For Quick Alerts
  ALLOW NOTIFICATIONS  
  For Daily Alerts

  ಬೆಂಗಾಲಿಯ ಖ್ಯಾತ ನಟ ಸೌಮಿತ್ರಾ ಚಟರ್ಜಿ ಆರೋಗ್ಯ ಸ್ಥಿತಿ ಗಂಭೀರ: ICUನಲ್ಲಿ ಚಿಕಿತ್ಸೆ

  |

  ಬೆಂಗಾಲಿಯ ಲೆಜೆಂಡರಿ ನಟ ಸೌಮಿತ್ರಾ ಚಟರ್ಜಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಕಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೌಮಿತ್ರಾ ಅವರಿಗೆ ತೀವ್ರನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೌಮಿತ್ರಾ ಚಟರ್ಜಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರು, ಇದೀಗ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ.

  85 ವರ್ಷದ ನಟ ಸೌಮಿತ್ರಾ ಚಟರ್ಜಿ ಆರೋಗ್ಯ ತೀರ ಹದಗೆಟ್ಟ ಕಾರಣ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿದೆ. ಆರೋಗ್ಯದ ಮೇಲೆ ತೀವ್ರ ನಿಗಾವಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಕ್ಟೋಬರ್ 6ರಂದು ಸೌಮಿತ್ರಾ ಚಟರ್ಜಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  ಚಿತ್ರೀಕರಣ ವೇಳೆ ಗಾಯಗೊಂಡ ನಟ ಟೋವಿನೋ ಥಾಮಸ್ ಆರೋಗ್ಯದಲ್ಲಿ ಸ್ಥಿರ: ICUನಲ್ಲಿ ಚಿಕಿತ್ಸೆ

  ಸೌಮಿತ್ರಾ ಚಟರ್ಜಿ ಶ್ವಾಸಕೋಶ ಮತ್ತು ಮೆದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಇದೀಗ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಅವರಿಗೆ ಪ್ಲಾಸ್ಮ ಚಿಕಿತ್ಸೆಯನ್ನು ನೀಡಲಾಗುತ್ತಿದೆ. 10 ವೈದ್ಯರ ತಂಡ ಸೌಮಿತ್ರಾ ಅವರಿಗೆ ಚಿಕಿತ್ಸೆ ನೀಡುತ್ತಿದೆ.

  ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತ ನಟ ಸೌಮಿತ್ರಾ ಚಟರ್ಜಿ ಇತ್ತೀಚಿಗೆ ಅವರ ಜೀವನಚರಿತ್ರೆ ಮತ್ತು ಡಾಕ್ಯೂಮೆಂಟರಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಈ ಡಾಕ್ಯೂಮೆಂಟರಿಗೆ ಅಭಿಜಾನ್ ಎಂದು ಹೆಸರಿಡಲಾಗಿದೆ.

  ಸೌಮಿತ್ರಾ ಚಟರ್ಜಿ ಕೊನೆಯದಾಗಿ 2019ರಲ್ಲಿ ರಿಲೀಸ್ ಆದ ಸಂಜಬತಿ ಸಿನಿಮಾದಲ್ಲಿ ನಟಿಸಿದ್ದಾರೆ. ಬಂಗಾಳದ ಖ್ಯಾತ ನಟ ಸೌಮಿತ್ರಾ ಚಟರ್ಜಿ 1959ರಲ್ಲಿ ಸತ್ಯಜಿತ್ ರೇ ಅವರ ಅಪುರ್ ಸಂಸರ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಭಿನಯದ ಜೊತೆಗೆ ಸಿನಿಮಾ ನಿರ್ದೇಶನ ಮತ್ತು ನಿರ್ಮಾಣವನ್ನು ಮಾಡಿದ್ದಾರೆ.

  ಸೌಮಿತ್ರಾ ಚಟರ್ಜಿ 2004ರಲ್ಲಿ ಪದ್ಮಭೂಷಣ, 2012ರಲ್ಲಿ ಜೀವಮಾನ ಸಾಧನೆಗಾಗಿ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದಿದ್ದಾರೆ. 2018ರಲ್ಲಿ ಪ್ರಾನ್ಸ್ ನ ಅತ್ಯುನ್ನತ ನಾಗರಿಕ ಪ್ರಶಸ್ತಿ Legion of Honour ಪ್ರಶಸ್ತಿಯನ್ನೂ ಪಡೆದಿದ್ದಾರೆ.

  English summary
  Bengali legendary Actor Soumitra Chatterjee The health condition is serious, shifted to ICU.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X