For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ಸ್ಟಾರ್ ನಟನಿಗೆ ಮತ್ತೊಮ್ಮೆ ನೋಟಿಸ್ ನೀಡಿದ ಎನ್‌ಸಿಬಿ

  |

  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್‌ಗೆ ಎನ್‌ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಎರಡನೇ ಬಾರಿಗೆ ನೋಟಿಸ್ ನೀಡಿದೆ.

  ಡಿಸೆಂಬರ್ 16 ರಂದು ಎನ್‌ಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕೆಂದು ಅಧಿಕಾರಿಗಳು ಅರ್ಜುನ್ ರಾಂಪಾಲ್‌ಗೆ ಸೂಚಿಸಿದ್ದಾರೆ. ಇದಕ್ಕೂ ಮುಂಚೆ ನವೆಂಬರ್ 13 ರಂದು ರಾಂಪಾಲ್ ವಿಚಾರಣೆಗೆ ಎದುರಿಸಿದ್ದರು.

  ಮೊದಲ ಸಲ ವಿಚಾರಣೆಗೆ ಒಳಪಟ್ಟಾಗ ಅರ್ಜುನ್ ರಾಂಪಾಲ್ ಅವರನ್ನು ಸುಮಾರು ಏಳು ಗಂಟೆ ಕಾಲ ಅಧಿಕಾರಿಗಳು ಪ್ರಶ್ನಿಸಿದ್ದರು. ಅದಕ್ಕೂ ಮುಂಚೆ ನವೆಂಬರ್ 9 ರಂದು ರಾಂಪಾಲ್ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಕೆಲವು ನಿಷೇಧಿತ ಡ್ರಗ್ಸ್ ಪತ್ತೆಯಾಗಿತ್ತು ಎಂದು ವರದಿಯಾಗಿತ್ತು.

  ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಅರ್ಜುನ್ ರಾಂಪಾಲ್ ''ನಾನು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇನೆ, ನನ್ನ ಮನೆಯಲ್ಲಿ ಯಾವುದೇ ನಿಷೇಧಿತ ಡ್ರಗ್ಸ್ ಸಿಕ್ಕಿಲ್ಲ. ಎನ್‌ಸಿಬಿ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ'' ಎಂದು ಹೇಳಿದ್ದರು.

  ಇನ್ನು ಅರ್ಜುನ್ ರಾಂಪಾಲ್ ಗೆಳತಿ ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಅವರನ್ನು ಎರಡು ಬಾರಿ ವಿಚಾರಣೆಗೆ ಒಳಪಡಿಸಲಾಗಿದೆ. ಗೇಬ್ರಿಯೆಲಾ ಸಹೋದರನನ್ನು ಎನ್‌ಸಿಬಿ ಪೊಲೀಸರು ಬಂಧಿಸಿದ್ದರು.

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್‌ನಲ್ಲಿ ಡ್ರಗ್ಸ್ ಆಯಾಮ ಚುರುಕುಗೊಂಡಿದ್ದು, ಸುಮಾರು 25 ಜನರನ್ನು ಬಂಧಿಸಿದ್ದಾರೆ. ಶ್ರದ್ಧಾ ಕಪೂರ್, ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಕೆಲವು ಸ್ಟಾರ್ ಸೆಲೆಬ್ರಿಟಿಗಳು ಸಹ ವಿಚಾರಣೆಗೆ ಒಳಪಟ್ಟಿದ್ದರು.

  English summary
  Narcotics Control Bureau summons actor Arjun Rampal on 16th December, in a drugs case.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X