For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರದಲ್ಲೇ 'ಬೆಲ್ ಬಾಟಮ್': ಹೊಸ ಬಿಡುಗಡೆ ದಿನಾಂಕ ಇಲ್ಲಿದೆ

  |

  ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷೆ ಬೆಲ್ ಬಾಟಮ್ ಸಿನಿಮಾ ಮೇ 28ಕ್ಕೆ ಬಿಡುಗಡೆಯಾಗಬೇಕಿತ್ತು. ಅದರೆ ಕೋವಿಡ್ ಬಿಕ್ಕಟ್ಟಿನಿಂದ ರಿಲೀಸ್ ದಿನಾಂಕ ಮುಂದೂಡಿಕೆಯಾಗಿತ್ತು.

  ಇದೀಗ, ಬೆಲ್ ಬಾಟಮ್ ಚಿತ್ರ ನೂತನ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಜುಲೈ 27 ರಂದು ಅಕ್ಷಯ್ ಕುಮಾರ್ ಚಿತ್ರ ವಿಶ್ವಾದ್ಯಂತ ತೆರೆಗೆ ಬರಲಿದೆ ಎಂದು ಖ್ಯಾತ ಚಿತ್ರ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಅಕ್ಷಯ್ ಕುಮಾರ್ ಸಹ ರಿಲೀಸ್ ಕುರಿತು ವಿಡಿಯೋ ಶೇರ್ ಮಾಡಿದ್ದಾರೆ.

  ಒಂದೇ ದಿನ ಎರಡು ಚಿತ್ರ ಬಿಡುಗಡೆ, ಸ್ಪಷ್ಟನೆ ನೀಡಿದ ಅಕ್ಷಯ್ ಕುಮಾರ್ಒಂದೇ ದಿನ ಎರಡು ಚಿತ್ರ ಬಿಡುಗಡೆ, ಸ್ಪಷ್ಟನೆ ನೀಡಿದ ಅಕ್ಷಯ್ ಕುಮಾರ್

  ಈ ಹಿಂದೆ ವರದಿಯಾದಂತೆ ಬೆಲ್ ಬಾಟಮ್ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ನಿರ್ಮಾಪಕರು ಒಟಿಟಿಗೆ ನೋ ಎಂದಿದ್ದು, ಚಿತ್ರಮಂದಿರದಲ್ಲೇ ಸಿನಿಮಾ ತರಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.

  ಬೆಲ್ ಬಾಟಮ್ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ 80ರ ದಶಕದ ಪಾತ್ರ ನಿರ್ವಹಿಸಿದ್ದು, ಬಹಳ ವಿಶೇಷವಾಗಿರಲಿದೆ ಎಂಬ ಭರವಸೆ ಹುಟ್ಟಿಕೊಂಡಿದೆ.

  ರಾ ಏಜೆಂಟ್ ಪಾತ್ರದಲ್ಲಿ ಬಾಲಿವುಡ್ ಖಿಲಾಡಿ ಕಾಣಿಸಿಕೊಂಡಿದ್ದು, ರಂಜಿತ್ ಎಂ ತಿವಾರಿ ನಿರ್ದೇಶಿಸಿದ್ದಾರೆ. ಪೂಜಾ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ವೂಜು ಭಗ್ನಾನಿ, ಜಾಕಿ ಭಗ್ನಾನಿ, ದೀಪ್ಶಿಖಾ ದೇಶ್ಮುಖ್, ಮೋನಿಷಾ ಅಡ್ವಾಣಿ, ಮಧು ಭೋಜ್ವಾನಿ ಮತ್ತು ನಿಖಿಲ್ ಅಡ್ವಾಣಿ ಬಂಡವಾಳ ಹಾಕಿದ್ದಾರೆ.

  ಇಂತಹ ** ಮಕ್ಕಳಿಗೆ ಯಾಕ್ ಸಹಾಯ ಮಾಡ್ಬೇಕು ಅಂತ ಬೈದಿದ್ರು | Filmibeat Kannada

  ಈ ಸಿನಿಮಾ ಹಿಂದೆಯೇ ಅಕ್ಷಯ್ ನಟಿಸಿರುವ ಮತ್ತಷ್ಟು ಚಿತ್ರಗಳು ಚಿತ್ರಮಂದಿರಕ್ಕೆ ಬರಲು ಕಾಯುತ್ತಿವೆ. ಅಟ್ರಂಗಿ ರೇ, ಸೂರ್ಯವಂಶಿ ರಿಲೀಸ್‌ಗೆ ಸಜ್ಜಾಗಿದೆ. ರಾಮ್ ಸೇತು, ಬಚ್ಚನ್ ಪಾಂಡೆ, ಪೃಥ್ವಿರಾಜ್, ಸಿನಿಮಾಗಳು ಚಿತ್ರೀಕರಣ ಮಾಡ್ತಿವೆ.

  English summary
  Akshay Kumar starrer Most expected film Bell Bottom set to release on july 27th all over world.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X