For Quick Alerts
  ALLOW NOTIFICATIONS  
  For Daily Alerts

  Breaking: ಡ್ರಗ್ಸ್ ಪ್ರಕರಣ: ಶಾರುಖ್ ಪುತ್ರ ಆರ್ಯನ್ ಖಾನ್‌ಗೆ ಜಾಮೀನು

  |

  ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿ ಯಿಂದ ಬಂಧನಕ್ಕೆ ಒಳಗಾಗಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಕೊನೆಗೂ ಜಾಮೀನು ದೊರೆಕಿದೆ.

  ಅಕ್ಟೋಬರ್ 03 ರಂದು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್, ಅವರ ಗೆಳೆಯ ಅರ್ಬಾಜ್ ಸೇಠ್ ಮರ್ಚೆಂಟ್ ಹಾಗೂ ಮಾಡೆಲ್ ಮುನ್‌ಮುನ್ ಧಮೇಚಾ ಅವರುಗಳನ್ನು ಎನ್‌ಸಿಬಿಯು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿತ್ತು.

  ಬಂಧನಕ್ಕೆ ಒಳಪಟ್ಟ 25 ದಿನಗಳ ಬಳಿಕ ಆರ್ಯನ್ ಖಾನ್‌ಗೆ ಜಾಮೀನು ದೊರಕಿದೆ. ಮುಂಬೈನ ಆರ್ಥರ್ ರಸ್ತೆಯ ಜೈಲಿನಲ್ಲಿ ಆರ್ಯನ್ ಖಾನ್ ಪ್ರಸ್ತುತ ಇದ್ದು, ನಾಳೆ ಅಥವಾ ನಾಡಿದ್ದು ಆರ್ಯನ್ ಖಾನ್ ಬಿಡುಗಡೆ ಆಗಲಿದ್ದಾರೆ. ಷರತ್ತುಬದ್ಧ ಜಾಮೀನನ್ನು ಬಾಂಬೆ ಹೈಕೋರ್ಟ್ ನೀಡಿದ್ದು, ಷರತ್ತುಗಳನ್ನು ನಾಳೆ ಹೇಳುವುದಾಗಿ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಹೇಳಿದ್ದಾರೆ.

  ನವೆಂಬರ್ 02ನೇ ತಾರೀಖು ಶಾರುಖ್ ಖಾನ್ ಹುಟ್ಟುಹಬ್ಬ. ಜೊತೆಗೆ ದೀಪಾವಳಿ ಹಬ್ಬವೂ ಸಮಿಹದಲ್ಲೇ ಇತ್ತು. ಈ ಶುಭ ಸಂದರ್ಭದಲ್ಲಿ ಆರ್ಯನ್ ಖಾನ್ ಬಿಡುಗಡೆ ಆಗಿದೆ.

  ಜಾಮೀನಿನ ಷರತ್ತುಗಳನ್ನು ನ್ಯಾಯಾಲಯ ಅಂತಿಮಪಡಿಸಿಲ್ಲ. ಷರತ್ತುಗಳನ್ನು ಅಂತಿಮಗೊಳಿಸಿದ ಬಳಿಕ ಜಾಮೀನು ಆದೇಶವನ್ನು ವಕೀಲರಿಗೆ ನೀಡಲಾಗುತ್ತದೆ. ಅದನ್ನು ಜೈಲು ಅಧಿಕಾರಿಗೆ ನೀಡಿದ ಬಳಿಕ ಆರ್ಯನ್ ಖಾನ್ ಬಿಡುಗಡೆ ಆಗುತ್ತದೆ. ಆರ್ಯನ್ ಬಿಡುಗಡೆ ನಾಳೆ ಆಗುವ ಸಂಭವ ಇದೆ.

  ಆರ್ಯನ್ ಖಾನ್ ಬಂಧನವಾದಾಗಿನಿಂತಲೂ ಮೂರು ಬಾರಿ ಜಾಮೀನಿಗಾಗಿ ಯತ್ನಿಸಲಾಗಿತ್ತು, ಆದರೆ ಜಾಮೀನು ದೊರಕಿರಲಿಲ್ಲ. ಬಾಂಬೆ ಹೈಕೋರ್ಟ್‌ನಲ್ಲಿ ಹಿರಿಯ ವಕೀಲ ಮುಕುಲ್ ರೊಹ್ಟಗಿ ಆರ್ಯನ್ ಖಾನ್ ಪರ ವಾದ ಮಂಡನೆ ಮಾಡಿದರು. ಮುಕುಲ್ ವಾದ ಪುರಸ್ಕರಿಸಿದ ನ್ಯಾಯಾಲಯವು ಆರ್ಯನ್ ಖಾನ್ ಡ್ರಗ್ಸ್ ಸೇವಿಸಿದ್ದಾರೆಂದು, ಮಾದಕ ವಸ್ತು ಖರೀದಿಯಲ್ಲಿ ಶಾಮೀಲಾಗಿದ್ದಾರೆಂದು ಸಾಕ್ಷ್ಯಗಳನ್ನು ನೀಡಲು ಎನ್‌ಸಿಬಿ ವಿಫಲವಾಗಿದೆ ಎಂದು ಹೇಳಿ ಜಾಮೀನು ಮಂಜೂರು ಮಾಡಿದೆ.

  ಕಳೆದ ಎರಡು ದಿನಗಳಿಂದಲೂ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಹಾಗೂ ಮುನ್‌ಮುನ್ ಧಮೇಚಾ ಪರ ವಕೀಲರು ಜಾಮೀನಿಗಾಗಿ ವಾದ ಮಂಡಿಸಿದರು. ನಿನ್ನೆ ಪೂರ್ತಿ ಅರ್ಬಾಜ್ ಮರ್ಚೆಂಟ್ ಹಾಗೂ ಮುನ್‌ಮುನ್ ಪರ ವಕೀಲರು ಸರಣಿ ವಾದಗಳನ್ನು ಮಂಡಿಸಿದ್ದರು. ಇಂದೂ ಸಹ ಮುಕುಲ್ ರೊಹ್ಟಗಿ ವಿವರವಾಗಿ ವಾದ ಮಂಡಿಸಿದರು. ಕೊನೆಗೆ ನ್ಯಾಯಾಲಯವು ಜಾಮೀನು ನೀಡುತ್ತಿರುವುದಾಗಿ ಆದೇಶಿಸಿತು.

  ''ಆರ್ಯನ್ ಖಾನ್‌ಗೆ ಆ ಶಿಪ್‌ನಲ್ಲಿ ಅರ್ಬಾಜ್ ಸೇಠ್ ಮತ್ತು ಅಚಿತ್ ಹೊರತಾಗಿ ಇನ್ಯಾರೂ ಗೊತ್ತಿರಲಿಲ್ಲ. ಅಚಿತ್ ಅನ್ನು ಡ್ರಗ್ ಡೀಲರ್ ಎಂದು ಬಂಧಿಸಲಾಗಿದೆ. ಡೀಲರ್ ಆಗಿದ್ದರೆ ಅವನ ಬಳಿ ಕನಿಷ್ಟ 200 ಗ್ರಾಂ ಮಾದಕ ವಸ್ತು ಇರಬೇಕಿತ್ತು. ಆದರೆ ಅವನ ಬಳಿ 2.40 ಗ್ರಾಂ ಮಾತ್ರವನ್ನೇ ವಶಪಡಿಸಿಕೊಳ್ಳಲಾಗಿದೆ'' ಎಂದರು. ಕಳೆದ ಮೂರು ದಿನಗಳಿಂದಲೂ ಮುಕುಲ್ ರೊಹ್ಟಗಿ ವಿವಿಧ ಸಂದರ್ಭದಲ್ಲಿ ವಾದ ಮಂಡಿಸಿದ್ದಾರೆ.

  ಅಕ್ಟೋಬರ್ 02 ರಂದು ಕ್ರೋಡೆಲಿಯಾ ಹೆಸರಿನ ಶಿಫ್‌ನಲ್ಲಿ ಆಯೋಜಿಸಲಾಗಿದ್ದ ಪಾರ್ಟಿಗೆ ಆರ್ಯನ್ ಖಾನ್ ಅನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆರ್ಯನ್ ಖಾನ್‌ ಶಿಫ್‌ ಬಳಿ ಬಂದ ಕೂಡಲೇ ಅವರನ್ನು ತಪಾಸಣೆ ನಡೆಸಿ ವಶಕ್ಕೆ ಪಡೆಯಲಾಯಿತು. ಬೇರೊಂದು ಕಾರಿನಲ್ಲಿ ಬಂದಿದ್ದ ಆರ್ಯನ್ ಗೆಳೆಯ ಅರ್ಬಾಜ್ ಸೇಠ್ ಅನ್ನು ವಶಕ್ಕೆ ಪಡೆಯಲಾಯಿತು. ಆತನಿಂದ 6 ಗ್ರಾಂ ಚರಸ್ ಅನ್ನು ವಶಪಡಿಸಿಕೊಳ್ಳಲಾಯಿತು. ಅಕ್ಟೋಬರ್ 03 ರಂದು ಶಿಫ್‌ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ಆರ್ಯನ್, ಅರ್ಬಾಜ್ ಸೇಠ್, ಮುನ್‌ ಮುನ್ ಧಮೇಚಾ ಸೇರಿ ಒಂಬತ್ತು ಮಂದಿಯನ್ನು ವಶಕ್ಕೆ ಪಡೆಯಿತು. ಅದರ ಮಾರನೇಯ ದಿನ ಅಂದರೆ ಅಕ್ಟೋಬರ್ 03 ರಂದು ಆರ್ಯನ್ ಖಾನ್, ಅರ್ಬಾಜ್ ಸೇಠ್ ಮತ್ತು ಮುನ್‌ಮುನ್ ಧಮೇಚಾ ಅವರುಗಳನ್ನಷ್ಟೆ ಬಂಧಿಸಲಾಯ್ತು. ಎನ್‌ಸಿಬಿ ದಾಳಿ ಮಾಡಿದ ಪಾರ್ಟಿಯಲ್ಲಿ 1200 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

  English summary
  Aryan Khan gets bail in Bombay high court in drugs case. He was arrested on October 03 by NCB along with Arbaz Seth and Munmun Dhamecha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X