Don't Miss!
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- News
ಬೆಂಗಳೂರು ಏರ್ಪೋರ್ಟ್ ಭದ್ರತೆಗೆ 1,700 ಹೆಚ್ಚುವರಿ ಸಿಬ್ಬಂದಿ
- Sports
ನ್ಯೂಜಿಲೆಂಡ್ ವಿರುದ್ಧ ಗೆದ್ದು ಸರಣಿ ಸಮಬಲಗೊಳಿಸಿದರೂ ಅಚ್ಚರಿ ವ್ಯಕ್ತಪಡಿಸಿದ ನಾಯಕ ಹಾರ್ದಿಕ್ ಪಾಂಡ್ಯ
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022ರ ದಾಖಲೆಗಳ ಮುರಿದು ಮುನ್ನುಗ್ಗುತ್ತಿದೆ 'ಅವತಾರ್ 2: ಈವರೆಗೆ ಬಾಚಿದ್ದು ಎಷ್ಟು ಸಾವಿರ ಕೋಟಿ?
'ಅವತಾರ್ 2' ಸಿನಿಮಾ ಬಿಡುಗಡೆಗೆ ಮುನ್ನವೇ ವಿಶ್ವದಾದ್ಯಂತ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ. ಈ ಸಿನಿಮಾ ಈಗಿರುವ ಹಲವು ದಾಖಲೆಗಳನ್ನು ಪುಡಿಗಟ್ಟುತ್ತದೆ ಎಂದು ಮೊದಲೇ ನಿರೀಕ್ಷಿಸಲಾಗಿತ್ತು. ಅಂತೆಯೇ ಆಗಿದೆ.
ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆ ಆಗಿದ್ದ ಅವತಾರ್ 2 ಅಥವಾ 'ಅವತಾರ್; ದಿ ವೇ ಆಫ್ ವಾಟರ್' ಸಿನಿಮಾ ನಿರೀಕ್ಷೆ ಮಾಡಿದಷ್ಟು ಭಾರಿ ದೊಡ್ಡ ಆರಂಭ ಪಡೆಯಲಿದ್ದರು, ನಿಧಾನಕ್ಕೆ ಆದರೆ ಸ್ಥಿರವಾಗಿ ಬಾಕ್ಸ್ ಆಫೀಸ್‌ನಲ್ಲಿ ಪ್ರದರ್ಶನ ತೋರುತ್ತಿದೆ.
ದೊಡ್ಮನೆ
ಹುಡುಗನ
ಸಿನಿಮಾ
ನಿರ್ದೇಶಿಸಲಿರುವ
ಸಿಂಪಲ್
ಸುನಿ
2022ರ ಕೊನೆಯಲ್ಲಿ ಬಿಡುಗಡೆ ಆದರೂ ಸಹ 'ಅವತಾರ್; ದಿ ವೇ ಆಫ್ ವಾಟರ್' ಸಿನಿಮಾವು 2022 ರ ಹಲವು ಸಿನಿಮಾಗಳ ಬಾಕ್ಸ್ ಆಫೀಸ್ ದಾಖಲೆಯನ್ನು ಕೆಲವೇ ದಿನಗಳಲ್ಲಿ ಪುಡಿಗಟ್ಟಿ ಮುಂದಡಿ ಇಟ್ಟಿದೆ. ಕೆಲವೇ ದಿನಗಳಲ್ಲಿ ಹೊಸ ವಿಶ್ವದಾಖಲೆಯನ್ನು ನಿರ್ಮಿಸುವ ಲಕ್ಷಣಗಳು ಗೋಚರಿಸುತ್ತಿವೆ.

ಭಾರಿ ಕಲೆಕ್ಷನ್ ಮಾಡುತ್ತಿರುವ 'ಅವತಾರ್ 2'
ಡಿಸೆಂಬರ್ 16 ರಂದು ಬಿಡುಗುಡೆ ಆದ 'ಅವತಾರ್; ದಿ ವೇ ಆಫ್ ವಾಟರ್' ಸಿನಿಮಾವು ಕೇವಲ 20 ದಿನಗಳಲ್ಲಿ 1.5 ಬಿಲಿಯನ್ ಡಾಲರ್ ಅಂದರೆ ಭಾರತೀಯ ರುಪಾಯಿ ಲೆಕ್ಕದಲ್ಲಿ 12 ಸಾವಿರ ಕೋಟಿ ಕಲೆಕ್ಷನ್ ಮಾಡಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಇಷ್ಟು ಕಡಿಮೆ ಅವಧಿಯಲ್ಲಿ ಇನ್ಯಾವ ಸಿನಿಮಾವೂ ಗಳಿಸಿಲ್ಲ. ಅಲ್ಲದೆ, 2022 ರಲ್ಲಿ ಬಿಡುಗಡೆ ಆಗಿ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಹಣ ದೋಚಿದ ಸಿನಿಮಾ ಎಂಬ ಖ್ಯಾತಿಗೂ 'ಅವತಾರ್ 2' ಸಿನಿಮಾ ಪಾತ್ರವಾಗಿದೆ.

ಟಾಮ್ ಕ್ರೂಸ್ ಸಿನಿಮಾ ದಾಖಲೆ ಉಡೀಸ್
2022 ರ ನಡುವಲ್ಲಿ ಬಿಡುಗಡೆ ಆಗಿದ್ದ ಟಾಮ್ ಕ್ರೂಸ್ ನಟನೆಯ 'ಟಾಪ್ ಗನ್ ಮಾವರಿಕ್' ಸಿನಿಮಾವು 1.49 ಬಿಲಿಯನ್ ಅಂದರೆ 12,218 ಕೋಟಿ ರುಪಾಯಿ ಗಳಿಕೆ ಮಾಡಿತ್ತು. ಈ ದಾಖಲೆಯನ್ನು ಮುರಿದಿರುವ 'ಅವತಾರ್ 2' ಸಿನಿಮಾವು 12,400 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದೆ. ಆ ಮೂಲಕ 2022 ರಲ್ಲಿ ಬಿಡುಗಡೆ ಆಗಿ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಎಂಬ ಖ್ಯಾತಿಗೆ ಈ ಸಿನಿಮಾ ಪಾತ್ರವಾಗಿದೆ.

ಟಾಪ್ ಆಗಲು ಇನ್ನೂ ಎಂಟು ಸಿನಿಮಾಗಳನ್ನು ದಾಟಬೇಕು
'ಅವತಾರ್ 2' ಸಿನಿಮಾ ದೊಡ್ಡ ಮೊತ್ತದ ಕಲೆಕ್ಷನ್ ಮಾಡುತ್ತಿದೆಯಾದರೂ ಈ ಸಿನಿಮಾ ಟಾಪ್ 1 ಕ್ಕೆ ಏರಲು ಇನ್ನೂ ಎಂಟು ಸಿನಿಮಾಗಳನ್ನು ದಾಟಬೇಕಿದೆ. ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದ್ದರೂ ಸಹ ಹದಿಮೂರು ವರ್ಷದ ಹಿಂದೆ ಬಿಡುಗಡೆ ಆಗಿದ್ದ 'ಅವತಾರ್' ಮೊದಲ ಭಾಗದ ಕಲೆಕ್ಷನ್ ಅನ್ನು ಬೀಟ್ ಮಾಡಲು ಇನ್ನೂ ಸರಿ ಸುಮಾರು ಒಂದು ಬಿಲಿಯನ್ ಡಾಲರ್ ಅಂದರೆ 8200 ಕೋಟಿ ರುಪಾಯಿ ಕಲೆಕ್ಷನ್ ಮಾಡಬೇಕಿದೆ. ಆದರೆ 'ಜುರಾಸಿಕ್ ವರ್ಲ್ಡ್' ಹಾಗೂ ಮಾರ್ವೆಲ್‌ನ ಕೆಲವು ಸಿನಿಮಾಗಳ ದಾಖಲೆಗಳನ್ನು ಶೀಘ್ರದಲ್ಲಿಯೇ 'ಅವತಾರ್ 2' ಮುರಿಯಲಿದೆ.

ಅವತಾರ್ ಸಿನಿಮಾ ಸರಣಿ
'ಅವತಾರ್ 2' ಸಿನಿಮಾವನ್ನು 'ಟೈಟ್ಯಾನಿಕ್' ಖ್ಯಾತಿಯ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ನಿರ್ದೇಶನ ಮಾಡಿದ್ದಾರೆ. ಮೊದಲ 'ಅವತಾರ್' ಸಿನಿಮಾ ಬಿಡುಗಡೆ ಆಗಿ ಹದಿಮೂರು ವರ್ಷಗಳ ಬಳಿಕ 'ಅವತಾರ್ 2' ಬಿಡುಗಡೆ ಆಗಿದೆ. ಹಾಗಿದ್ದರೂ ಸಹ ಸಿನಿಮಾ ಸೂಪರ್ ಡೂಪರ್ ಆಗಿದೆ. 'ಅವತಾರ್ 3' ಸಿನಿಮಾ ಸಹ ಈಗಾಗಲೇ ತಯಾರಾಗಿದ್ದು ಆ ಸಿನಿಮಾ 2024 ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಅದರ ಬಳಿಕ 'ಅವತಾರ್ 4' ಮತ್ತು 'ಅವತಾರ್ 5' ಸಿನಿಮಾಗಳು ಸಹ ಬಿಡುಗಡೆ ಆಗಲಿವೆ.