For Quick Alerts
  ALLOW NOTIFICATIONS  
  For Daily Alerts

  ಗನ್ ತೋರಿಸಿ ಅತ್ಯಾಚಾರ: ಬಿಗ್‌ಬಾಸ್ ಸ್ಪರ್ಧಿಯ ತಂದೆಯ ಮೇಲೆ ದೂರು

  |

  ಗನ್ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ಬಿಗ್‌ಬಾಸ್ ಸ್ಪರ್ಧಿಯ ತಂದೆಯ ಮೇಲೆ ದೂರು ದಾಖಲಾಗಿದೆ.

  ವೀಡಿಯೋ ಮೂಲಕ ಸ್ಪಷ್ಟನೆ ಕೊಟ್ಟ ವಂದನಾ ಜೈನ್ | FILMIBEAT KANNADA

  ಹಿಂದಿ ಬಿಗ್‌ಬಾಸ್ ಸೀಸನ್ 13 ರ ಸ್ಪರ್ಧಿ ಶೆಹನಾಜ್ ಗಿಲ್ ಅವರ ತಂದೆ ಸಂತೋಕ್ ಗಿಲ್ ಮೇ 14 ರಂದು 20 ರ ಹರೆಯದ ಬಾಲಕಿಗೆ ಗನ್ ತೋರಿಸಿ ಬೆದರಿಸಿ ತನ್ನ ಕಾರಿನಲ್ಲಿಯೇ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

  ಇರ್ಫಾನ್ ಖಾನ್, ರಿಷಿ ಕಪೂರ್ ಅವಹೇಳನೆ: ಕೆಆರ್‌ಕೆ ವಿರುದ್ಧ ಎಫ್‌ಐಆರ್ಇರ್ಫಾನ್ ಖಾನ್, ರಿಷಿ ಕಪೂರ್ ಅವಹೇಳನೆ: ಕೆಆರ್‌ಕೆ ವಿರುದ್ಧ ಎಫ್‌ಐಆರ್

  ಅಮೃತ್‌ಸರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376, 506 ಅಡಿಯಲ್ಲಿ ಸಂತೋಕ್ ಗಿಲ್ ವಿರುದ್ಧ ದೂರು ದಾಖಲಿಸಲಾಗಿದೆ.

  ಕಾರಿಗೆ ಹತ್ತಲು ಒತ್ತಾಯಿಸಿದ್ದ ಆರೋಪಿ

  ಕಾರಿಗೆ ಹತ್ತಲು ಒತ್ತಾಯಿಸಿದ್ದ ಆರೋಪಿ

  ಸಂತ್ರಸ್ತೆಯು ಮೇ 14 ರಂದು ಗೆಳತಿಯೊಂದಿಗೆ ಬೀಸ್ ಎಂಬಲ್ಲಿಗೆ ಗೆಳೆಯನನ್ನು ನೋಡಲು ತೆರಳಿದ್ದರು. ಜಲಂಧರ್‌ ನವನಾದ ಸಂತೋಕ್ ಗಿಲ್ ಆ ಸಮಯದಲ್ಲಿ ಅಲ್ಲಿಯೇ ಇದ್ದು, ಬಾಲಕಿಯನ್ನು ತನ್ನ ಕಾರಿಗೆ ಹತ್ತಲು ಒತ್ತಾಯಿಸಿದ್ದಾನೆ.

  ಗನ್ ತೋರಿಸಿ ಅತ್ಯಾಚಾರ

  ಗನ್ ತೋರಿಸಿ ಅತ್ಯಾಚಾರ

  ಕೊನೆಗೆ ಹೆದರಿಸಿ ಕಾರಿಗೆ ಹತ್ತಿಸಿಕೊಂಡ ಗಿಲ್, ಬಂದೂಕು ತೋರಿಸಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ವಿಷಯವನ್ನು ಎಲ್ಲೂ ಬಾಯಿ ಬಿಡದಂತೆ ಬಂದೂಕು ತೋರಿಸಿ ಹೆದರಿಸಿದ್ದಾನೆ.

  ಬಿಗ್‌ಬಾಸ್‌ ಸ್ಪರ್ಧಿ ದಿವಾಕರ್ ವಿರುದ್ಧ ದೂರು ಕೊಡುತ್ತೇನೆಂದ ಅಹೋರಾತ್ರ?ಬಿಗ್‌ಬಾಸ್‌ ಸ್ಪರ್ಧಿ ದಿವಾಕರ್ ವಿರುದ್ಧ ದೂರು ಕೊಡುತ್ತೇನೆಂದ ಅಹೋರಾತ್ರ?

  ಐದು ದಿನದ ವರೆಗೆ ಯಾರಿಗೂ ಹೇಳಿರಲಿಲ್ಲ

  ಐದು ದಿನದ ವರೆಗೆ ಯಾರಿಗೂ ಹೇಳಿರಲಿಲ್ಲ

  ಭಯಗೊಂಡ ಸಂತ್ರಸ್ತೆ ಐದು ದಿನದ ವರೆಗೆ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಕೊನೆಗೆ ಮನೆಯವರಿಗೆ ಅನುಮಾನ ಬಂದು ವಿಚಾರಿಸಿದಾಗ ನಡೆದ ಘಟನೆಯ ಬಗ್ಗೆ ಹೇಳಿದ್ದಾರೆ.

  ಆರೋಪಿ ತಲೆಮರೆಸಿಕೊಂಡಿದ್ದಾನೆ

  ಆರೋಪಿ ತಲೆಮರೆಸಿಕೊಂಡಿದ್ದಾನೆ

  ಮೇ 19 ರಂದು ಅಮೃತಸರ ಪೊಲೀಸ್ ಠಾಣೆಯಲ್ಲಿ ಸಂತೋಕ್ ಗಿಲ್ ವಿರುದ್ಧ ದೂರು ದಾಖಲಾಗಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

  English summary
  Bigg Boss 13 contest Shehnaz gill's father Santuk Gill booked in rape case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X