»   » ಟ್ರೈಲರ್: ಅರ್ಜುನ್ ಕಪೂರ್ ಗೆ 'ಹಾಫ್ ಗರ್ಲ್ ಫ್ರೆಂಡ್' ಆಗಲು ಒಪ್ಪಿದ ಶ್ರದ್ಧಾ

ಟ್ರೈಲರ್: ಅರ್ಜುನ್ ಕಪೂರ್ ಗೆ 'ಹಾಫ್ ಗರ್ಲ್ ಫ್ರೆಂಡ್' ಆಗಲು ಒಪ್ಪಿದ ಶ್ರದ್ಧಾ

Posted By:
Subscribe to Filmibeat Kannada

ವಿಶ್ವದಾದ್ಯಂತ ಇಂಗ್ಲಿಷ್ ಓದುಗರ ಅಭಿಮಾನ ಗಳಿಸಿರುವ ಪ್ರಖ್ಯಾತ ಲೇಖಕ, ಕಾದಂಬರಿಕಾರ ಚೇತನ್ ಭಗತ್ ಅವರ ಕಾದಂಬರಿ ಆಧಾರಿತ 'ಹಾಫ್ ಗರ್ಲ್ ಫ್ರೆಂಡ್' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ.[ಸಲ್ಮಾನ್ ಖಾನ್ ಗೆ 'ಕಿಕ್' ಕೊಟ್ಟ ಚೇತನ್ ಭಗತ್]

ಈ ಹಿಂದೆ ಚೇತನ್ ಭಗತ್ ಅವರ ಕಾದಂಬರಿ ಆಧಾರಿತ ಚಿತ್ರ 'ಟು ಸ್ಟೇಟ್ಸ್' ಚಿತ್ರದಲ್ಲಿ ನಾಯಕನ ಪಾತ್ರ ಅಭಿನಯಿಸಿದ್ದ ಅರ್ಜುನ್ ಕಪೂರ್ ಮತ್ತು 'ಆಶಿಕಿ 2' ಖ್ಯಾತಿಯ ನಟಿ ಶ್ರದ್ಧಾ ಕಪೂರ್ ಕಾಂಬಿನೇಷನ್ ನ ಚಿತ್ರದ ಟ್ರೈಲರ್ ಅತ್ಯುತ್ತಮ ರೆಸ್ಪಾನ್ಸ್ ಪಡೆದಿದೆ. ಪ್ರಪ್ರಥಮ ಬಾರಿಗೆ ಅರ್ಜುನ್ ಕಪೂರ್ ಮತ್ತು ಶ್ರದ್ಧಾ ಕಪೂರ್ ತೆರೆ ಹಂಚಿಕೊಂಡಿರುವ ಅನ್ ಕಂಡೀಶನಲ್ ಲವ್ ಸ್ಟೋರಿಯ 'ಹಾಫ್ ಗರ್ಲ್ ಫ್ರೆಂಡ್' ಹಲವು ವಿಶೇಷತೆಗಳಿಂದ ಕೂಡಿದೆ. ಈ ಬಗ್ಗೆ ಡೀಟೇಲ್ಸ್ ನಿಮಗಾಗಿ ಇಲ್ಲಿದೆ. ಮುಂದೆ ಓದಿರಿ..

ಚೇತನ್ ಭಗತ್ ಕಾದಂಬರಿ ಆಧಾರಿತ ಸಿನಿಮಾ

'ಹಾಫ್ ಗರ್ಲ್ ಫ್ರೆಂಡ್' ಚಿತ್ರವು 2014 ರ ಅಕ್ಟೋಬರ್ ನಲ್ಲಿ ಬಿಡುಗಡೆ ಆದ ಚೇತನ್ ಭಗತ್ ರವರ ಅತಿ ಹೆಚ್ಚು ಮಾರಾಟವಾದ 'ಹಾಫ್ ಗರ್ಲ್ ಫ್ರೆಂಡ್' ಕಾಂದಬರಿ ಆಧಾರಿತ ಸಿನಿಮಾ. ಈ ಹಿಂದೆ ಚೇತನ್ ಭಗತ್ ರವರ ಕಾದಂಬರಿ ಆಧಾರಿತ ಚಿತ್ರಗಳಾದ '3 ಈಡಿಯಟ್ಸ್' ಮತ್ತು 'ಟು ಸ್ಟೇಟ್ಸ್' ಚಿತ್ರಗಳು ಸೂಪರ್ ಹಿಟ್ ಆಗಿದ್ದವು.

ಮೋಹಿತ್ ಸೂರಿ ನಿರ್ದೇಶನ

ಬಾಲಿವುಡ್ ಇತಿಹಾಸದಲ್ಲೇ ಹೊಸ ಟ್ರೆಂಡ್ ಸೃಷ್ಟಿಸಿದ ಸಂಗೀತ ಪ್ರಧಾನ ಚಿತ್ರ 'ಆಶಿಕಿ 2' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಮೋಹಿತ್ ಸೂರಿ 'ಹಾಫ್ ಗರ್ಲ್ ಫ್ರೆಂಡ್' ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ 'ಆಶಿಕಿ 2' ಚಿತ್ರದಲ್ಲಿ ನಾಯಕಿಯ ಪಾತ್ರ ಅಭಿನಯಿಸಿದ್ದ ಶ್ರದ್ಧಾ ಕಪೂರ್ ಅವರೂ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಅನ್ ಕಂಡೀಶನಲ್ ಲವ್ ಸ್ಟೋರಿ

'ಹಾಫ್ ಗರ್ಲ್ ಫ್ರೆಂಡ್' ಗ್ರಾಮೀಣ ಪ್ರದೇಶದ ಹುಡುಗನೊಬ್ಬ ಜೀವನದಲ್ಲಿ ಸಾಕಷ್ಟು ಕನಸುಗಳನ್ನು ಹೊತ್ತು ದೆಹಲಿಯ ಪ್ರಖ್ಯಾತ ಕಾಲೇಜಿಗೆ ಓದಲು ಸೇರುತ್ತಾನೆ. ನಂತರ ಈತನ ಜೀವನದಲ್ಲಿ ಆಗುವ ಘಟನೆಗಳು ಯಂಗ್ ಸ್ಟರ್ ಗಳಿಗೆ ಸ್ಫೂರ್ತಿ ಆಗುವ ಅಂಶಗಳನ್ನು ಹೊಂದಿರುವ ಚಿತ್ರಕಥೆ ಹೊಂದಿದೆ.

ಚಿತ್ರ ಬಿಡುಗಡೆ ಯಾವಾಗ?

ಬಾಲಾಜಿ ಮೋಶನ್ ಪಿಕ್ಚರ್ ಬ್ಯಾನರ್ ಅಡಿಯಲ್ಲಿ ಶೋಭಾ ಕಪೂರ್, ಎಕ್ತಾ ಕಪೂರ್, ಮೋಹಿತ್ ಸೂರಿ ಮತ್ತು ಚೇತನ್ ಭಗತ್ ಅವರ ಸಹ-ನಿರ್ಮಾಣದಲ್ಲಿ ತಯಾರಾಗಿರುವ 'ಹಾಫ್ ಗರ್ಲ್ ಫ್ರೆಂಡ್' ಮೇ 19 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಚಿತ್ರದ ಟ್ರೈಲರ್ ನೋಡಲು ಕ್ಲಿಕ್ ಮಾಡಿ

English summary
Arjun Kapoor-Shraddha Kapoor Starrer Chetan Bhagat's novel based film 'Half Girlfriend' trailer released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada