»   » 'ವಿಷ್ಣು ಸೇನೆ'ಯ ಗೊಂಬೆ ಗುರ್ಲೀನ್ ಅಭಿನಯದ ಹಿಂದಿ ಚಿತ್ರ 'ಆಶ್ಲೇ'

'ವಿಷ್ಣು ಸೇನೆ'ಯ ಗೊಂಬೆ ಗುರ್ಲೀನ್ ಅಭಿನಯದ ಹಿಂದಿ ಚಿತ್ರ 'ಆಶ್ಲೇ'

Posted By:
Subscribe to Filmibeat Kannada

ಪಂಜಾಬಿ ನಟಿ ಗುರ್ಲೀನ್ ಚೋಪ್ರಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಬಾಲಿವುಡ್ ಚಿತ್ರವೊಂದು ಜನವರಿ 13 ರಂದು ಬಿಡುಗಡೆ ಆಗುತ್ತಿದೆ. ಕೆಲವರಿಗೆ ಯಾರು ಈ ಗುರ್ಲೀನ್ ಚೋಪ್ರಾ ಎಂದು ಸಂಶಯ ಕಾಡಬಹುದು...

ಪಂಜಾಬಿ ಮೂಲದ ಬಹುಭಾಷಾ ನಟಿ ಗುರ್ಲೀನ್ ಚೋಪ್ರಾ ಹಿಂದಿ, ಕನ್ನಡ, ತಮಿಳು, ತೆಲುಗು, ಭೋಜ್‌ಪುರಿ ಭಾಷೆಗಳ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಸರ್ದಾರ, ವಿಷ್ಟು ಸೇನಾ, ಪಾಂಡವರು, ಮನ್ಮಥ ಚಿತ್ರಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಇದೇ ಪ್ರಪ್ರಥಮ ಬಾರಿಗೆ ಭಾರತೀಯ ಮೂಲದ ಅಮೆರಿಕ ನಿವಾಸಿ ಸ್ವತಂತ್ರ ಗೋಯೆಲ್ ತಮ್ಮ ಮೊದಲ ಹಿಂದಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಕ್ರಿಯೇಟಿವ್ ಬರಹಗಾರರಾದ ಸ್ವತಂತ್ರ ಗೋಯೆಲ್ ಜನವರಿ 13 ರಂದು ಬಿಡುಗಡೆ ಮಾಡುತ್ತಿರುವ ಸಿನಿಮಾದಲ್ಲಿ ಗುರ್ಲೀನ್ ಚೋಪ್ರಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಚಿತ್ರ ಯಾವುದು ಮತ್ತು ಎಂಬಿತ್ಯಾದಿ ಮಾಹಿತಿಗಾಗಿ ಮುಂದೆ ಓದಿರಿ..

ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ

ಸ್ವತಂತ್ರ ಗೋಯೆಲ್‌ ರವರು ಜನವರಿ 13 ರಂದು ಬಿಡುಗಡೆ ಮಾಡುತ್ತಿರುವ ಬಾಲಿವುಡ್ ಸಿನಿಮಾ ಹೆಸರು 'ಆಶ್ಲೇ'. ಸ್ವತಂತ್ರ ಗೋಯೆಲ್‌(ಸವಿ) ರವರು ಯಾವಾಗಲು ವಸ್ತು ನಿಷ್ಠ ಸಿನಿಮಾಗಳನ್ನು ಬಾಲಿವುಡ್ ಮತ್ತು ಹಾಲಿವುಡ್‌ ನಲ್ಲಿ ನಿರ್ಮಾಣ ಮಾಡಲು ಬಯಸುತ್ತಾರೆ.

ಆಶ್ಲೇ ಸಿನಿಮಾದಲ್ಲಿ ಗುರ್ಲೀನ್ ಚೋಪ್ರಾ

ಆಶ್ಲೇ ಸಿನಿಮಾದಲ್ಲಿ ಪಂಜಾಬಿ ನಟಿ ಗುರ್ಲೀನ್ ಚೋಪ್ರಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ರಿಷಿ ಭುತನಿ ಗುರ್ಲೀನ್‌ ಚೋಪ್ರಾಗೆ ಕಾಂಬಿನೇಷನ್‌ ಆಗಿ ನಟಿಸಿದ್ದಾರೆ. ಗುರ್ಲೀನ್ ಚೋಪ್ರಾ ಹಿಂದಿ ಹೊರತು ಪಡಿಸಿ 25 ಇತರೆ ಭಾಷೆ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ದಿನೇಶ್ ಹಿಂಗು, ಶಕ್ತಿ ಕಪೂರ್, ಮೋಹಿತ್ ಬಗೆಲ್ ಮತ್ತು ಡೊಲೇ ಚಾವ್ಲಾ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರಕ್ಕೆ ದುಷ್ಯಂತ್ ದುಬೆ ಸಂಗೀತ ನಿರ್ದೇಶನ

ಸ್ವತಂತ್ರ ಗೋಯೆಲ್ ಚಿತ್ರಕ್ಕೆ ದುಷ್ಯಂತ್ ದುಬೆ ಸಂಗೀತ ನಿರ್ದೇಶನವಿದ್ದು, ಸುನಿಧಿ ಚೌಹಾಣ್, ದೇವ್ ನೇಗಿ, ದೀಪಾಲಿ ಹಾಡಿದ್ದಾರೆ.

ಸವಿ ಗೋಯೆಲ್ ಕ್ರಿಯೇಟಿವ್ ನಿರ್ದೇಶಕರು

ತಮ್ಮ ಸಿನಿಮಾಗೆ ಸ್ವತಂತ್ರ ಗೋಯೆಲ್ ಸ್ವತಃ ಕ್ರಿಯೇಟಿವ್ ನಿರ್ದೇಶರಾಗಿ, ಚಿತ್ರ ನಿರ್ದೇಶಕರಾದ ಕೇವಲ್ ಸಿಂಗ್ ಜೊತೆ ಕೆಲಸ ಮಾಡಿದ್ದಾರೆ. ಅಲ್ಲದೇ ಮಿನ್ ಮುನಿರ್ ಜೊತೆ ಸವಿ ಗೋಯೆಲ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

ಬಿಡುಗಡೆ

ಟ್ರೈಲರ್ ಮತ್ತು ಪೋಸ್ಟರ್ ಮೂಲಕ ಆಶ್ಲೇ ಚಿತ್ರ ಈಗಾಗಲೇ ಉತ್ತಮ ರೆಸ್ಪಾನ್ಸ್ ಪಡೆದಿತ್ತು. ರೊಮ್ಯಾಂಟಿಕ್ ಥ್ರಿಲ್ಲರ್ 'ಆಶ್ಲೇ' 2017 ರ ಜನವರಿ 13 ಕ್ಕೆ ಬಿಡುಗಡೆ ಆಗುತ್ತಿದೆ.

English summary
The Ashley story is a romantic thriller based on a small time singer of Goa, who ends of with becoming a celebrity singer in Bollywood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada