»   » ಸಲ್ಮಾನ್, ದೀಪಿಕಾ ಚಿತ್ರಗಳನ್ನ ಹಿಂದಿಕ್ಕಿದ ಟೈಗರ್ ಶ್ರಾಫ್

ಸಲ್ಮಾನ್, ದೀಪಿಕಾ ಚಿತ್ರಗಳನ್ನ ಹಿಂದಿಕ್ಕಿದ ಟೈಗರ್ ಶ್ರಾಫ್

Posted By:
Subscribe to Filmibeat Kannada

ಬಾಲಿವುಡ್ ಯಂಗ್ ಸ್ಟಾರ್ ಟೈಗರ್ ಶ್ರಾಫ್ ಅಭಿನಯದ 'ಭಾಗಿ-2' ಸಿನಿಮಾ ಬಿಡುಗಡೆಯಾಗಿದ್ದು, ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ. ಅದರಲ್ಲೂ ಸೌತ್ ಇಂಡಿಯಾದಲ್ಲಿ 'ಭಾಗಿ-2' ಚಿತ್ರಕ್ಕೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ.

ಅಷ್ಟೇ ಅಲ್ಲದೇ ಮೊದಲ ದಿನ ಬಾಕ್ಸ್ ಆಫೀಸ್ ನಲ್ಲೂ ಕಮಾಲ್ ಮಾಡಿದೆ. ಹಿಂದಿ ಚಿತ್ರರಂಗದ ಖ್ಯಾತ ವಿಮರ್ಶಕ ತರುಣ್ ಆದರ್ಶ ಹೇಳಿರುವ ಪ್ರಕಾರ 'ಭಾಗಿ-2' ಮೊದಲ ದಿನ 25 ಕೋಟಿ ಗಳಿಸಿದೆಯಂತೆ.

ಇದು ಈ ವರ್ಷ ಹಿಂದಿ ಸಿನಿಮಾರಂಗದಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿ ಸೇರಿದೆ. ಇದಕ್ಕು ಮುಮಚೆ ಸಲ್ಮಾನ್ ಖಾನ್ ಅಭಿನಯದ 'ಟೈಗರ್ ಜಿಂದಾ ಹೈ' ಸಿನಿಮಾ ಮೊದಲ ದಿನ 35 ಕೋಟಿ ಗಳಿಸಿತ್ತು.

Baaghi 2 Box Office Collection day 1

ವಿಶೇಷ ಅಂದ್ರೆ ಸಲ್ಮಾನ್ ಖಾನ್ ಅಭಿನಯಿಸಿದ್ದ 'ಕಿಕ್-2' ಚಿತ್ರದ ಮೊದಲ ದಿನದ ಕೆಲಕ್ಷನ್ ದಾಖಲೆ ಮುರಿದಿದೆ. 'ಕಿಕ್-2' ಸಿನಿಮಾ 24.97 ಕೋಟಿ ಗಳಿಸಿತ್ತು. 'ಭಾಗಿ-2', 25 ಕೋಟಿ ಗಳಿಸುವ ಮೂಲಕ ದೊಡ್ಡ ನಟನ ಚಿತ್ರವನ್ನ ಹಿಂದಿಕ್ಕಿರುವ ಖುಷಿ ಚಿತ್ರತಂಡಕ್ಕಿದೆ.

ಇನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದ 'ಪದ್ಮಾವತ್' ಚಿತ್ರದ ದಾಖಲೆಯನ್ನ ಬ್ರೇಕ್ ಮಾಡಿದೆ. ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತ್' ಸಿನಿಮಾ ಮೊದಲ ದಿನ 18 ಕೋಟಿ ಕಲೆಕ್ಷನ್ ಮಾಡಿತ್ತು.

Baaghi 2 Box Office Collection day 1

'ಭಾಗಿ-2' ತೆಲುಗಿನ 'ಕ್ಷಣಂ' ಚಿತ್ರದ ರೀಮೇಕ್. ಅಹ್ಮದ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಟೈಗರ್ ಶ್ರಾಫ್ ಗೆ ದಿಶಾ ಪಟಾನಿ ಜೊತೆಯಾಗಿದ್ದಾರೆ. ಮನೋಜ್ ಬಾಜಪಾಯಿ, ರಣ್ದೀಪ್ ಹೂಡಾ ಕೂಡ ಅಭಿನಯಿಸಿದ್ದಾರೆ.

English summary
Tiger Shroff's new film Baaghi 2 is on its way to become one of 2018's biggest hits. The film boasts of the highest opening day collection, surpassing Sanjay Leela Bhansali's yet-undefeated "Padmaavat" by several crores.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X