For Quick Alerts
  ALLOW NOTIFICATIONS  
  For Daily Alerts

  ಸಿನಿಮೀಯ ರೀತಿಯಲ್ಲಿ ನಟಿ ಮನೆ ಮೇಲೆ ದಾಳಿ, ಬಂಧನ

  |

  ನೆರೆಯ ಬಾಂಗ್ಲಾದೇಶದಲ್ಲಿ ಸಿನಿಮೀಯ ಮಾದರಿಯಲ್ಲಿ ನಟಿಯೊಬ್ಬಾಕೆಯ ಮನೆ ಮೇಲೆ ದಾಳಿ ನಡೆಸಿ ಅಷ್ಟೇ ಸಿನಿಮೀಯ ಮಾದರಿಯಲ್ಲಿ 28 ವರ್ಷದ ನಟಿಯನ್ನು ಬಂಧಿಸಲಾಗಿದೆ.

  28 ವರ್ಷದ ನಟಿ ಪೊರಿ ಮೋನಿ ಅಲಿಯಾಸ್ ಸ್ಮೃತಿ ಶ್ಯಾಮಸುನ್ನಹರ್ ಬಾಂಗ್ಲಾದೇಶದ ಪ್ರಖ್ಯಾತ ನಟಿ. ಹಲವು ಸಿನಿಮಾ, ಟಿವಿ ಶೋಗಳಲ್ಲಿ ಕಾಣಿಸಿಕೊಂಡಿರುವ ಪೊರಿ ಮೋನಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ನಟಿ ಸೆಲೆಬ್ರಿಟಿ.

  ಇದೀಗ ಈ ನಟಿಯನ್ನು ಬಾಂಗ್ಲಾದೇಶದ ಭಯೋತ್ಪಾದನಾ ವಿರೋಧಿ, ಅಪರಾಧ ತಡೆ ವಿಶೇಷ ದಳ ಆರ್‌ಎಬಿ (ರ್ಯಾಪಿಡ್ ಆಕ್ಷನ್ ಬೆಟಾಲಿಯನ್) ಬಹು ಸಿನಿಮೀಯ ಮಾದರಿಯಲ್ಲಿ ಬಂಧಿಸಿದೆ. ಪೊರಿ ಮೋನಿ ಬಂಧನ ಬಾಂಗ್ಲಾದೇಶದಲ್ಲಿ ಹಲ್‌-ಚಲ್ ಎಬ್ಬಿಸಿದೆ. ನಟಿಯು ಉದ್ಯಮಿಯೊಬ್ಬರ ಮೇಲೆ ಆರೋಪ ಮಾಡಿದ ಬೆನ್ನಲ್ಲೆ ಈ ಬಂಧನವಾಗಿರುವುದು ಅನುಮಾನಗಳಿಗೂ ಕಾರಣವಾಗಿದೆ.

  ಪೊರಿ ಮೊನಿ ಕೆಲವು ದಿನಗಳ ಹಿಂದಷ್ಟೆ ಕೆಲವರ ವಿರುದ್ಧ ಅತ್ಯಾಚಾರ ಹಾಗೂ ಕೊಲೆ ಯತ್ನದ ಆರೋಪ ಮಾಡಿದ್ದರು. ಅದಾದ ಕೆಲವು ದಿನಗಳ ಬಳಿಕ ಈಗ ನಟಿಯನ್ನು ಬಂಧಿಸಲಾಗಿದೆ. ನಟಿಯನ್ನು ಬಂಧಿಸುವ ಮೊದಲು ಇಬ್ಬರು ಮಾಡೆಲ್‌ಗಳನ್ನು ಬಂಧಿಸಿದ್ದು ಇವರದ್ದೆಲ್ಲ ಒಂದೇ ಗುಂಪು ಎಂದು ಪೊಲೀಸರು ಹೇಳಿದ್ದಾರೆ.

  ಆರ್‌ಎಬಿ ತಂಡವು ಢಾಕಾದ ಹೊರ ವಲಯದಲ್ಲಿರುವ ಪೊರಿ ಮೊನಿಯ ಮನೆಯ ಮೇಲೆ ದಾಳಿ ಮಾಡಲು ಹೋದಾಗ ತನ್ನೊಂದಿಗೆ ಟಿವಿ ಸುದ್ದಿವಾಹಿನಿಯವರನ್ನು ಕರೆದುಕೊಂಡು ಹೋಗಿದೆ. ದಾಳಿಯನ್ನು ಟಿವಿಯಲ್ಲಿ ಲೈವ್ ಆಗಿ ಪ್ರಸಾರವಾಗುವಂತೆ ಮಾಡಿ, ಲೈವ್‌ನಲ್ಲಿಯೇ ನಟಿಯನ್ನು ಬಂಧಿಸಿ ಎಳೆದೊಯ್ಯಲಾಗಿದೆ.

  ಮಾದಕ ವಸ್ತು, ಮದ್ಯದ ಬಾಟಲಿಗಳು ಪತ್ತೆ

  ಮಾದಕ ವಸ್ತು, ಮದ್ಯದ ಬಾಟಲಿಗಳು ಪತ್ತೆ

  ನಟಿಯ ಬಹುಮಹಡಿ ಮನೆಯಲ ತುಂಬೆಲ್ಲ ಮದ್ಯದ ಬಾಟಲಿಗಳು, ಎಲ್‌ಎಸ್‌ಡಿ ಮಾದಕ ವಸ್ತು ಇರುವುದಾಗಿ ವಿಡಿಯೋದಲ್ಲಿ ತೋರಿಸಲಾಗಿದೆ. ನಟಿಯ ಮನೆ ಮೇಲೆ ದಾಳಿ ನಡೆಯುತ್ತಿದ್ದಂತೆ ಸಾವಿರಾರು ಮಂದಿ ನಟಿಯ ಮನೆ ಮುಂದೆ ಜಮಾಯಿಸಿದ್ದಾರೆ. ಅವರ ಮುಂದೆಯೇ ನಟಿ ಕೈಯನ್ನು ಹಿಂದೆ ಕಟ್ಟಿ ಜನರೆದುರು ಎಳೆದುತಂದು ಠಾಣೆಗೆ ಕರೆದೊಯ್ಯಲಾಗಿದೆ. ಈ ಎಲ್ಲ ದೃಶ್ಯಗಳನ್ನು ಬಾಂಗ್ಲಾದೇಶದ ಜನರು ಟಿವಿ ಲೈವ್‌ನಲ್ಲಿ ನೋಡಿದ್ದಾರೆ.

  ಅತ್ಯಾಚಾರ ಮತ್ತು ಕೊಲೆ ಯತ್ನದ ಬಗ್ಗೆ ದೂರು ನೀಡಿದ್ದ ನಟಿ

  ಅತ್ಯಾಚಾರ ಮತ್ತು ಕೊಲೆ ಯತ್ನದ ಬಗ್ಗೆ ದೂರು ನೀಡಿದ್ದ ನಟಿ

  ನಟಿ ಪೊರಿ ಮೊನಿ ಕೆಲವು ದಿನಗಳ ಹಿಂದಷ್ಟೆ ಅತ್ಯಾಚಾರ ಹಾಗೂ ಕೊಲೆ ಯತ್ನದ ಬಗ್ಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಉದ್ಯಮಿ ನಾಸಿರುದ್ಧೀನ್ ಮೊಹಮ್ಮದ್ ಸೇರಿದಂತೆ ಒಬ್ಬ ಫುಟ್‌ಬಾಲ್ ಆಟಗಾರ, ವಿದ್ಯಾರ್ಥಿ ಸಂಘಟನೆ ಮುಖಂಡ ಮತ್ತಿಬ್ಬರನ್ನು ಬಂಧಿಸಲಾಗಿತ್ತು. ಅವರಿಗೆ 18 ದಿನದ ಜೈಲು ವಾಸದ ಬಳಿಕ ಜಾಮೀನು ನೀಡಲಾಯಿತು.

  ಪೊರಿ ಮೊನಿ ವಿರುದ್ಧ ಕ್ಲಬ್ ಒಂದರಿಂದ ದೂರು

  ಪೊರಿ ಮೊನಿ ವಿರುದ್ಧ ಕ್ಲಬ್ ಒಂದರಿಂದ ದೂರು

  ಈ ಘಟನೆಯ ನಂತರ ಕೆಲವು ದಿನಗಳ ಹಿಂದೆ ಢಾಕಾದ ಕ್ಲಬ್ ಒಂದು ನಟಿ ಪೊರಿ ಮೊನಿ ವಿರುದ್ಧ ದೂರು ನೀಡಿತ್ತು. ನಟಿಯು ನಮ್ಮ ಬಾರಿನಲ್ಲಿ ದಾಂಧಲೆ ಮಾಡಿದ್ದಾಳೆ ಬಾರ್ ಅನ್ನು ಒಡೆದು ಹಾಕಿದ್ದಾಳೆ ಎಂದು ದೂರಿನಲ್ಲಿ ಹೇಳಿತ್ತು. ದೂರು ದಾಖಲಾದ ಬಳಿಕ ಆರ್‌ಎಬಿಯವರು ನಟಿ ಪೊರಿ ಮೊನಿ ಮನೆ ಮೇಲೆ ದಾಳಿ ಮಾಡಿದ್ದಾರೆ. ಪೊರಿ ಮೊನಿ ಮನೆ ಮೇಲೆ ದಾಳಿ ಮಾಡುವ ಮುನ್ನ ಇನ್ನಿಬ್ಬರು ಮಾಡೆಲ್‌ಗಳ ಮನೆ ಮೇಲೆ ದಾಳಿ ಅವರನ್ನು ಬಂಧಿಸಲಾಗಿದೆ. ಮಾಡೆಲ್‌ಗಳ ನಿವಾಸದಲ್ಲಿಯೂ ಮಾದಕ ವಸ್ತು ಹಾಗೂ ಮದ್ಯದ ಬಾಟಲಿಗಳು ದೊರಕಿವೆ ಎನ್ನಲಾಗುತ್ತಿದೆ.

  ಸಿರಿವಂತರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು: ಆರ್‌ಎಬಿ

  ಸಿರಿವಂತರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು: ಆರ್‌ಎಬಿ

  ಘಟನೆ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಆರ್‌ಎಬಿ ಮೇಝರ್ ರೊಯಿಸುಲ್ ಅಜಮ್, ''ನಟಿ ಮೊನಿ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಹಣ ಮಾಡುತ್ತಿದ್ದಾಳೆ ಎಂಬ ಖಚಿತ ಮಾಹಿತಿ ಮೇರೆಗೆ ನಾವು ದಾಳಿ ನಡೆಸಿದ್ದೇವೆ. ಫರಿಯಾ ಮಹಬೂಬ್ ಹಾಗೂ ಮೋವು ಅಖ್ತರ್ ಎಂಬ ಇನ್ನಿಬ್ಬ ಮಾಡೆಲ್‌ಗಳನ್ನು ಸಹ ಬಂಧಿಸಲಾಗಿದ್ದು, ಇವರು ಸಿರಿವಂತರನ್ನು ಬ್ಲ್ಯಾಕ್‌ಮೇಲ್‌ ಮಾಡಿ ಹಣ ಪೀಕಿಸುವ ದಂಧೆ ನಡೆಸುತ್ತಿದ್ದರು'' ಎಂದಿದ್ದಾರೆ.

  English summary
  Bangladesh actress Pori Moni arrested by RAB in movie style. RAB raided actress Moni's multistory building with news reporters by telecasting raid live on Tv.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X