»   » ಪ್ರಭಾಸ್ ಬಾಲಿವುಡ್ ಚಿತ್ರದ ಬಗ್ಗೆ ಇದೀಗ ಬಂದ ಹೊಸ ಸುದ್ದಿ..

ಪ್ರಭಾಸ್ ಬಾಲಿವುಡ್ ಚಿತ್ರದ ಬಗ್ಗೆ ಇದೀಗ ಬಂದ ಹೊಸ ಸುದ್ದಿ..

Posted By:
Subscribe to Filmibeat Kannada

ಟಾಲಿವುಡ್ ನಟ ಪ್ರಭಾಸ್ 'ಬಾಹುಬಲಿ-2' ಚಿತ್ರದ ನಂತರ ಪ್ರಪಂಚದಾದ್ಯಂತದ ಸಿನಿ ಪ್ರೇಕ್ಷಕರಿಂದ ಗಮನಸೆಳೆದಿದ್ದಾರೆ. ಎಸ್.ಎಸ್.ರಾಜಮೌಳಿ ನಿರ್ದೇಶನದ ಈ ಚಿತ್ರ ಪ್ರಪಂಚದಾದ್ಯಂತ 2000 ಕೋಟಿ ರೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಹಿನ್ನೆಲೆಯಲ್ಲಿ ಬಾಲಿವುಡ್ ಫಿಲ್ಮ್ ಮೇಕರ್ ಗಳು ಪ್ರಭಾಸ್ ಹಿಂದೆ ನಮ್ಮ ಚಿತ್ರದಲ್ಲಿ ನಟಿಸಿ ಎಂದು ಮುಗಿಬಿದ್ದಿದ್ದಾರೆ. ಆದರೆ ಯಾವ ನಿರ್ದೇಶಕನ ಚಿತ್ರದಲ್ಲಿ ಡಾರ್ಲಿಂಗ್ ನಟನ ಬಾಲಿವುಡ್ ಪ್ರವೇಶ ಆಗಲಿದೆ ಎಂಬ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ.

ನಟ ಪ್ರಭಾಸ್ ರವರನ್ನು ಬಾಲಿವುಡ್ ನ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ತಮ್ಮ ಸಿನಿಮಾ ಮೂಲಕ ಬಾಲಿವುಡ್ ನಲ್ಲಿ ಲಾಂಚ್ ಮಾಡಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಹರಿದಾಡಿತ್ತು. ಆದರೆ ಈ ಸುದ್ದಿಯನ್ನು ಈಗ ಕರಣ್ ತಳ್ಳಿಹಾಕಿದ್ದು, ಆ ರೀತಿ ನಾನು ಯಾವುದೇ ಪ್ಲಾನ್ ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ ಸದ್ಯದಲ್ಲೇ ಬಾಲಿವುಡ್ ಗೆ ಪಾದಾರ್ಪಣೆ ಮಾಡುವುದಂತು ನಿಜ ಎಂದಿದ್ದು, ನಿರ್ದೇಶಕ ಯಾರು ಎಂಬುದನ್ನು ಹೇಳಿದ್ದಾರೆ.

Baahubali's Prabhas Is Not Making His Bollywood Debut In Karan Johar's Film

'ಬಾಹುಬಲಿ' ಪ್ರಭಾಸ್, ಕರಣ್ ಜೋಹರ್ ಚಿತ್ರದ ಬದಲು ಬಾಲಿವುಡ್ ನ ಮತ್ತೊಬ್ಬ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಸಾಜಿದ್ ನಡಿಯಾದ್ವಾಲಾ ರವರ ಚಿತ್ರದ ಮೂಲಕ ಬಾಲಿವುಡ್ ಪ್ರವೇಶ ಮಾಡಲಿದ್ದಾರಂತೆ. ಈ ಬಗ್ಗೆ ಈಗಾಗಲೇ ಸಾಜಿದ್ ಮತ್ತು ಪ್ರಭಾಸ್ ಹಲವು ಬಾರಿ ಮಾತುಕತೆ ನಡೆಸಿದ್ದಾರಂತೆ. ನಿರ್ದೇಶಕರು ಸದ್ಯದಲ್ಲೇ ಈ ಬಗ್ಗೆ ಫೈನಲೈಸ್ ಮಾಡಲಿದ್ದಾರೆ ಎಂದು ಕರಣ್ ಜೋಹರ್ ಹೇಳಿರುವುದು ಮೂಲಗಳಿಂದ 'ಮಿಡ್-ಡೇ' ಗೆ ತಿಳಿದು ವರದಿಯಾಗಿದೆ.

ಕರಣ್ ಜೋಹರ್ 'ಬಾಹುಬಲಿ-2' ಚಿತ್ರದ ಹಿಂದಿ ಹಕ್ಕನ್ನು ಖರೀದಿಸಿದ್ದರು. ಹಿಂದಿಯಲ್ಲೂ ಈ ಚಿತ್ರ ನಿರೀಕ್ಷೆಗಿಂತ ಹೆಚ್ಚಾಗಿಯೇ ಬಾಕ್ಸ್ ಆಫೀಸ್ ಗಳಿಕೆ ನೀಡಿದೆ. ನಟ ಪ್ರಭಾಸ್ ಇತ್ತೀಚೆಗಷ್ಟೆ ಕರಣ್ ಜೋಹರ್ ಮನೆಗೆ ಪಾರ್ಟಿಗೆ ಹೋಗಿದ್ದರು.

English summary
Baahubali's Prabhas Is Not Making His Bollywood Debut In Karan Johar's Film

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X