Don't Miss!
- Technology
ಭಾರತದಲ್ಲಿ ಮೊಬೈಲ್ ಡೌನ್ಲೋಡ್ ವೇಗದಲ್ಲಿ ಭಾರಿ ಬದಲಾವಣೆ!..ಓಕ್ಲಾ ವರದಿ!
- Lifestyle
ತೂಕ ಇಳಿಕೆಗೆ ಟ್ರೈ ಮಾಡುತ್ತಿದ್ದೀರಾ? ಈ ಪಾನೀಯಗಳನ್ನು ನಿಮ್ಮ ತೂಕ ಇಳಿಕೆಯ ಡಯಟ್ನಲ್ಲಿ ಸೇರಿಸಿ
- News
Karnataka 7th Pay Commission; ಪೊಲೀಸರ ನಿರೀಕ್ಷೆಗಳು
- Finance
Budget 2023: ಕೇಂದ್ರ ಬಜೆಟ್ನ ಇತಿಹಾಸ, ಕುತೂಹಲಕಾರಿ ಸಂಗತಿ ತಿಳಿಯಿರಿ
- Automobiles
ಭಾರತದದಲ್ಲಿ ಟ್ರೆಂಡಿಂಗ್ನಲ್ಲಿರುವ ಜನಪ್ರಿಯ ಕಾರುಗಳು: ಇವುಗಳಿಗೆ ಸರಿಸಾಟಿಯೇ ಇಲ್ಲ..!
- Sports
ಈ ಹಿಂದಿನಂತೆ ಈ ತಂಡ ಈಗ ಬಲಿಷ್ಠ ತಂಡವಲ್ಲ: ಆಕಾಶ್ ಚೋಪ್ರ ಹೇಳಿದ ಆ ತಂಡ ಯಾವುದು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್: ಎನ್‌ಸಿಬಿ ವಿರುದ್ಧ ಚಾಟಿ!
ದೇಶದ ಗಮನ ಸೆಳೆದಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ನಿರ್ದೋಷಿಯಾಗಿ ಹೊರಹೊಮ್ಮಿದ್ದಾರೆ. ಆರ್ಯನ್ ಖಾನ್ ವಿರುದ್ಧ ದೂರು ದಾಖಲಿಸಿ, ಬಂಧನಕ್ಕೆ ಒಳಪಡಿಸಿದ್ದ ಎನ್‌ಸಿಬಿಯೇ ಆರ್ಯನ್ ಖಾನ್ ಮೇಲಿನ ದೂರನ್ನು ಕೈಬಿಟ್ಟಿದೆ.
ಆದರೆ ಆರ್ಯನ್ ಖಾನ್ ಅನ್ನು ಬಂಧನಕ್ಕೆ ಒಳಪಡಿಸಿದಾಗ ಶಾರುಖ್ ಖಾನ್ ಅನ್ನು, ಬಾಲಿವುಡ್‌ನ ಲೈಫ್ ಸ್ಟೈಲ್ ಅನ್ನು, ಸ್ಟಾರ್ ಕಿಡ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಹೀಗಳೆಯಲಾಗಿತ್ತು. ಸಂಸ್ಕಾರ ಹೀನರು, ಪಾರ್ಟಿ ಫ್ರೀಕ್‌ಗಳು ಎಂದೆಲ್ಲ ಕರೆಯಲಾಗಿತ್ತು. ಆದರೆ ಈಗ ಆರ್ಯನ್ ಖಾನ್‌ನದ್ದು ತಪ್ಪಿರಲಿಲ್ಲವೆಂದು ಸ್ವತಃ ಎನ್‌ಸಿಬಿ ಒಪ್ಪಿಕೊಂಡಿದೆ. ಆಗ ಸ್ಟಾರ್ ಕಿಡ್ ಅನ್ನು ಬಂಧಿಸಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ಎನ್‌ಸಿಬಿ ಆಗಿನ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಈಗ ಬಾಲಿವುಡ್‌ನ ಕೆಲವರು ಟೀಕೆ ಮಾಡುತ್ತಿದ್ದಾರೆ.
ಡ್ರಗ್ಸ್
ಪ್ರಕರಣ:
ಶಾರುಖ್
ಪುತ್ರ
ಆರ್ಯನ್
ಖಾನ್‌ಗೆ
ಕ್ಲೀನ್
ಚಿಟ್
ನೀಡಿದ
ಎನ್‌ಸಿಬಿ
ಆರ್ಯನ್ ಖಾನ್ ಮಾತ್ರವಲ್ಲ, ಇಡೀ ಬಾಲಿವುಡ್ ಮೇಲೆ ಸತತವಾಗಿ ದಾಳಿ ನಡೆಸಿದ್ದ ಮಾಜಿ ಎನ್‌ಸಿಬಿ ಮುಂಬೈ ಘಟಕದ ಅಧಿಕಾರಿ ಸಮೀರ್ ವಾಂಖೆಡೆ, ಬಾಲಿವುಡ್ ಎಂದರೆ ನಶೆಯ ಕೂಪ ಎಂದು ಹೊರಗಿನವರು ಅಂದುಕೊಳ್ಳುವಂತೆ ಮಾಡಿದ್ದರು. ಈಗ ಆರ್ಯನ್ ಅನ್ನು ಸಾಕ್ಷಾಧಾರಗಳಿಲ್ಲದೆ ಬಂಧಿಸಲಾಗಿತ್ತು ಎಂಬ ಅಂಶ ಹೊರಬೀಳುತ್ತಿದ್ದಂತೆ ಸಮೀರ್ ವಿರುದ್ಧ ಬಾಲಿವುಡ್‌ನ ಕೆಲವರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮೀರ್ ವಿರುದ್ಧ ಟ್ವೀಟ್
ಆರ್ಯನ್ ಖಾನ್, ನಿರ್ದೋಷಿ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಟ್ವೀಟ್ ಮಾಡಿರುವ ಆಲಿಯಾ ಭಟ್ ಸಹೋದರಿ ಪೂಜಾ ಭಟ್, ''ಸಮೀರ್ ಎಲ್ಲಿ? ಓಹ್ ಬೇರೆಡೆ ಎಲ್ಲೋ ನೀತಿವಂತ, ಪ್ರಚಾರ ಅಪ್ರಿಯ ಅಧಿಕಾರಿ ಎಂದು ಫೋಸು ಕೊಡುತ್ತಿರುವುದರಲ್ಲಿ ಬ್ಯುಸಿಯಾಗಿರಬಹುದು. ತಾನು ಮಾಡಿರುವ ಸಾಕಷ್ಟು ಕೆಟ್ಟ ಕೆಲಸಗಳನ್ನು ಸ್ವಚ್ಚಗೊಳಿಸುತ್ತಿರಬಹುದು. ಏನೇ ಆಗಲಿ ನಮ್ಮ ಸಮಾಜದಲ್ಲಿರುವ ಭ್ರಷ್ಟತೆಯನ್ನು ನಿವಾರಣೆ ಮಾಡಲು 'ಕಡಿಮೆ ಭ್ರಷ್ಟ'ರಲ್ಲದೆ ಇನ್ಯಾರಿಂದ ಸಾಧ್ಯ?'' ಎಂದು ತೀಕ್ಷಣವಾಗಿ ಸಮೀರ್‌ಗೆ ಟಾಂಗ್ ನೀಡಿದ್ದಾರೆ ಪೂಜಾ ಭಟ್.

ಮಹೇಶ್ ಭಟ್ ವಿಚಾರಣೆ ಮಾಡಲಾಗಿತ್ತು
ಪೂಜಾ ಭಟ್ ಹೀಗೆ ಎನ್‌ಸಿಬಿ ಮಾಜಿ ಅಧಿಕಾರಿ ಸಮೀರ್ ವಿರುದ್ಧ ಟ್ವೀಟ್ ಮಾಡಲು ಕಾರಣವೂ ಇದೆ. 2020ರಲ್ಲಿ ಸುಶಾಂತ್ ಸಿಂಗ್ ಸಾವಿನ ಬಳಿಕ ಹೊರಬಂದ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್‌ನ ಹಲವಾರು ಮಂದಿ ಸೆಲೆಬ್ರಿಟಿಗಳನ್ನು ಎನ್‌ಸಿಬಿ ವಿಚಾರಣೆ ಮಾಡಿತ್ತು. ಅದರಲ್ಲಿ ಪೂಜಾ ಭಟ್ ತಂದೆ ಮಹೇಶ್ ಭಟ್ ಸಹ ಇದ್ದರು. ಪೂಜಾ ಭಟ್ ಸಹ ವಿಚಾರಣೆ ಎದುರಿಸಿದ್ದರು. ಇದೇ ಕಾರಣಕ್ಕೆ ಪೂಜಾ ಭಟ್, ಸಮೀರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

''ಅಮಾಯಕರಿಗೆ ಕಿರುಕುಳ ನೀಡಿವ ತನಿಖಾ ಸಂಸ್ಥೆಗಳು''
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಹ ಆರ್ಯನ್ ಖಾನ್ ಪ್ರಕರಣದ ಬಗ್ಗೆ ಟ್ವೀಟ್ ಮಾಡಿದ್ದು, ''ಆರ್ಯನ್ ಖಾನ್ ಪ್ರಕರಣದಿಂದ ಬೆಳಕಿಗೆ ಬಂದ ಏಕೈಕ ಒಳ್ಳೆಯ ವಿಷಯವೆಂದರೆ, ಸ್ಟಾರ್ ನಟ ಶಾರುಖ್ ಖಾನ್ ಮಗನಾಗಿರುವುದರಿಂದ ಮಾತ್ರವೇ ಆತ ಬಂಧನಕ್ಕೆ ಒಳಗಾಗಿದ್ದು ಎಂಬುದು ಹೊರಗೆ ಬಂದಿದೆ. ಜೊತೆಗೆ ಈ ಪ್ರಕಣವು, ಅಮಾಯಕರನ್ನು ಕಿರುಕುಳಕ್ಕೆ ಒಳಪಡಿಸುವ ವಿವಿಧ ಏಜೆನ್ಸಿಗಳ ಅಸಮರ್ಥತೆ ಮತ್ತು ಅಜಾಗರೂಕತೆಯನ್ನು ವ್ಯಾಪಕವಾಗಿ ಬಹಿರಂಗಪಡಿಸಲು ಸಹಾಯ ಮಾಡಿತು. ಇಲ್ಲದಿದ್ದರೆ ಸಾಮಾನ್ಯ ಜನರಿಗೆ ಇದು ಎಂದಿಗೂ ತಿಳಿಯುತ್ತಿರಲಿಲ್ಲ'' ಎಂದಿದ್ದಾರೆ ವರ್ಮಾ.

ಸಮೀರ್ ವಿರುದ್ಧ ಹಲವು ಆರೋಪ
ಆರ್ಯನ್ ಖಾನ್ ಬಂಧನದ ಬಳಿಕ ಸಮೀರ್ ವಾಂಖಡೆ ವಿರುದ್ಧ ಹಲವು ಸಾಕ್ಷಿ ಸಹಿತ ಆರೋಪಗಳನ್ನು ಮಾಡಲಾಯ್ತು. ಆರ್ಯನ್ ಖಾನ್ ಅನ್ನು ನಿಯಮಬಾಹಿರವಾಗಿ ಬಂಧಿಸಿರುವ ಅಂಶ ಬೆಳಕಿಗೆ ಬಂತು. ಕಿರಣ್ ಗೋಸಾಯಿ ಹಾಗೂ ಇನ್ನೂ ಇಬ್ಬರು ಹೊರಗಿನವರು ಆರ್ಯನ್ ಖಾನ್ ಪ್ರಕರಣದಲ್ಲಿ ಇನ್‌ವಾಲ್ವ್ ಆಗಿದ್ದ ಅಂಶ ಹೊರಬಂತು. ಕೊನೆಗೆ ಕಿರಣ್ ಗೋಸಾಯಿ, ಶಾರುಖ್‌ರ ಮ್ಯಾನೇಜರ್‌ನಿಂದ ಲಕ್ಷಾಂತರ ಹಣ ಪಡೆದ, ಅದರಲ್ಲಿ ಕೆಲ ಭಾಗವನ್ನು ಎನ್‌ಸಿಬಿಗೆ ಕೊಟ್ಟಿದ್ದ ಎಂಬ ಅಂಶವೂ ಸಹ ಹೊರ ಬಂತು. ಸಮೀರ್ ವಿರುದ್ಧ ಆರೋಪಗಳು ಹೆಚ್ಚಾಗುತ್ತಿದ್ದಂತೆ ಅವರನ್ನು ಮುಂಬೈ ಎನ್‌ಸಿಬಿಯಿಂದ ವರ್ಗಾವಣೆ ಮಾಡಲಾಯ್ತು.

ಹಲವು ಬಾಲಿವುಡ್ಡಿಗರಿಗೆ ನೊಟೀಸ್ ನೀಡಿದ್ದ ಸಮೀರ್
ಸುಶಾಂತ್ ಸಿಂಗ್ ಪ್ರಕರಣವಾದ ಬಳಿಕ ಬಾಲಿವುಡ್‌ನ ಹಲವರನ್ನು ಸಮೀರ್ ವಾಂಖಡೆ ವಿಚಾರಣೆಗೆ ಒಳಪಡಿಸಿದ್ದರು. ಅವಶ್ಯಕತೆ ಇಲ್ಲದ ಸಂದರ್ಭದಲ್ಲಿಯೂ ಹಲವು ಖ್ಯಾತನಾಮ ಬಾಲಿವುಡ್ಡಿಗರಿಗೆ ನೊಟೀಸ್ ನೀಡಿ ಕಚೇರಿಗೆ ವಿಚಾರಣೆಗೆ ಕರೆಸಿಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಕೆಲವರು ಆಗಲೇ ಸಮೀರ್ ವಿರುದ್ಧ ಮಾಡಿದ್ದರು. ನಟಿ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್, ಕರಣ್ ಜೋಹರ್, ಅರ್ಜುನ್ ರಾಮ್‌ಪಾಲ್, ಮಹೇಶ್ ಭಟ್, ಪೂಜಾ ಭಟ್ ಇನ್ನೂ ಹಲವರಿಗೆ ನೋಟೀಸ್ ನೀಡಿ ವಿಚಾರಣೆ ಮಾಡಲಾಗಿತ್ತು. ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಯನ್ನು ಹಾಗೂ ಆಕೆಯ ಸಹೋದರನನ್ನು ಇದೇ ಪ್ರಕರಣದಲ್ಲಿ ಬಂಧಿಸಲಾಗಿತ್ತು ಸಹ. ಆಗಿನಿಂದಲೂ ಬಾಲಿವುಡ್ಡಿಗರಿಗೆ ಸಮೀರ್ ವಿರುದ್ಧ ಸಿಟ್ಟಿತ್ತು. ಈಗ ಆರ್ಯನ್ ಪ್ರಕರಣದ ಬಳಿಕ ಸಮೀರ್ ಭ್ರಷ್ಟತನ ಹೊರಬಂದಿದ್ದಕ್ಕೆ ಹಲವರು ಬಾಲಿಡ್ಡಿಗರು ಖುಷಿಯಾಗಿದ್ದಾರೆ.