For Quick Alerts
  ALLOW NOTIFICATIONS  
  For Daily Alerts

  ಆರ್ಯನ್ ಜೊತೆ ಸೆಲ್ಫಿಗೆ ಪೋಸ್ ಕೊಟ್ಟ ವ್ಯಕ್ತಿ ಯಾರು?, ನಮ್ಮ ಅಧಿಕಾರಿಯಲ್ಲ ಎಂದ NCB

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಖ್ಯಾತ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಈಗ ಎನ್ ಸಿ ಬಿ ವಶದಲ್ಲಿದ್ದಾರೆ. ಐಷಾರಾಮಿ ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ಮಾಡುವಾಗ ಮಾದಕ ವಸ್ತು ನಿಯಂತ್ರಣ ಮಂಡಳಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ಆರ್ಯನ್ ಅವರನ್ನು ಅಕ್ಟೋಬರ್ 7ರ ವರೆಗೆ ಎನ್ ಸಿ ಬಿ ವಶಕ್ಕೆ ನೀಡಲಾಗಿದೆ. ರಾತ್ರಿ ಐಷಾರಾಮಿ ಹಡಗಿನಲ್ಲಿ ರೇವ್​ ಪಾರ್ಟಿ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿದಾಗ ಅನೇಕರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು. ಅದರಲ್ಲಿ ಶಾರುಖ್ ಖಾನ್ ಪುತ್ರ ಇರುವುದು ಶಾರುಖ್ ಅಭಿಮಾನಿಗಳಿಗೆ ಶಾಕ್ ನೀಡಿದೆ.

  ಆರ್ಯನ್ ಖಾನ್ ಮತ್ತು ಅನೇಕರನ್ನು ಎನ್ ಸಿ ಬಿ ಅಧಿಕಾರಿಗಳು ವಶಕ್ಕೆ ಪಡೆದು ಎಳೆದುತಂದು ಕಚೇರಿಯಲ್ಲಿ ಕೂರಿಸಲಾಗಿತ್ತು. ಈ ವೇಳೆ ವ್ಯಕ್ತಿಯೋರ್ವ ಆರ್ಯನ್ ಖಾನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಸಮಯದಲ್ಲೂ ಆರ್ಯನ್ ಖಾನ್ ಸೆಲ್ಫಿಗೆ ಪೋಸ್ ನೀಡಿರುವುದು ಅಚ್ಚರಿ ಮೂಡಿಸಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟಕ್ಕೂ ಸೆಲ್ಫಿ ಕ್ಲಿಕ್ಕಿಸಿಕೊಂಡ ವ್ಯಕ್ತಿ ಯಾರು ಎನ್ನುವ ಚರ್ಚೆ ಜೋರಾಗಿದೆ.

  ಕಚೇರಿಯೊಳಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವುದರಿಂದ ಅಧಿಕಾರಿಗಳೇ ಇರಬಹುದಾ ಎನ್ನುವ ಅನುಮಾನ ಎಲ್ಲರನ್ನು ಕಾಡಿತ್ತು. ಆದರೀಗ ಎನ್ ಸಿ ಬಿ ಅಧಿಕಾರಿಗಳು ಆ ವ್ಯಕ್ತಿ ನಮ್ಮ ಅಧಿಕಾರಿಯಲ್ಲ ಎಂದು ಸ್ಪಷ್ಟನೆ ನೀಡಿದೆ. ಎನ್ ಸಿ ಬಿ ಹೇಳಿಕೆ ಬಳಿಕ ಆ ವ್ಯಕ್ತಿ ಯಾರು ಎನ್ನುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. "ವೈರಲ್ ಫೋಟೋದಲ್ಲಿ ಆರ್ಯನ್​ ಖಾನ್​ ಜೊತೆ ಇರುವ ವ್ಯಕ್ತಿ ನಮ್ಮ ನೌಕರ ಅಲ್ಲ" ಎಂದು NCB ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಆದರೆ ಆ ವ್ಯಕ್ತಿ ಯಾರು ಎಂಬುದಕ್ಕೆ ಎನ್​ ಸಿ ಬಿ ಉತ್ತರ ನೀಡಿಲ್ಲ.

  ಡ್ರಗ್​ ಪ್ರಕರಣದಲ್ಲಿ ಸಿಲುಕಿರುವ ಶಾರುಖ್ ಪುತ್ರ ಆರ್ಯನ್​ ಖಾನ್​ ನನ್ನು ಎನ್ ​ಸಿ ಬಿ ಅಧಿಕಾರಿಗಳು ಸೋಮವಾರ (ಅಕ್ಟೋಬರ್ 4) ಮುಂಬೈನ ಕಿಲ್ಲಾ ಕೋರ್ಟ್​ ಎದುರು ಹಾಜರುಪಡಿಸಿದ್ದರು. ಈ ವೇಳೆ ಆರ್ಯನ್​ ಕಸ್ಟಡಿ ಅವಧಿಯನ್ನು ಅಕ್ಟೋಬರ್​ 13ರವರೆಗೆ ವಿಸ್ತರಿಸುವಂತೆ ಕೋರ್ಟ್​ ಮುಂದೆ ಎನ್ ​ಸಿ ಬಿ ಕೇಳಿತ್ತು. ಆದರೆ, ಅಕ್ಟೋಬರ್​ 7ರವರೆಗೆ ಎನ್​ ಸಿ ಬಿ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶ ಹೊರಡಿಸಿದೆ. ಆರ್ಯನ್​ ಜತೆಗೆ ಉಳಿದ ಆರೋಪಿಗಳ ಎನ್ ​ಸಿ ಬಿ ಕಸ್ಟಡಿ ಅವಧಿ ಕೂಡ ವಿಸ್ತರಣೆ ಆಗಿದೆ.

  English summary
  Aryan Khan selfie with mystery man photo viral, NCB says not an officer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X