್ಲಿ ಹೆಚ್ಚು ಸದ್ದು ಮಾಡ್ತಿದೆ. 2020ರಲ್ಲಿ ಬಿಡುಗಡೆಯಾಗಿದ್ದ 'ಅಯ್ಯಪ್ಪನುಮ್ ಕೋಶಿಯುಮ್' ಸಿನಿಮಾದ ರಿಮೇಕ್ ಹಕ್ಕು ಖರೀದಿಸಿರುವ ಬಾಲಿವುಡ್ ಸಂಸ್ಥೆ ಕಲಾವಿದರ ಆಯ್ಕೆಯಲ್ಲಿ ತೊಡಗಿಕೊಂಡಿದೆ.
ಅದಾಗಲೇ ಇಬ್ಬರು ಸ್ಟಾರ್ ನಟರನ್ನು ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದರಲ್ಲಿ ಒಬ್ಬರು ಅಭಿಷೇಕ್ ಬಚ್ಚನ್. ಜೂ ಬಚ್ಚನ್ ಈ ಸಿನಿಮಾ ಮಾಡಲು ಆಸಕ್ತಿ ತೋರಿದ್ದರು. ಆದ್ರೀಗ, ಈ ಪ್ರಾಜೆಕ್ಟ್‌ನಿಂದ ಹಿಂದೆ ಸರಿದಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಅಭಿಷೇಕ್ ಜಾಗಕ್ಕೆ ಮತ್ತೊಬ್ಬ ಸ್ಟಾರ್ ಕಲಾವಿದನನ್ನು ಚಿತ್ರತಂಡ ಕರೆತಂದಿದ್ದು, ಸದ್ಯದಲ್ಲೇ ಅಧಿಕೃತವಾಗಿ ಘೋಷಿಸಲಿದ್ದಾರೆ.
ಜಗನ್ ಶಕ್ತಿ ಈ ಚಿತ್ರವನ್ನು ಹಿಂದಿಯಲ್ಲಿ ತೆರೆಗೆ ತರಲು ತಯಾರಿ ನಡೆಸಿದ್ದು, ಅದಾಗಲೇ ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವರ್ಷದಲ್ಲೇ ಈ ಚಿತ್ರಕ್ಕೆ ಅಧಿಕೃತ ಚಾಲನೆ ನೀಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಮುಂದೆ ಓದಿ...

ಅಭಿಷೇಕ್ ಔಟ್, ಅರ್ಜುನ್ ಇನ್
ಅಯ್ಯಪ್ಪನುಮ್ ಕೋಶಿಯುಮ್ ಚಿತ್ರದ ಹಿಂದಿ ರಿಮೇಕ್‌ನಲ್ಲಿ ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರ ನಿರ್ವಹಿಸಬೇಕಿತ್ತು. ಆದ್ರೀಗ, ಅಭಿಷೇಕ್ ನಟಿಸುತ್ತಿಲ್ಲ ಎಂದು ಚಿತ್ರತಂಡ ಖಾತ್ರಿಪಡಿಸಿದೆ. ಜೂ ಬಚ್ಚನ್ ಜಾಗಕ್ಕೆ ಅರ್ಜುನ್ ಕಪೂರ್ ಎಂಟ್ರಿಯಾಗಿದೆ. ಈ ಕುರಿತು ಚಿತ್ರತಂಡ ಪಿಂಕ್‌ವಿಲ್ಲಾಗೆ ಖಚಿತಪಡಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಟೀಕೆ,
ಆರೋಪಕ್ಕೆ
ಬಗ್ಗದ
ಬಾಲಿವುಡ್:
10ಕ್ಕೂ
ಹೆಚ್ಚು
ಸಿನಿಮಾಗಳು
ರಿಮೇಕ್

ಅರ್ಜುನ್ ಕಪೂರ್-ಜಾನ್ ಅಬ್ರಹಾಂ
ಅಭಿಷೇಕ್ ಬಚ್ಚನ್ ಹೊರನಡೆದ ಬಳಿಕ ಅರ್ಜುನ್ ಕಪೂರ್ ಆ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಅರ್ಜುನ್ ಜೊತೆ ಜಾನ್ ಅಬ್ರಾಹಂ ಮತ್ತೊಬ್ಬ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಬಿಜು ಮೆನನ್ ಪಾತ್ರದಲ್ಲಿ ಜಾನ್ ಅಬ್ರಾಹಂ ನಟಿಸುತ್ತಿದ್ದರೆ, ಪೃಥ್ವಿರಾಜ್ ಸುಕುಮಾರನ್ ಪಾತ್ರದಲ್ಲಿ ಅರ್ಜುನ್ ಕಪೂರ್ ಅಭಿನಯಿಸಲಿದ್ದಾರೆ. ಸದ್ಯಕ್ಕೆ ಇವರಿಬ್ಬರು 'ಏಕ್ ವಿಲನ್ ರಿಟರ್ನ್ಸ್' ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾ ಮುಗಿಸಿ ಅಯ್ಯಪ್ಪನುಮ್ ಕೋಶಿಯುಮ್ ರಿಮೇಕ್ ಆರಂಭಿಸಲಿದ್ದಾರೆ. ಜಗನ್ ಶಕ್ತಿ ಈ ಚಿತ್ರ ನಿರ್ದೇಶಿಸುತ್ತಿದ್ದು, ನವೆಂಬರ್ ತಿಂಗಳಲ್ಲಿ ಚಿತ್ರಕ್ಕೆ ಚಾಲನೆ ಸಿಗಲಿದೆ.
ಮಲಯಾಳಂ
ಸಿನಿಮಾಗಳ
ಹಿಂದೆ
ಬಿದ್ದ
ಸ್ಟಾರ್ಸ್;
ಹಿಟ್
ಚಿತ್ರದ
ರಿಮೇಕ್ಗೆ
ಅಲ್ಲು
-
ಜಾನ್
ಪೈಪೋಟಿ

ತೆಲುಗಿನಲ್ಲಿ ಭೀಮ್ಲಾ ನಾಯಕ್
ಅಯ್ಯಪ್ಪನುಮ್ ಕೋಶಿಯುಮ್ ಸಿನಿಮಾ ತೆಲುಗಿನಲ್ಲಿ ತಯಾರಾಗುತ್ತಿದ್ದು, ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ನಟಿಸುತ್ತಿದ್ದಾರೆ. ಬಿಜು ಮೆನನ್ ಪಾತ್ರದಲ್ಲಿ ಪವನ್ ಕಲ್ಯಾಣ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಪಾತ್ರದಲ್ಲಿ ರಾಣಾ ದಗ್ಗುಬಾಟಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಭೀಮ್ಲಾ ನಾಯಕ್ ಎಂದು ಹೆಸರಿಟ್ಟಿದ್ದು, ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರಲಿದೆ. ಸಾಗರ್ ಕೆ ಚಂದ್ರ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸೂರ್ಯದೇವರ ನಾಗ ವಂಶಿ ನಿರ್ಮಾಣ ಮಾಡುತ್ತಿದ್ದಾರೆ. ತ್ರಿವಿಕ್ರಮ್ ಡೈಲಾಗ್ ಹಾಗೂ ಗೀತೆರಚನೆ ಮಾಡಲಿದ್ದು, ಎಸ್ ತಮನ್ ಸಂಗೀತ ಸಂಯೋಜಿಸಲಿದ್ದಾರೆ.

'ಅಯ್ಯಪ್ಪನುಮ್ ಕೋಶಿಯುಮ್' ಸಿನಿಮಾ ಬಗ್ಗೆ
'ಅಯ್ಯಪ್ಪನುಮ್ ಕೋಶಿಯುಮ್' ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಬಿಜು ಮೆನನ್ ನಟಿಸಿದ್ದರು. ಈ ಸಿನಿಮಾ 2020ರ ಫೆಬ್ರವರಿ 7 ರಂದು ತೆರೆಕಂಡಿತ್ತು. ಸಚಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಬಿಜೆ ಮೆನನ್ ಪತ್ನಿ ಪಾತ್ರದಲ್ಲಿ ಗೌರಿ ನಂದಾ ನಟಿಸಿದ್ದರು. ಸುಮಾರು 5 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರ 50 ಕೋಟಿಗೂ ಅಧಿಕ ಬಿಸಿನೆಸ್ ಮಾಡಿದೆ ಎಂದು ವರದಿಯಾಗಿದೆ.