For Quick Alerts
  ALLOW NOTIFICATIONS  
  For Daily Alerts

  ಮುನ್ನಾಭಾಯಿ 3 ಸಿನಿಮಾ ನಿರ್ಮಾಣವಾಗುವುದು ಅನುಮಾನ ಎಂದ ಸರ್ಕಿಟ್

  |

  ಬಾಲಿವುಡ್‌ನ 100 ಅತ್ಯುತ್ತಮ ಸಿನಿಮಾಗಳ ಪಟ್ಟಿ ಮಾಡಿದರೆ ಅದರಿಂದ ಮುನ್ನಾಭಾಯಿ ಎಂಬಿಬಿಎಸ್ ಮತ್ತು ಲಗೇ ರಹೋ ಮುನ್ನಾ ಭಾಯಿ ಸಿನಿಮಾವನ್ನು ಹೊರಗಿಡಲು ಸಾಧ್ಯವಿಲ್ಲ.

  ಮುನ್ನಾಭಾಯಿ ಸರಣಿಯ ಎರಡೂ ಸಿನಿಮಾಗಳು ಕತೆಯ ದೃಷ್ಟಿಯಿಂದ ಬಾಲಿವುಡ್‌ ಮೇಲೆ ಆಯಾ ಕಾಲಕ್ಕೆ ಪ್ರಭಾವ ಬೀರಿದ ಸಿನಿಮಾಗಳು. ಒಂದು ಕ್ಲೀನ್ ಸಿನಿಮಾ ಹೇಗಿರಬೇಕೆಂದು ಹೊಸ ತಲೆಮಾರಿನ ನಿರ್ದೇಶಕರಿಗೆ ಮಾದರಿ ಹಾಕಿಕೊಟ್ಟ ಸಿನಿಮಾಗಳು. ಲಗೇ ರಹೋ ಮುನ್ನಾಭಾಯಿ ಸಿನಿಮಾ ಸಮಾಜದ ಮೇಲೆ ಬೀರಿದ ಪ್ರಭಾವ ಸಹ ಗಮನಾರ್ಹವಾದುದೇ.

  ಮುನ್ನಾಭಾಯಿ ಸರಣಿಯ ಎರಡನೇ ಸಿನಿಮಾ 'ಲಗೆ ರಹೋ ಮುನ್ನಾಭಾಯಿ' ಬಿಡುಗಡೆ ಆಗಿ 14 ವರ್ಷವಾಗಿದೆ. ಲಗೇ ರಹೋ ಮುನ್ನಾಭಾಯಿ ಸಿನಿಮಾ ಹಿಟ್ ಆದಾಗಲೇ ಮುನ್ನಾಭಾಯಿ ಸರಣಿಯ ಮೂರನೇ ಸಿನಿಮಾ ಬಗ್ಗೆ ಜೋರು ಚರ್ಚೆ ನಡೆದಿತ್ತು. ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಸಹ ಅದರ ಬಗ್ಗೆ ಮಾತನಾಡಿದ್ದರು. ಆದರೆ 14 ವರ್ಷವಾದರೂ ಮುನ್ನಾಭಾಯಿ ಸರಣಿಯ ಮೂರನೇ ಸಿನಿಮಾ ಸೆಟ್ಟೇರಿಲ್ಲ.

  ಈ ಬಗ್ಗೆ ಮಾತನಾಡಿರುವ ಮುನ್ನಾಭಾಯಿ ಸರಣಿಯ ಮುಖ್ಯ ನಟ ಅರ್ಷದ್ ವಾರ್ಸಿ, ಮುನ್ನಾಭಾಯಿ ಸರಣಿಯ ಮೂರನೇ ಸಿನಿಮಾ ನಿರ್ಮಾಣವಾಗುವುದು ಅನುಮಾನ. ನಿರ್ದೇಶಕ ರಾಜ್‌ಕುಮಾರ್ ಹಿರಾನಿ ತಮ್ಮನ್ನು ತಾವು ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಿಟ್ಟಿದ್ದಾರೆ ಹಾಗಾಗಿ ಅವರು ಮುನ್ನಾಭಾಯಿ ಸರಣಿ ಮುಂದುವರೆಸುವುದು ಅನುಮಾನ ಎಂದಿದ್ದಾರೆ.

  ಲಗೇ ರಹೋ ಮುನ್ನಾಭಾಯಿ ಸಿನಿಮಾದ ನಂತರ, 'ಮುನ್ನಾಭಾಯಿ ಗೋಸ್‌ ಟು ಅಮೆರಿಕ' ಹೆಸರಿನ ಸಿನಿಮಾ ಮಾಡಲಾಗುತ್ತದೆ ಎನ್ನಲಾಗಿತ್ತು. ಕೆಲವು ಪೋಸ್ಟರ್‌ಗಳು ಸಹ ಹರಿದಾಡಿದ್ದವು, ಆದರೆ ಸಿನಿಮಾ ಮಾತ್ರ ಸೆಟ್ಟೇರಲೇ ಇಲ್ಲ.

  Recommended Video

  ಹೊಸ ಜನ್ಮ ಸಿಕ್ಕಷ್ಟೇ ಖುಷಿ ಆಗುತ್ತೆ ನಂಗೆ | Filmibeat Kannada

  ಮುನ್ನಾಭಾಯಿ ಸಿನಿಮಾಕ್ಕೆ ದೊಡ್ಡ ಸಂಖ್ಯೆಯ ಅಭಿಮಾನಿಗಳು ಈಗಲೂ ಇದ್ದು, ಮುನ್ನಾಭಾಯಿ ಸರಣಿಯನ್ನು ಮುಂದುವರೆಸುವಂತೆ ಈಗಲೂ ರಾಜ್‌ಕುಮಾರ್ ಹಿರಾನಿ ಮೇಲೆ ಒತ್ತಡ ಹೇರುತ್ತಲೇ ಇರುತ್ತಾರೆ. ರಾಜ್‌ಕುಮಾರ್ ಹಿರಾನಿ, ಶಾರುಖ್ ಖಾನ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ.

  English summary
  Actor Arshad Warsi talks about Munnabhai 3 movie. He said Rajkumar Hirani may not do Munnabhai 3 movie.
  Saturday, December 5, 2020, 18:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X