20 ವರ್ಷದ ದಾಂಪತ್ಯಕ್ಕೆ ಎಳ್ಳು ನೀರು ಬಿಟ್ಟ ನಟ ಅರ್ಜುನ್ ರಾಂಪಾಲ್
Recommended Video

ಬಾಲಿವುಡ್ ಅಂಗಳದ ಮೋಸ್ಟ್ ಬ್ಯೂಟಿಫುಲ್ ಕಪಲ್ ಅಂತಾನೇ ಕರೆಸಿಕೊಳ್ಳುತ್ತಿದ್ದ ನಟ ಅರ್ಜುನ್ ರಾಂಪಾಲ್ ಹಾಗೂ ಮಾಜಿ ಸೂಪರ್ ಮಾಡೆಲ್ ಮೆಹರ್ ಜೆಸಿಯಾ ದಾಂಪತ್ಯ 20 ವರ್ಷದ ನಂತರ ಮುರಿದು ಬಿದ್ದಿದೆ. ಒಬ್ಬರನೊಬ್ಬರು ಪರಸ್ಪರ ಪ್ರೀತಿ ಮದುವೆ ಆಗಿದ್ದರು ನಟ ಅರ್ಜುನ್ ರಾಂಪಾಲ್ ಹಾಗೂ ಮೆಹರ್ ಜೆಸಿಯಾ.
ಇಪ್ಪತ್ತು ವರ್ಷದ ದಾಂಪತ್ಯದ ಸಾಕ್ಷಿಯಾಗಿ ಮಿಕಿಕ (16) ಮತ್ತು ಮೈರಾ (13) ಎಂಬ ಇಬ್ಬರು ಮಕ್ಕಳು ಇದ್ದು ಸುಂದರವಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದ ಇಬ್ಬರು ಪರಸ್ಪರ ಒಪ್ಪಿಗೆಯಿಂದಾಗಿ ದೂರವಾಗಲು ನಿರ್ಧಾರ ಮಾಡಿದ್ದಾರೆ.
ಯಾವುದೇ ಅಂಜಿಕೆ ಇಲ್ಲದೆ ಇಬ್ಬರು ಇನ್ನು ಮುಂದೆ ಬೇರೆಯಾಗಿ ವಾಸ ಮಾಡುತ್ತೇವೆ ಎಂದು ತಿಳಿಸಿದ್ದು ಮಕ್ಕಳಿಗಾಗಿ ಒಟ್ಟಾಗಿ ಸೇರುವುದು, ಕಾರ್ಯಕ್ರಮಗಳಲ್ಲಿ ಆಗಾಗ ಪಾಲ್ಗೊಳ್ಳುವುದಾಗಿಯೂ ತಿಳಿಸಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಅರ್ಜುನ್ ರಾಂಪಾಲ್ ಹಾಗೂ ಮೆಹರ್ ಜೆಸಿಯಾ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣವಾದರೂ ಏನು ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

20 ವರ್ಷದ ದಾಂಪತ್ಯ ಜೀವನ ಅಂತ್ಯ
ಕಳೆದ 20 ವರ್ಷದ ವರ್ಷದಿಂದ ಸುಂದರ ಜೀವನ ನಡೆಸಿದ ನಟ ಅರ್ಜುನ್ ರಾಂಪಾಲ್ ಹಾಗೂ ಪತ್ನಿ ಮೆಹರ್ ಜೆಸಿಯಾ ಅಧಿಕೃತವಾಗಿ ಬೇರೆಯಾಗಿದ್ದಾರೆ. ಇನ್ನು ಮುಂದೆ ನಾವಿಬ್ಬರೂ ಪ್ರತ್ಯೇಕವಾಗಿ ವಾಸಿಸುವುದಾಗಿಯೂ ತಿಳಿಸಿದ್ದಾರೆ.

ಗಾಸಿಪ್ ನಿಜವಾಯ್ತು
ಈ ಹಿಂದೆಯೇ ಅರ್ಜುನ್ ರಾಂಪಾಲ್ ಹಾಗೂ ಪತ್ನಿ ಮೆಹರ್ ಜೆಸಿಯಾ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ. ಎನ್ನುವ ಸುದ್ದಿ ಕೇಳಿ ಬಂದಿತ್ತು. ಎರಡು ವರ್ಷದ ನಂತರ ಈ ವಿಚಾರ ನಿಜವಾಗಿದೆ.

ಮಕ್ಕಳಿಗಾಗಿ ಬದುಕುತ್ತೇವೆ
ಇಂದು ಬೇರಾಗಿರುವ ಅರ್ಜುನ್ ರಾಂಪಾಲ್ ಹಾಗೂ ಮೆಹರ್ ಜೆಸಿಯಾ ಅವರ ನಡುವಿನ ಪರಸ್ಪರ ಪ್ರೀತಿಯು ಶಾಶ್ವತವಾಗಿಯೇ ಇರುತ್ತದೆ ಅಂತೆ. ಅಷ್ಟೇ ಅಲ್ಲದೆ ನಾವು ಇನ್ನು ಮುಂದೆ ಮಕ್ಕಳ ಭವಿಷ್ಯಕ್ಕಾಗಿ ಬದುಕುತ್ತೇವೆ ಎಂದಿದ್ದಾರೆ.

ಖಾಸಗಿ ಬದುಕು ಬೇಕಾಗಿದೆ
ನಮ್ಮ ಆಯ್ಕೆ ಗಳು ಮತ್ತು ದಾರಿಗಳು ಬದಲಾಗಿವೆ. ಖಾಸಗಿ ಬದುಕು ಬೇಕು ಮತ್ತು ಅದರಂತೆ ಜೀವಿಸಬೇಕು ಎನ್ನುವುದು ಅರ್ಜುನ್ ರಾಂಪಾಲ್ ಮತ್ತು ಮೆಹರ್ ಜೆಸಿಯಾ ಅವರ ಆಸೆಯಂತೆ. ಆದ್ದರಿಂದ ಇಬ್ಬರು ಪರಸ್ಪರ ಇಷ್ಟಪಟ್ಟು ದೂರವಾಗಿದ್ದು ಮುಂದಿನ ಬೆಳವಣಿಗೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.


Click it and Unblock the Notifications











