For Quick Alerts
  ALLOW NOTIFICATIONS  
  For Daily Alerts

  ಸಿದ್ಧಾರ್ಥ್ ಶುಕ್ಲಾ ಶುದ್ಧ ಮನಸ್ಸಿಗೆ ಲಾಕ್‌ಡೌನ್‌ನಲ್ಲಿ ನಡೆದ ಈ ಘಟನೆ ಸಾಕ್ಷಿ

  |

  ಬಿಗ್ ಬಾಸ್ ವಿನ್ನರ್, 'ಬಾಲಿಕಾ ವಧು' ಖ್ಯಾತಿಯ ಸಿದ್ದಾರ್ಥ್ ಶುಕ್ಲಾ ಅಕಾಲಿಕ ನಿಧನ ಇಡೀ ಇಂಡಸ್ಟ್ರಿಯನ್ನು ಅಘಾತಕ್ಕೆ ತಳ್ಳಿದೆ. ಕೇವಲ ಬಾಲಿವುಡ್ ಮಾತ್ರವಲ್ಲ ಇತರೆ ಚಿತ್ರರಂಗದಿಂದಲೂ ಅನೇಕರು ಶುಕ್ಲಾ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

  ಸಿದ್ಧಾರ್ಥ್ ಓರ್ವ ಅದ್ಭುತ ಪ್ರತಿಭೆ, ಒಳ್ಳೆಯ ನಟ. ಅದರ ಜೊತೆಗೆ ಒಳ್ಳೆಯ ಮನಸ್ಸಿನ ವ್ಯಕ್ತಿ ಎಂಬ ಅಭಿಪ್ರಾಯ ಆಪ್ತ ಬಳಗದಲ್ಲಿದೆ. ಕಿರುತೆರೆಯಲ್ಲಿ ಹೆಚ್ಚು ಯಶಸ್ಸು ಕಂಡ ಸಿದ್ಧಾರ್ಥ್‌ಗೆ ಬಾಲಿವುಡ್‌ ಸಿನಿಮಾರಂಗದಲ್ಲಿ ಹೆಚ್ಚು ಅವಕಾಶಗಳು ಸಿಗಲಿಲ್ಲ. ಈ ಬಗ್ಗೆ ಶುಕ್ಲಾಗೂ ಬೇಸರ ಇತ್ತು. ಆದರೂ ಧೃತಿಗೆಡದ ನಟ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದರು. ಅದರಲ್ಲೇ ಖುಷಿ ಕಾಣ್ತಿದ್ರು.

  'ಬಾಲಿಕಾ ವಧು' ನಟ-ನಟಿ ದುರಂತ ಅಂತ್ಯ: ಸಿದ್ಧಾರ್ಥ್‌ಗೂ ಮುಂಚೆ ಪ್ರತ್ಯೂಷ ಸಾವು'ಬಾಲಿಕಾ ವಧು' ನಟ-ನಟಿ ದುರಂತ ಅಂತ್ಯ: ಸಿದ್ಧಾರ್ಥ್‌ಗೂ ಮುಂಚೆ ಪ್ರತ್ಯೂಷ ಸಾವು

  ಸುಶಾಂತ್ ಸಿಂಗ್ ರಜಪೂತ್ ನಂತರ ಸಿದ್ಧಾರ್ಥ್ ಶುಕ್ಲಾ ಸಾವು ಅಭಿಮಾನಿಗಳನ್ನು ಕಾಡಿದೆ. ಯಾವುದೇ ಗಾಡ್‌ಫಾದರ್ ಇಲ್ಲದೇ, ಸ್ವಂತ ಪ್ರತಿಭೆ ಮೇಲೆ ಬೆಳೆದ ಮತ್ತೊಬ್ಬ ಕಲಾವಿದ ದುರಂತ್ಯ ಅಂತ್ಯ ಕಾಣಬೇಕಾಯಿತು ಎಂದು ಕಂಬನಿ ಮಿಡಿದಿದ್ದಾರೆ. ಸಿನಿಮಾ, ಧಾರಾವಾಹಿ ಲೋಕದಿಂದ ಆಚೆಯೂ ಸಿದ್ಧಾರ್ಥ್ ಒಳ್ಳೆಯ ಮನುಷ್ಯ ಎನ್ನುವುದಕ್ಕೆ ಲಾಕ್‌ಡೌನ್‌ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಈ ಒಂದು ಘಟನೆ ಸಾಕು ಶುಕ್ಲಾ ಅವರ ಶುದ್ಧ ಮನಸ್ಸಿನ ವ್ಯಕ್ತಿ ಎನ್ನುವುದಕ್ಕೆ. ಮುಂದೆ ಓದಿ...

  ಪ್ರತ್ಯೂಷಾ ಬ್ಯಾನರ್ಜಿ ಕುಟುಂಬಕ್ಕೆ ಆಸರೆ

  ಪ್ರತ್ಯೂಷಾ ಬ್ಯಾನರ್ಜಿ ಕುಟುಂಬಕ್ಕೆ ಆಸರೆ

  'ಬಾಲಿಕಾ ವಧು' ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ನಟಿ ಪ್ರತ್ಯೂಷಾ ಬ್ಯಾನರ್ಜಿ 2016ರಲ್ಲಿ ಸಾವನ್ನಪ್ಪಿದರು. ಈ ಧಾರಾವಾಹಿಯಲ್ಲಿ ಶುಕ್ಲಾ ನಾಯಕನಟನ ಪಾತ್ರ ಮಾಡುತ್ತಿದ್ದರು. ಸಿದ್ಧಾರ್ಥ್ ಮತ್ತು ಪ್ರತ್ಯೂಷಾ ಜೋಡಿ ಬಹಳ ಜನಪ್ರಿಯತೆ ಪಡೆದುಕೊಂಡಿತ್ತು. ಇವರಿಬ್ಬರ ಕಾಂಬಿನೇಷನ್ ಈ ಧಾರಾವಾಹಿಯ ಸಕ್ಸಸ್‌ಗೆ ಕಾರಣ ಎಂದು ಹೇಳಬಹುದು. ವೈಯಕ್ತಿಕವಾಗಿಯೂ ಇವರಿಬ್ಬರ ನಡುವಿನ ಸ್ನೇಹ ತುಂಬಾ ಚೆನ್ನಾಗಿತ್ತು. ಪ್ರತ್ಯೂಷಾ ಬ್ಯಾನರ್ಜಿ ನಿಧನದಿಂದ ಕಂಗಲಾಗಿದ್ದ ಕುಟುಂಬಕ್ಕೆ ಶುಕ್ಲಾ ಆಸರೆಯಾಗಿ ನಿಂತಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ. ಈ ವಿಷಯವನ್ನು ಸ್ವತಃ ಪ್ರತ್ಯೂಷಾ ತಂದೆ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಸ್ಮರಿಸಿದ್ದಾರೆ.

  ಸಿದ್ಧಾರ್ಥ್ ಶುಕ್ಲಾ ನಿಧನ: ಗೆಳತಿ ಶೆಹನಾಜ್ ಗಿಲ್ ಪರಿಸ್ಥಿತಿ ಹೇಗಿದೆ?ಸಿದ್ಧಾರ್ಥ್ ಶುಕ್ಲಾ ನಿಧನ: ಗೆಳತಿ ಶೆಹನಾಜ್ ಗಿಲ್ ಪರಿಸ್ಥಿತಿ ಹೇಗಿದೆ?

  ನನ್ನ ಮಗನಂತೆ ಇದ್ದ ಶುಕ್ಲಾ

  ನನ್ನ ಮಗನಂತೆ ಇದ್ದ ಶುಕ್ಲಾ

  ಸಿದ್ಧಾರ್ಥ್ ಶುಕ್ಲಾ ಸಾವಿನ ನಂತರ ಆಜ್ ತಕ್ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ಪ್ರತ್ಯೂಷಾ ತಂದೆ, ''ಈ ಘಟನೆ ಹೇಗೆ ಸಂಭವಿಸಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಸಿದ್ಧಾರ್ಥ್ ಶುದ್ಧ ಮನಸ್ಸಿನ ವ್ಯಕ್ತಿಯಾಗಿದ್ದರು. ಮಗಳನ್ನು ಕಳೆದುಕೊಂಡಿದ್ದ ನಮಗೆ ಮಗನಂತಿದ್ದ. 'ಬಾಲಿಕಾ ವಧು' ಧಾರಾವಾಹಿ ಮಾಡುವ ಸಂದರ್ಭದಲ್ಲಿ ಪ್ರತ್ಯೂಷಾ ಮತ್ತು ಶುಕ್ಲಾ ಬಹಳ ಒಳ್ಳೆಯ ಸ್ನೇಹಿತರಾಗಿದ್ದರು. ಯಾವಾಗಲೂ ಮನೆಗೆ ಬರ್ತಿದ್ದ. ಆದರೆ, ಪ್ರತ್ಯೂಷಾ ಸಾವಿನ ನಂತರ ಅವರಿಬ್ಬರ ಬಗ್ಗೆ ಏನೇನೋ ಮಾತನಾಡಿಕೊಂಡರು. ಇದರಿಂದ ಮನೆಗೆ ಬರುವುದನ್ನು ನಿಲ್ಲಿಸಿಬಿಟ್ಟ. ಆದರೂ ವಾಟ್ಸಾಪ್‌ನಲ್ಲಿ ಸಂಪರ್ಕದಲ್ಲಿದ್ದ. ಏನಾದರೂ ಸಹಾಯ ಬೇಕು ಅಂದ್ರೆ ಮೆಸೆಜ್ ಮಾಡಿ ಎಂದು ಹೇಳಿದ್ದ' ಎನ್ನುವ ವಿಚಾರ ತಿಳಿಸಿದರು.

  ಲಾಕ್‌ಡೌನ್‌ನಲ್ಲಿಯೂ ಸಹಾಯ ಮಾಡಿದ್ದ

  ಲಾಕ್‌ಡೌನ್‌ನಲ್ಲಿಯೂ ಸಹಾಯ ಮಾಡಿದ್ದ

  ''ಲಾಕ್‌ಡೌನ್‌ ಸಮಯದಲ್ಲಿಯೂ ಸಿದ್ಧಾರ್ಥ್ ಸಂಪರ್ಕದಲ್ಲಿದ್ದ. ಎರಡು ತಿಂಗಳ ಹಿಂದೆಯೂ ಮೆಸೆಜ್ ಮಾಡಿದ್ದರು. ಅಂಕಲ್, ಆಂಟಿ ಹೇಗಿದ್ದೀರಾ, ಏನಾದರೂ ಸಹಾಯ ಬೇಕಾ, ನೀವಿಬ್ಬರು ಓಕೆನಾ ಎಂದು ಕೇಳಿದ್ದ. ಏನಾದರೂ ಸಹಾಯ ಬೇಕು ಅಂದ್ರೆ ಕೇಳಿ ಎಂದು ಹೇಳಿದ್ದರು. ಆದರೂ ಬಲವಂತವಾಗಿ 20 ಸಾವಿರ ರೂಪಾಯಿ ಹಣ ಸಹ ಕಳುಹಿಸಿದ್ದ'' ಎನ್ನುವ ವಿಷಯ ಬಹಿರಂಗಪಡಿಸಿದರು.

  ಪ್ರತ್ಯೂಷಾ ಹೇಗೆ ಸಾವನ್ನಪ್ಪಿದ್ದರು?

  ಪ್ರತ್ಯೂಷಾ ಹೇಗೆ ಸಾವನ್ನಪ್ಪಿದ್ದರು?

  ಬಾಲಿಕಾ ವಧು ಧಾರಾವಾಹಿಯಲ್ಲಿ ಶಿವ-ಆನಂದಿ ಜೋಡಿ ಅಚ್ಚುಮೆಚ್ಚು. ಶಿವ ಪಾತ್ರದಲ್ಲಿ ಸಿದ್ಧಾರ್ಥ್ ಶುಕ್ಲಾ ನಟಿಸಿದ್ದರೆ, ಆನಂದಿಯಾಗಿ ಪ್ರತ್ಯೂಷಾ ಬ್ಯಾನರ್ಜಿ ಅಭಿನಯಿಸುತ್ತಿದ್ದರು. ಆದರೆ, ಪ್ರತ್ಯೂಷಾ 2016ರಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದರು. 2016 ಏಪ್ರಿಲ್ 1 ರಂದು ಸಂಜೆ 5 ಗಂಟೆಗೆ ಸಮಯಕ್ಕೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಗೋರೆಗಾಂವ್ ನಿವಾಸದಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂಬ ವಿಚಾರ ಹೊರಬಿತ್ತು. ಕೂಡಲೇ ಅವರನ್ನು ಆಕೆಯ ಬಾಯ್‌ಫ್ರೆಂಡ್ ರಾಹುಲ್ ರಾಜ್ ಸಿಂಗ್ ಅಂಧೇರಿಯ ಕೋಕಿಲಾ ಬೆನ್ ಅಂಬಾನಿ ಆಸ್ಪತ್ರೆಗೆ ರವಾನಿಸಲಾಯಿತು. ಆಸ್ಪತ್ರೆಗೆ ಬರುವಷ್ಟರಲ್ಲಿ ಆಕೆ ಪ್ರಾಣ ಕಳೆದುಕೊಂಡಿದ್ದರು ಎಂದು ವೈದ್ಯರು ದೃಢಪಡಿಸಿದರು.

  English summary
  Balika Vadhu Actress Pratyusha Banerjee’s Father React on Sidharth Shukla death and he revealed Sidharth forcibly sent 20,000 thousand in lockdown time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X