twitter
    For Quick Alerts
    ALLOW NOTIFICATIONS  
    For Daily Alerts

    ಶಾರುಖ್ ಪುತ್ರನ ಬಂಧನದ ಬಗ್ಗೆ ಹೆಚ್ಚಿದ ಅನುಮಾನ: ಸ್ಯಾಮ್ ಡಿ ಸೋಜಾ ಯಾರು?

    |

    ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಈಗಾಗಲೇ 22 ದಿನಗಳಾಗಿವೆ. ಆರಂಭದಿಂದಲೂ ಈ ಬಂಧನದ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಲೇ ಇದ್ದವು. ಇದೀಗ ಅನುಮಾನ ಇನ್ನಷ್ಟು ಬಲವಾಗಿದೆ.

    ಅಕ್ಟೋಬರ್ 03 ರಂದು ಎನ್‌ಸಿಬಿಯು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಬಂಧಿಸಿತ್ತು. ಆದರೆ ಈಗ ಇದೇ ಪ್ರಕರಣದ ಸ್ವತಂತ್ರ್ಯ ಸಾಕ್ಷಿಧಾರನೊಬ್ಬ ಬಂಧನದ ಬಳಿಕ ನಡೆದ ಘಟನೆಗಳನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ ಕೋಟ್ಯಂತರ ಮೊತ್ತಕ್ಕೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆಘಾತಕಾರಿ ಅಂಶವನ್ನು ಬಹಿರಂಗಗೊಳಿಸಿದ್ದಾನೆ.

    ಎನ್‌ಸಿಬಿಯಿಂದ ಪ್ರಕರಣದ ಸಾಕ್ಷಿಧಾರ ಎಂದು ದಾಖಲಿಸಲ್ಪಟ್ಟಿರುವ ಪ್ರಭಾಕರ್ ಸಾಯಿಲ್ ಎಂಬಾತ, ತಾನು ಕೆಪಿ ಗೋಸಾವಿ (ಆರ್ಯನ್ ಖಾನ್ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದ ವ್ಯಕ್ತಿ)ಯ ಡ್ರೈವರ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 25 ಕೋಟಿ ಹಣಕ್ಕೆ ಒತ್ತಾಯ ಮಾಡುವಂತೆ, ಅದರಲ್ಲಿ ಎಂಟು ಕೋಟಿ ಹಣವನ್ನು ಎನ್‌ಸಿಬಿಯ ಸಮೀರ್ ವಾಂಖೆಡೆಗೆ ನೀಡಬೇಕಿದೆಯೆಂದು ಸ್ಯಾಮ್ ಡಿ ಸೋಜಾ ಎಂಬಾತನಿಗೆ ಹೇಳಿದ್ದ ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ. ಪ್ರಭಾಕರ್ ಸಾಯಿಲ್ ಹೇಳಿಕೆಯು ಪ್ರಕರಣಕ್ಕೆ ಅತಿ ದೊಡ್ಡ ಟ್ವಿಸ್ಟ್ ಅನ್ನೇ ನೀಡಿದೆ. ಮಹಾರಾಷ್ಟ್ರದ ಹಾಲಿ ಸಚಿವರು ಸಹ ಕೆಲವರು ಇದೀಗ ಎನ್‌ಸಿಬಿಯ ಕಾರ್ಯದ ಬಗ್ಗೆ ಬಹಿರಂಗವಾಗಿ ಅನುಮಾನ ವ್ಯಕ್ತಪಡಿಸಲು ಆರಂಭಿಸಿದ್ದಾರೆ.

    ವಿಡಿಯೋ ಬಿಡುಗಡೆ ಮಾಡಿರುವ ಸಂಜಯ್ ರಾವತ್

    ವಿಡಿಯೋ ಬಿಡುಗಡೆ ಮಾಡಿರುವ ಸಂಜಯ್ ರಾವತ್

    ಶಿವಸೇನಾ ಪಕ್ಷದ ಪ್ರಮುಖ ವಕ್ತಾರ, ಮಾಜಿ ಸಚಿವ ಸಂಜಯ್ ರಾವತ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಆ ವಿಡಿಯೋದಲ್ಲಿ ಕೆಪಿ ಗೋಸಾವಿ, ಆರ್ಯನ್ ಖಾನ್‌ನ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದ್ದಾನೆ. ಅದೇ ವಿಡಿಯೋದಲ್ಲಿ ಕಪ್ಪು ಬಟ್ಟೆ ಧರಿಸಿ ಸ್ಯಾಮ್ ಡಿಸೋಜಾ ಸಹ ಕುಳಿತಿದ್ದಾನೆ. ಕೆಪಿ ಗೋಸಾವಿ ಎನ್‌ಸಿಬಿಗೆ ಸಂಬಂಧಿಸಿದ ವ್ಯಕ್ತಿಯಲ್ಲ. ಆತ ತನ್ನನ್ನು ತಾನು ಖಾಸಗಿ ಡಿಟೆಕ್ಟಿವ್ (ಗೂಢಾಚಾರ) ಎಂದು ಹೇಳಿಕೊಂಡಿದ್ದಾನೆ. ಆತನ ವಿರುದ್ಧ ಪುಣೆ, ಮುಂಬೈಗಳಲ್ಲಿ ಕೆಲವು ವಂಚನೆ ಪ್ರಕರಣಗಳು ದಾಖಲಾಗಿವೆ. ಎನ್‌ಸಿಬಿ ಕಚೇರಿಯಲ್ಲಿ ಕೂತು ಖಾಸಗಿ ವ್ಯಕ್ತಿಗಳು ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳುತ್ತಿರುವುದು ತೀವ್ರ ಅನುಮಾನಕ್ಕೆ ಕಾರಣವಾಗಿದೆ. ವಿಡಿಯೋ ನೋಡಿದ ಹಲವರು ಎನ್‌ಸಿಬಿಯ ಕಾರ್ಯದಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

    25 ಕೋಟಿ ಹಣಕ್ಕೆ ಬೇಡಿಕೆ ಇಡಿ ಎಂದಿದ್ದ ಗೋಸಾವಿ

    25 ಕೋಟಿ ಹಣಕ್ಕೆ ಬೇಡಿಕೆ ಇಡಿ ಎಂದಿದ್ದ ಗೋಸಾವಿ

    ಇನ್ನು ಕೆಪಿ ಗೋಸಾವಿ, ಸ್ಯಾಮ್ ಡಿಸೋಜಾ ಎಂಬಾತನ ಬಳಿ 'ನೀವು 25 ಕೋಟಿ ಹಣಕ್ಕೆ ಅವರಲ್ಲಿ ಬೇಡಿಕೆ ಇಡಿ'' ಎಂದು ಹೇಳಿದ್ದಾಗಿ ಸಾಕ್ಷಿಧಾರ ಪ್ರಭಾಕರ್ ಹೇಳಿದ್ದಾರೆ. ಅಲ್ಲದೆ ಸ್ಯಾಮ್ ಡಿಸೋಜಾ, ಗೋಸಾವಿ ಹಾಗೂ ಶಾರುಖ್‌ರ ಮ್ಯಾನೇಜರ್ ಒಟ್ಟಿಗೆ ಕಾರಿನಲ್ಲಿ ಕುಳಿತು ಮಾತನಾಡಿದ್ದಾಗಿಯೂ ಪ್ರಭಾಕರ್ ಹೇಳಿದ್ದಾರೆ. ಈಗ ಈ ಸ್ಯಾಮ್ ಡಿಸೋಜಾ ಯಾರು ಎಂಬ ಅನುಮಾನವೂ ಎದ್ದಿದೆ.

    ''ಅಕ್ರಮ ಹಣ ಸಂಪಾದನೆಯೇ ಸ್ಯಾಮ್ ಡಿಸೋಜಾ ಕೆಲಸ''

    ''ಅಕ್ರಮ ಹಣ ಸಂಪಾದನೆಯೇ ಸ್ಯಾಮ್ ಡಿಸೋಜಾ ಕೆಲಸ''

    ''ಸ್ಯಾಮ್ ಡಿಸೋಜಾ ಮಹಾರಾಷ್ಟ್ರದ ಮಾತ್ರವೇ ಅಲ್ಲ ಭಾರತದ ದೊಡ್ಡ ಅಕ್ರಮ ಹಣ ವರ್ಗಾವಣೆ ಮಾಡುವ ವ್ಯಕ್ತಿ. ಅಕ್ರಮ ಚಟುವಟಿಕೆಗಳಿಂದ ಹಣ ಸಂಪಾದನೆ ಮಾಡುವುದೇ ಆತನ ಕಾರ್ಯ. ಆತನಿಗೆ ರಾಜಕಾರಣಿಗಳ, ಐಎಎಸ್-ಐಪಿಎಸ್ ಅಧಿಕಾರಿಗಳ ಸ್ನೇಹವಿದೆ. ಎನ್‌ಸಿಬಿ ಅಧಿಕಾರಿಗಳ ಸ್ನೇಹವೂ ಇವೆ. ಅವರೆಲ್ಲರ ಪರವಾಗಿ ಈತ ಅಕ್ರಮ ಹಣ ವಸೂಲಿ ಮಾಡಿ ಅದನ್ನು ವರ್ಗಾವಣೆ ಮಾಡುತ್ತಾನೆ. ಇದೇ ಅವನ ಕೆಲಸ. ಅಂಥಹಾ ವ್ಯಕ್ತಿ ಎನ್‌ಸಿಬಿ ಕಚೇರಿಯಲ್ಲಿ ಕುಳಿತಿದ್ದಾನೆ. ಇದೆಲ್ಲವೂ ಒಂದು ಆಟ. ಆದರೆ ನಿಜವಾದ ಆಟ ಈಗ ಶುರುವಾಗಿದೆ'' ಎಂದಿದ್ದಾರೆ ಸಂಜಯ್ ರಾವತ್.

    ದೇಶ ಪ್ರೇಮ, ಕರ್ತವ್ಯದ ಹೆಸರಲ್ಲಿ ಹಣ ವಸೂಲಿ: ಸಂಜಯ್

    ದೇಶ ಪ್ರೇಮ, ಕರ್ತವ್ಯದ ಹೆಸರಲ್ಲಿ ಹಣ ವಸೂಲಿ: ಸಂಜಯ್

    ''ದೇಶಭಕ್ತಿಯ ಹೆಸರಲ್ಲಿ, ಕರ್ತವ್ಯದ ಹೆಸರಲ್ಲಿ ಕೆಲವರು ಇಂಥಹಾ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ಆರ್ಯನ್ ಖಾನ್ ಪ್ರಕರಣದ ಮಹಾರಾಷ್ಟ್ರದ ಘನತೆಗೆ ಮಸಿ ಬಳಿಯಲೆಂದು ಹುಟ್ಟುಹಾಕಲಾಗಿರುವ ನಕಲಿ ಪ್ರಕರಣ. ಇದೀಗ ಪ್ರಭಾಕರನ್ ಈ ಪ್ರಕರಣದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿರುವುದು ಬಹಳ ಒಳ್ಳೆಯ ಕೆಲಸ. ಕರ್ತವ್ಯದ ಹೆಸರಲ್ಲಿ, ದೇಶಭಕ್ತಿಯ ಹೆಸರಲ್ಲಿ ಹಣ ವಸೂಲಿ, ಹಣ ಸಂಪಾದನೆಗೆ ಇಳಿದಿದ್ದಾರೆ. ಇಂಥಹವರಿಗೆ ಅಂತ್ಯ ಹಾಡಬೇಕಿದೆ. ಮಹಾರಾಷ್ಟ್ರ ಪೊಲೀಸರು ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು'' ಎಂದು ಸಂಜಯ್ ರಾವತ್ ಹೇಳಿದ್ದಾರೆ.

    ನಕಲಿ ದಾಖಲೆ ನೀಡಿ ಕೆಲಸ ಪಡೆದಿದ್ದ ಸಮೀರ್

    ನಕಲಿ ದಾಖಲೆ ನೀಡಿ ಕೆಲಸ ಪಡೆದಿದ್ದ ಸಮೀರ್

    ನಿನ್ನೆ ಮಾತನಾಡಿದ್ದ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್, ಸಮೀರ್ ವಾಂಖೆಡೆ ಮೇಲೆ ಲಂಚದ ಆರೋಪ ಹೊರಿಸಿದ್ದರು. ಆರ್ಯನ್ ಖಾನ್ ವಿರುದ್ಧ ಪ್ರಕರಣ ದಾಖಲಿಸದೇ ಇರಲು 25 ಕೋಟಿ ಹಣ ನೀಡುವಂತೆ ಸಮೀರ್ ವಾಂಖೆಡೆ ಬೇಡಿಕೆ ಇಟ್ಟಿದ್ದರು ಎಂದಿದ್ದರು. ಅಲ್ಲದೆ, ಸಮೀರ್ ವಾಂಖೆಡೆ, ಐಆರ್‌ಎಸ್‌ ಅಧಿಕಾರಿಯಾಗಿ ಹುದ್ದೆ ಗಿಟ್ಟಿಸಿಕೊಳ್ಳಲು ಸರ್ಕಾರಕ್ಕೆ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಸಮೀರ್‌ರ ಜನನ ಪ್ರಮಾಣ ಪತ್ರದ ಪ್ರತಿಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು.

    English summary
    A video related to Shah Rukh Khan's son Aryan Khan's arrest is leaked. In the video man in question Gosavi seen recording statement of Aryan Khan. private person Sam D'Souza also present in NCB office.
    Tuesday, October 26, 2021, 9:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X