»   » ದಕ್ಷಿಣದ ಸಿನಿಮಾಗಳ ಮೇಲೆ ಅಸಿನ್ ಗೇಕೆ ಮುನಿಸು?

ದಕ್ಷಿಣದ ಸಿನಿಮಾಗಳ ಮೇಲೆ ಅಸಿನ್ ಗೇಕೆ ಮುನಿಸು?

Posted By:
Subscribe to Filmibeat Kannada

ಮಲ್ಲು ಕುಟ್ಟಿ ಅಸಿನ್, ಅದ್ಯಾವಾಗ ಕಾಲಿವುಡ್ ನಿಂದ ಸೀದಾ ಮುಂಬೈ ಗೆ ಹಾರಿದ್ರೋ, ಅಂದಿನಿಂದ ಅಸಿನ್ ಲಕ್ಕು ಖರಾಬ್ಹಾಗೋಗಿದೆ. ಅತ್ತ ಬಾಲಿವುಡ್ ನಲ್ಲಿ ಒಳ್ಳೆ ಅವಕಾಶಗಳು ಸಿಗದೆ, ಇತ್ತ ದಕ್ಷಿಣದಲ್ಲಿ ಸಿಕ್ಕ ಅವಕಾಶಗಳನ್ನು ಕೈಬಿಟ್ಟ ಅಸಿನ್ ಗೆ ಇನ್ನೂ ಜ್ಞಾನೋದಯ ಆಗಿಲ್ಲ ಅಂತ ಕಾಣುತ್ತೆ.

ಅದಾಗಲೇ ಅಸಿನ್ ತೆರೆಮೇಲೆ ಕಾಣಿಸಿಕೊಂಡು ಎರಡು ವರ್ಷವಾಗಿದೆ. ಅಕ್ಷಯ್ ಕುಮಾರ್ ಜೊತೆ ಖಿಲಾಡಿ 786 ಚಿತ್ರದಲ್ಲಿ ನಟಿಸಿದ ನಂತ್ರ, ಮತ್ತಿನ್ಯಾವ ಚಿತ್ರದಲ್ಲೂ ಅಸಿನ್ ಕಾಣಿಸಿಕೊಂಡಿಲ್ಲ. ಬಾಲಿವುಡ್ ನ ನಿರ್ಮಾಪಕರು ಬಹುತೇಕ ಅಸಿನ್ ರನ್ನ ಮರತೇ ಬಿಟ್ಟಿದ್ದಾರೆ. ಹೀಗಿದ್ರೂ, ದಕ್ಷಿಣಕ್ಕೆ ವಾಪಸ್ಸಾಗೋಕೆ ಅಸಿನ್ ಮನಸ್ಸು ಮಾಡಿಲ್ಲ. [ಅಕ್ಷಯ್ ಜತೆ ನಟಿಸಲು ನಿರಾಕರಿಸಿದಅಸಿನ್!]

Asin is not taking up any South movie projects

ಎರಡು ವರ್ಷಗಳಿಂದ ಸದ್ದು ಮಾಡದೆ ಖಾಲಿ ಕೂತಿದ್ರೂ, ಕಾಲಿವುಡ್ ಮತ್ತು ಟಾಲಿವುಡ್ ನಿಂದ ಬಂದಿರುವ ಅವಕಾಶಗಳನ್ನು ಅಸಿನ್ ಒಪ್ಪಿಕೊಂಡಿಲ್ಲ. ಹಾಗೆ ಇನ್ನು ಮುಂದಕ್ಕೂ ಒಪ್ಪಿಕೊಳ್ಳೋದಿಲ್ಲ! ಹಾಗಂತ ಖುದ್ದು ಅಸಿನ್ ಹೇಳಿಕೆ ನೀಡಿದ್ದಾರೆ. [ಸಂಸಾರ ನೌಕೆ ಹತ್ತಲಿರುವ ಮಲ್ಲು ಬೆಡಗಿ ಅಸಿನ್]

ಇತ್ತೀಚೆಗಷ್ಟೇ, ಅಸಿನ್ ಮತ್ತೆ ದಕ್ಷಿಣದ ಚಿತ್ರವೊಂದರ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಅನ್ನುವ ಸುದ್ದಿ ಹಬ್ಬಿತ್ತು. ಇದನ್ನ ಅಲ್ಲಗೆಳೆದಿರುವ ಅಸಿನ್, ''ನಾನು ಯಾವುದೇ ದಕ್ಷಿಣ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಸದ್ಯಕ್ಕೆ ನಾನು ಅಂತಹ ಯಾವುದೇ ಅವಕಾಶಗಳಿಗೆ ಮಣಿಹಾಕುತ್ತಿಲ್ಲ'', ಅಂತ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದ್ದಕ್ಕಿದ್ದಹಾಗೆ ಅಸಿನ್ ಇಂತಹ ನಿರ್ಧಾರ ಕೈಗೊಳ್ಳುವುದಕ್ಕೆ ಕಾರಣವೇನು ಅನ್ನುವುದನ್ನ ಆ ದೇವರೇ ಬಲ್ಲ. ದಕ್ಷಿಣದ ಚಿತ್ರಗಳಿಂದಲೇ ಜನಮೆಚ್ಚುಗೆಗೆ ಪಾತ್ರವಾಗಿದ್ದ ಅಸಿನ್ ಗೆ, ಸೌತ್ ಸಿನಿಮಾಗಳ ಬಗ್ಗೆ ಮುನಿಸು ಏಕೆ? ಹೋಗಲಿ ಕೆಲಸವಿಲ್ಲದೇ ಅಸಿನ್ ಮಾಡುತ್ತಿರುವುದಾದರೂ ಏನು? ಈ ಪ್ರಶ್ನೆಗಳಿಗೆ ಅಸಿನ್ ಉತ್ತರ ಕೊಡಲಿಲ್ಲ.! (ಏಜೆನ್ಸೀಸ್)

English summary
Kollywood Actress Asin, who made into Bollywood quite sometime back, seems to be not interested in taking up projects from South Indian Industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada