For Quick Alerts
  ALLOW NOTIFICATIONS  
  For Daily Alerts

  ಬಾಕ್ಸಾಫೀಸ್ ನಲ್ಲಿ ಬಾಜೀರಾವ್ ಮುಂದೆ ಮಂಡಿಯೂರಿದ ಕಿಂಗ್ ಖಾನ್

  |

  ಹಿಂದಿ ಚಿತ್ರೋದ್ಯಮ ಎನ್ನುವ ಸಮುದ್ರದಲ್ಲಿ 'ಬಾಲಿವುಡ್ ಬಾದಶಾ' ಎನ್ನುವ ಹೆಸರು ಸುಮ್ನೆ ಬಂದ್ ಬಿಡುತ್ತಾ? ಶಾರೂಖ್ ಚಿತ್ರಗಳು ಬಾಕ್ಸಾಫೀಸಿನಲ್ಲಿ ಧೂಳೆಬ್ಬೆಸುತ್ತಿದ್ದರಿಂದ ಕಿಂಗ್ ಖಾನಿಗೆ ಬಾಲಿವುಡ್ ಮಂದಿ ಈ ಬಿರುದು ನೀಡಿದ್ದರು.

  ಹೆಚ್ಚಾಗಿ ಶಾರೂಖ್ ಚಿತ್ರಗಳು ಹೇಗೇ ಇರಲಿ, ವಿಮರ್ಶೆ ಹೇಗೇ ಬರಲಿ ಸಿನಿಮಾಕ್ಕೆ ಭರ್ಜರಿ ಓಪನಿಂಗ್ ಅಂತೂ ಸಿಗುತ್ತಿತ್ತು. ಆದರೆ, ಈ ಬಾರಿ ಚಿತ್ರ ಬಿಡುಗಡೆಗೆ ಮುನ್ನ ಶಾರೂಖ್ ನೀಡಿದ್ದ ಹೇಳಿಕೆ, ಒಂದೇ ದಿನ ಬಿಡುಗಡೆಯಾದ ಇನ್ನೊಂದು ಬಹುನಿರೀಕ್ಷಿತ ಚಿತ್ರದಿಂದಾಗಿ 'ದಿಲ್ವಾಲೆ' ಚಿತ್ರ 'ಬಾಜೀರಾವ್ ಮಸ್ತಾನಿ' ಚಿತ್ರದ ಮುಂದೆ ಮಂಡಿಯೂರಿದೆ.

  ಭಾರತೀಯ ಚಿತ್ರದ್ಯೋಮದ ace film maker ಎಂದೇ ಕರೆಯಲ್ಪಡುವ ಸಂಜಯ್ ಲೀಲಾ ಬನ್ಸಾಲಿ ಚಿತ್ರ ಮತ್ತು ರೋಹಿತ್ ಶೆಟ್ಟಿ ನಿರ್ದೇಶನದ ದಿಲ್ವಾಲೆ ಚಿತ್ರ ಸೆನ್ಸಾರ್ ವೀಕ್ಷಣೆಗೆ ಹೋಗಿದ್ದಾಗ, ಮಂಡಳಿಯವರು ಬಾಜೀರಾವ್ ಚಿತ್ರವನ್ನು ಪ್ರಶಂಸಿದಷ್ಟು, ದಿಲ್ವಾಲೆ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸಿರಲಿಲ್ಲ. (ಮಸ್ತಾನಿ ಮಸ್ತ್ ಮಸ್ತ್ ಕಲೆಕ್ಷನ್)

  ಅಸಹಿಷ್ಣುತೆಯ ಬಗ್ಗೆ ಶಾರೂಖ್ ನೀಡಿದ್ದ ಹೇಳಿಕೆ, ಅದಕ್ಕೆ ಸಾಮಾಜಿಕ ತಾಣದಲ್ಲಿ ವ್ಯಕ್ತವಾದ ಭಾರೀ ವಿರೋಧ, ಚಿತ್ರ ಬಹಿಷ್ಕಾರಕ್ಕೆ ನೀಡಿದ ಕರೆ, ಪತ್ರಿಕೆ, ಮಾಧ್ಯಮಗಳ ವಿಮರ್ಶೆ, ಬ್ಯಾಡ್ ಮೌತ್ ಪಬ್ಲಿಸಿಟಿಯಿಂದಾಗಿ ದಿಲ್ವಾಲೆ ಚಿತ್ರ, ಬಾಜೀರಾವ್ ಮಸ್ತಾನಿ ಚಿತ್ರದ ಕಲೆಕ್ಷನ್ ಮುಂದೆ ಮಂಕಾಗಿದೆ ಎಂದರೆ ಶಾರೂಖ್ ಅಭಿಮಾನಿಗಳು ಬೇಸರಿಸಿಕೊಳ್ಳಬಾರದು.

  ಎರಡೂ ಬಹುನಿರೀಕ್ಷಿತ ಚಿತ್ರಗಳ ಡೇ ಬೈ ಡೇ ಕಲೆಕ್ಷನ್ ಬಗ್ಗೆ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

  ಬಾಜೀರಾವ್ Vs ದಿಲ್ವಾಲೆ

  ಬಾಜೀರಾವ್ Vs ದಿಲ್ವಾಲೆ

  ಬನ್ಸಾಲಿ ಚಿತ್ರದಲ್ಲಿ ಶಾರೂಖ್ ಖಾನ್ ಕೂಡಾ ಈ ಹಿಂದೆ ನಟಿಸಿದ್ದರು. ಎರಡೂ ಚಿತ್ರ ನಿರ್ಮಾಣ ಸಂಸ್ಥೆಗಳು (ಶಾರೂಖ್ ಒಡೆತನದ ರೆಡ್ ಚಿಲ್ಲಿ ಎಂಟರ್ಟೈನರ್ಸ್, ಬನ್ಸಾಲಿ ಒಡೆತನದ SLB ಫಿಲಂಸ್) ತಮ್ಮ ತಮ್ಮ ಚಿತ್ರ ಬಿಡುಗಡೆಯ ದಿನಾಂಕವನ್ನು ಬಹು ಹಿಂದೆಯೇ ಘೋಷಿಸಿದ್ದವು.

  ಇಬ್ಬರ ನಡುವೆ ಒಮ್ಮತ ಮೂಡಲಿಲ್ಲ

  ಇಬ್ಬರ ನಡುವೆ ಒಮ್ಮತ ಮೂಡಲಿಲ್ಲ

  ಕ್ರಿಸ್ಮಸ್ ರಜೆಯ ಲಾಭ ಪಡೆಯಲು ಎರಡೂ ಚಿತ್ರ ನಿರ್ಮಾಣ ಸಂಸ್ಥೆಗಳು ಮುಂದಾಗಿದ್ದು, ಇಬ್ಬರೂ ಪರಸ್ಪರ ಮಾತುಕತೆ ನಡೆಸಿ ಒಂದು ಚಿತ್ರ, ಒಂದು ವಾರ ತಡವಾಗಿ ಬಿಡುಗಡೆ ಮಾಡಲು ನಡೆಸಿದ್ದ ಮಾತುಕತೆಯೂ ವಿಫಲವಾಗಿತ್ತು.

  ಬನ್ಸಾಲಿ Vs ಶಾರೂಖ್

  ಬನ್ಸಾಲಿ Vs ಶಾರೂಖ್

  ಚಿತ್ರ ಬಿಡುಗಡೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಬಾಲಿವುಡ್ ಪ್ರಮುಖರಾದ ಸಂಜಯ್ ಲೀಲಾ ಬನ್ಸಾಲಿ ಮತ್ತು ಶಾರೂಖ್ ಖಾನ್ ಇಬ್ಬರೂ, ಚಿತ್ರ ತಡವಾಗಿ ಬಿಡುಗಡೆ ಮಾಡಿದರೆ ತಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬೀಳುತ್ತದೆ ಎಂದು ಒಂದೇ ದಿನ ತಮ್ಮ ಚಿತ್ರ ಬಿಡುಗಡೆಮಾಡಲು ಮುಂದಾದರು ಎಂದು ಬಾಲಿವುಡ್ ಜಗಲಿಯಲ್ಲಿ ಹರಿದಾಡುತ್ತಿರುವ ಸುದ್ದಿ.

  ಎರಡು ಚಿತ್ರಗಳ ಮೊದಲ ವೀಕೆಂಡ್ ವರದಿ

  ಎರಡು ಚಿತ್ರಗಳ ಮೊದಲ ವೀಕೆಂಡ್ ವರದಿ

  ಟ್ರೇಡ್ ಅನಲಿಸ್ಟ್ ಗಳು, ಇಂಡಿಯಾ ಮಾರುಕಟ್ಟೆ ವರದಿ ಅಧರಿಸಿ ನೀಡಿರುವ ವರದಿ ಪ್ರಕಾರ ಎರಡು ಚಿತ್ರಗಳ ಮೊದಲ ನಾಲ್ಕು ದಿನದ ರಿಪೋರ್ಟ್ ಹೀಗಿದೆ..

  ದಿಲ್ವಾಲೆ
  ಶುಕ್ರವಾರ - 20.52 ಕೋಟಿ
  ಶನಿವಾರ - 20.09 ಕೋಟಿ
  ಭಾನುವಾರ - 24.02 ಕೋಟಿ
  ಸೋಮವಾರ - 10.09
  ಒಟ್ಟು - 74.72 ಕೋಟಿ

  ಬಾಜೀರಾವ್ ಮಸ್ತಾನಿ
  ಶುಕ್ರವಾರ - 12.80 ಕೋಟಿ
  ಶನಿವಾರ - 15.52 ಕೋಟಿ
  ಭಾನುವಾರ - 18.45 ಕೋಟಿ
  ಸೋಮವಾರ - 10.25
  ಒಟ್ಟು - 57.02 ಕೋಟಿ

  ಮೊದಲ ಪ್ರದರ್ಶನದಿಂದಲೇ ದಿಲ್ವಾಲೆ ಡಲ್

  ಮೊದಲ ಪ್ರದರ್ಶನದಿಂದಲೇ ದಿಲ್ವಾಲೆ ಡಲ್

  ಮೊದಲ ದಿನದ ಪ್ರದರ್ಶನದಿಂದ ದಿಲ್ವಾಲೆ ಕಲೆಕ್ಷನ್ ಕಳೆಗುಂದಲು ಆರಂಭವಾಗಿದ್ದನ್ನು ಹಿಂದಿನ ಸ್ಲೈಡಿನ ಮೂಲಕ ಗಮನಿಸಬಹುದು. ಹೆಚ್ಚಾಗಿ ಶಾರೂಖ್ ಚಿತ್ರಗಳ ಮೊದಲ ವಾರಾಂತ್ಯದಲ್ಲಿ ನೂರು ಕೋಟಿ ಕ್ಲಬ್ ದಾಟಿದ ಉದಾಹರಣೆಗಳೂ ಇವೆ.

  ಬಾಜೀರಾವ್ ಯಶಸ್ವೀ ಪ್ರದರ್ಶನ ಮುಂದುವರಿಕೆ

  ಬಾಜೀರಾವ್ ಯಶಸ್ವೀ ಪ್ರದರ್ಶನ ಮುಂದುವರಿಕೆ

  ಮೊದಲ ದಿನ ಬಾಕ್ಸಾಫೀಸಿನಲ್ಲಿ ದಿಲ್ವಾಲೆ ಮುಂದೆ ಹಿನ್ನಡೆ ಅನುಭವಿಸಿದರೂ, ಪಿಕ್ ಅಪ್ ಆದ ಬಾಜೀರಾವ್ ತನ್ನ ಗಳಿಕೆಯಲ್ಲಿ ಗಣನೀಯ ಏರಿಕೆಯ ಓಟ ಮುಂದುವರಿಸಿಕೊಂಡಿದೆ. ಸೋಮವಾರ ಮತ್ತು ಮಂಗಳವಾರದ ಬಾಕ್ಸಾಫೀಸ್ ವರದಿ ಪ್ರಕಾರ ದಿಲ್ವಾಲೆ ಚಿತ್ರವನ್ನು ಬಾಜೀರಾವ್ ಹಿಂದಿಕ್ಕಿದ್ದಾನೆ.

  English summary
  Sanjay Leela Bansali's Bajirao Mastani which had a slow start at the box office, has picked up pace over the weekend collections and doing much better than Shahrukh Khan's Dilwale.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X