»   » ಕ್ರಿಕೆಟರ್ ಅಜರ್ ಲುಕ್ ನಲ್ಲಿ ಇಮ್ರಾನ್ ಹಶ್ಮಿ ಮಿಂಚಿಂಗ್

ಕ್ರಿಕೆಟರ್ ಅಜರ್ ಲುಕ್ ನಲ್ಲಿ ಇಮ್ರಾನ್ ಹಶ್ಮಿ ಮಿಂಚಿಂಗ್

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಏಕ್ತಾ ಕಪೂರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮಾಜಿ ಕ್ರಿಕೆಟ್ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ಜೀವನ ಆಧಾರಿತ ಚಿತ್ರದ ಫಸ್ಟ್ ಲುಕ್ ಹೊರಬಂದಿದೆ. ನಟ ಇಮ್ರಾನ್ ಹಶ್ಮಿ ಅವರು ನಾಯಕನಾಗಿ ಅಜರುದ್ದೀನ್ ಸ್ಟೈಲಿನಲ್ಲಿ ವಾಕ್ ಮಾಡುತ್ತಿರುವ ಚಿತ್ರ ಗಮನ ಸೆಳೆಯುವಂತಿದೆ.

  ಹಮಾರಿ ಅಧೂರಿ ಕಹಾನಿ ಚಿತ್ರದಲ್ಲಿ ವಿದ್ಯಾ ಬಾಲನ್ ಜೊತೆ ಡ್ಯುಯೆಟ್ ಹಾಡುವ ಇಮ್ರಾನ್ ಹಶ್ಮಿ ಈಗ 'ಅಜರ್' ಚಿತ್ರದಲ್ಲಿ ಬ್ಯಾಟ್ ಬೀಸಲಿದ್ದಾರೆ. ಮೊಹಮ್ಮದ್ ಅಜರುದ್ದೀನ್ ಅವರ ಕ್ರಿಕೆಟ್ ಜೀವನದ ಏಳು ಬೀಳು, ವೃತ್ತಿ ಬದುಕು ಹಾಗೂ ವೈಯಕ್ತಿಕ ಜೀವನದ ನಡುವಿನ ಸಂಘರ್ಷಗಳನ್ನು ತೆರೆಯ ಮೇಲೆ ತರಲು ನಿರ್ದೇಶಕ ಟೋನಿ ಡಿಸೋಜಾ ಯತ್ನಿಸುತ್ತಿದ್ದಾರೆ.

  Azhar First Look: Emraan Hashmi Looks Impressive As Mohammad Azharuddin

  ಫಸ್ಟ್ ಲುಕ್ ಚಿತ್ರದಲ್ಲಿ ಪೆವಿಲಿಯನ್ ನಿಂದ ಪಿಚ್ ಕಡೆಗೆ ನಡೆದು ಬರುತ್ತಿರುವ ಅಜರುದ್ದೀನ್ ಚಿತ್ರ ಕಾಣಿಸುತ್ತದೆ. ಒಂದು ಕಡೆ ಅಭಿಮಾನಿಗಳ ಚೀರಾಟ ಮತ್ತೊಂದೆಡೆ ಪ್ರತಿಕೃತಿ ದಹನವನ್ನು ಕಾಣಬಹುದು. ಅಜರ್ ಮುಖದಲ್ಲಿ ಗೆಲುವಿನ ನಗೆ ಇಲ್ಲ. ಅಜರ್ ಹಾಕಿಕೊಳ್ಳುತ್ತಿದ್ದ ಕರಿ ತಾಯೀತ ಎದ್ದುಕಾಣುತ್ತದೆ.

  ಮ್ಯಾಚ್ ಫಿಕ್ಸಿಂಗ್ ಬಗ್ಗೆ: ಮ್ಯಾಚ್ ಫಿಕ್ಸಿಂಗ್ ಭೂತ ಕಾಡುವ ತನಕ ಯುವ ಕ್ರಿಕೆಟರ್ ಗಳಿಗೆ ಅಜರ್ ಫೇವರೀಟ್ ಆಗಿದ್ದರು. ಗಂಗೂಲಿ ಹಾಗೂ ಧೋನಿ ನಾಯಕತ್ವ ವಹಿಸಿಕೊಳ್ಳುವ ತನಕ ನಾಯಕರಾಗಿ ಅಜರುದ್ದೀನ್ ಹಲವು ದಾಖಲೆಗಳನ್ನು ಮುರಿದಿದ್ದರು.

  ಅದರೆ, ಅವರ ವೈಯಕ್ತಿಕ ಬದುಕಿನಂತೆ ವೃತ್ತಿ ಬದುಕಿನಲ್ಲಿ ಅನೇಕ ಬಿರುಗಾಳಿ ಬೀಸಿತು, ಮದುವೆ, ಮಕ್ಕಳು, ಎರಡನೇ ಅಫೇರ್, ಮಗನ ಮರಣ, ಮ್ಯಾಚ್ ಫಿಕ್ಸಿಂಗ್, ರಾಜಕೀಯಕ್ಕೆ ಎಂಟ್ರಿ ಎಲ್ಲವನ್ನು ಕಂಡ ಅಜರುದ್ದೀನ್ ಅವರಂತೆ ಕಾಣಲು ಇಮ್ರಾನ್ ಹಶ್ಮಿ ಸಾಕಷ್ಟು ತಯಾರಿ ನಡೆಸಿದ್ದಾರೆ.

  Azhar First Look: Emraan Hashmi Looks Impressive As Mohammad Azharuddin

  ಪ್ರಾಚಿ ದೇಸಾಯಿ ಅವರು ಅಜರ್ ಪತ್ನಿ ನೌರೀನ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಸಂಗೀತಾ ಬಿಜಲಾನಿ ಪಾತ್ರಕ್ಕೆ ಕರೀನಾ ಕಪೂರ್ ಗೆ ಆಫರ್ ಸಿಕ್ಕಿತ್ತು. ಅದರೆ, ಬೇಬೋ ಒಪ್ಪದ ಕಾರಣ ಈಗ ಜಾಕ್ವಲೀನ್ ಫರ್ನಾಂಡೀಸ್ ಆ ಪಾತ್ರ ನಿರ್ವಹಿಸಲಿದ್ದಾರೆ. ರಜತ್ ಅರೋರಾ ಚಿತ್ರಕಥೆಯುಳ್ಳ ಈ ಚಿತ್ರ ಮೇ.13, 2016ರಂದು ತೆರೆ ಕಾಣಲಿದೆ.

  ಅಥ್ಲೀಟ್ ಪಾನ್ ಸಿಂಗ್ ತೋಮರ್, ಅಥ್ಲೀಟ್ ಮಿಲ್ಕಾ ಸಿಂಗ್ ಜೀವನ ಆಧಾರಿಸಿದ ಭಾಗ್ ಮಿಲ್ಕಾ ಭಾಗ್, ಬಾಕ್ಸರ್ ಮೇರಿ ಕೋಮ್ ಚಿತ್ರ, ಧ್ಯಾನ್‌ಚಂದ್, ಮಹೇಂದ್ರ ಸಿಂಗ್ ಧೋನಿ ಕುರಿತ ಚಿತ್ರಗಳ ಪಟ್ಟಿಗೆ ಅಜರ್ ಹೊಸದಾಗಿ ಸೇರ್ಪಡೆಯಾಗುತ್ತಿದೆ.

  English summary
  Emraan Hashmi is all set to hit the screen as a Cricketer and that too as none other than Mohammad Azharuddin. A biopic on the controversial life of Mohammad Azharuddin is on the cards and the makers have released first look of the film which seems promising.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more