twitter
    For Quick Alerts
    ALLOW NOTIFICATIONS  
    For Daily Alerts

    ಶೀಘ್ರದಲ್ಲೇ 'ಕಾಫಿ ಕಿಂಗ್ ವಿ.ಜಿ. ಸಿದ್ಧಾರ್ಥ' ಬಯೋಪಿಕ್: ಸಿನಿಮಾ ಮಾಡೋದ್ಯಾರು?

    |

    ವಿ.ಜಿ. ಸಿದ್ಧಾರ್ಥ ಕಾಫಿ ಕಿಂಗ್ ಎಂದೇ ಜನಪ್ರಿಯ. ವಿಶ್ವದಾದ್ಯಂತ ಕೆಫೆ ಕಾಫಿ ಡೇ ಮೂಲಕ ಭಾರತೀಯ ಕಾಫಿ ಕಂಪು ಪಸರಿಸಿದ ಕೀರ್ತಿ ವಿ.ಜಿ. ಸಿದ್ಧಾರ್ಥ ಅವರದ್ದು. ಕಾಫಿ ಡೇ ಸ್ಥಾಪಿಸುವ ಮೂಲಕ ಚಿಕ್ಕಮಗಳೂರು ಜಿಲ್ಲೆಯ ಕಾಫಿ ಘಮವನ್ನು ವಿಶ್ವದ ಹಲವೆಡೆ ಪಸರಿಸಿದ ಕಾಫಿ ದೊರೆ ವಿ.ಜಿ.ಸಿದ್ಧಾರ್ಥ. ಈ ಮೂಲಕ ಒಂದು ಉದ್ಯಮವನ್ನೇ ಹುಟ್ಟು ಹಾಕಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದವರು.

    ಅಷ್ಟೆಲ್ಲಾ ಸಾಧನೆ ಮಾಡಿ ಸಾಧಕ ಎನಿಸಿಕೊಂಡ ವಿ.ಜಿ. ಸಿದ್ಧಾರ್ಥ ದುರಾದೃಷ್ಟವಶಾತ್ ನಮ್ಮೊಂದಿಗೆ ಇಲ್ಲ. ಉದ್ಯಮಿ ವಿ.ಜಿ.ಸಿದ್ಧಾರ್ಥ 2019ರ ಜುಲೈ ತಿಂಗಳಿನಲ್ಲಿ ಆತ್ಮಹತ್ಯೆ ಶರಣಾಗಿದ್ದರು. ಆದರೆ ಅವರು ಉದ್ಯಮ ಕಟ್ಟಿದ ಪರಿ, ಅವರ ಜೀವನ ಹಲವರಿಗೆ ಇಂದಿಗೂ ಮಾದರಿ.

    ದಾಖಲೆ ಬರೆದ 'ಕೆಜಿಎಫ್ 2' ಸಿನಿಮಾ ಫೈನಲ್ ಬಾಕ್ಸಾಫೀಸ್‌ ಕಲೆಕ್ಷನ್ ರಿಪೋರ್ಟ್ ಎಷ್ಟು?ದಾಖಲೆ ಬರೆದ 'ಕೆಜಿಎಫ್ 2' ಸಿನಿಮಾ ಫೈನಲ್ ಬಾಕ್ಸಾಫೀಸ್‌ ಕಲೆಕ್ಷನ್ ರಿಪೋರ್ಟ್ ಎಷ್ಟು?

    ಈ ಕಾರಣಕ್ಕೆ ವಿ ಜಿ ಸಿದ್ಧಾರ್ಥ್ ಅವರ ಕಥೆ ಸಿನಿಮಾ ರೂಪದಲ್ಲಿ ತೆರೆಯ ಮೇಲೆ ಬರಲಿದೆ. ವಿ.ಜಿ.ಸಿದ್ಧಾರ್ಥ ಜೀವನವನ್ನ ಸಿನಿಮಾ ಮಾಡಲು ಟೀ ಸೀರೀಸ್ ಸಂಸ್ಥೆ ಮುಂದಾಗಿದೆ. ಸಿನಿಮಾ ಮಾಡುವ ಬಗ್ಗೆ ಅಧಿಕೃತ ಮಾಹಿತಿಯನ್ನು ಕೆಲವೇ ದಿನಗಳಲ್ಲಿ ಹಂಚಿಕೊಳ್ಳಲಾಗಿದೆ. ಸಿನಿಮಾದಲ್ಲಿ ಏನೆಲ್ಲಾ ಇರಲಿದೆ ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ಓದಿ...

    ಪುಸ್ತಕ ಆಧರಿಸಿ 'ವಿ.ಜಿ. ಸಿದ್ಧಾರ್ಥ' ಸಿನಿಮಾ!

    ಪುಸ್ತಕ ಆಧರಿಸಿ 'ವಿ.ಜಿ. ಸಿದ್ಧಾರ್ಥ' ಸಿನಿಮಾ!

    ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ.ಸಿದ್ಧಾರ್ಥ ಜೀವನ ಚರಿತ್ರೆಯನ್ನು ಆಧರಿಸಿದ ಪುಸ್ತಕ ಬಿಡುಗಡೆಗೆ ತಯಾರಾಗಿದೆ. ಪಬ್ಲಿಷಿಂಗ್ ಹೌಸ್ ಪ್ಯಾನ್ ಮ್ಯಾಕ್‌ಮಿಲನ್ ಇಂಡಿಯಾ ಪುಸ್ತಕ ಬಿಡುಗಡೆ ಮಾಡಲಾಗುವುದು ಎಂದು ಈ ಹಿಂದೆ ಘೋಷಿಸಿತ್ತು. 'ಕಾಫಿ ಕಿಂಗ್: ದಿ ಸ್ವಿಫ್ಟ್ ರೈಸ್ ಅಂಡ್ ಸಡನ್ ಡೆತ್ ಆಫ್ ಕೆಫೆ ಕಾಫಿ ಡೇ ಫೌಂಡರ್ ವಿ.ಜಿ.ಸಿದ್ಧಾರ್ಥ' ಎಂಬ ಶೀರ್ಷಿಕೆ ಹೊಂದಿರುವ ಪುಸ್ತಕ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ಇದೇ ಪುಸ್ತಕವನ್ನು ಆಧರಿಸಿದ ಸಿನಿಮಾ ಕೂಡ ಬರಲಿದೆ. ಸಿನಿಮಾ ಮಾಡಲು ಟೀ ಸಿರೀಸ್ ಮುಂದಾಗಿದೆ.

    Exclusive: ದರ್ಶನ್ ಬೇರೆ ಸಿನಿಮಾದಲ್ಲಿ ತರುಣ್ ಬ್ಯುಸಿ: 'ಸಿಂಧೂರ ಲಕ್ಷಣ'ದ ಕಥೆಯೇನು?Exclusive: ದರ್ಶನ್ ಬೇರೆ ಸಿನಿಮಾದಲ್ಲಿ ತರುಣ್ ಬ್ಯುಸಿ: 'ಸಿಂಧೂರ ಲಕ್ಷಣ'ದ ಕಥೆಯೇನು?

    ಪುಸ್ತಕದ ಹಕ್ಕು ಪಡೆದ ಟೀ-ಸೀರೀಸ್!

    ಇದೇ ಪುಸ್ತಕದ ಹಕ್ಕುಗಳನ್ನು ನಿರ್ಮಾಣ ಸಂಸ್ಥೆಗಳು ಪಡೆದುಕೊಂಡಿವೆ. ಕರ್ಮ ಮೀಡಿಯಾ ಎಂಟರ್‌ಟೈನ್‌ಮೆಂಟ್, ಆಲ್‌ಮೈಟಿ ಮೋಷನ್ ಪಿಕ್ಚರ್‌ನ ಪ್ರಬ್ಲೀನ್ ಕೌರ್ ಸಂಧು ಮತ್ತು ಟಿ-ಸೀರೀಸ್ ಪಡೆದುಕೊಂಡಿದೆ. 'ಕಾಫಿ ಕಿಂಗ್: ದಿ ಸ್ವಿಫ್ಟ್ ರೈಸ್ ಅಂಡ್ ಸಡನ್ ಡೆತ್ ಆಫ್ ಕೆಫೆ ಕಾಫಿ ಡೇ ಫೌಂಡರ್ ವಿ.ಜಿ.ಸಿದ್ಧಾರ್ಥ' ಜೀವನ ಚರಿತ್ರೆಯನ್ನು ತನಿಖಾ ಪತ್ರಕರ್ತರಾದ ರುಕ್ಮಿಣಿ.ಬಿ.ಆರ್ ಮತ್ತು ಪ್ರೊಸೆನ್‌ಜಿತ್ ದತ್ತಾ ಬರೆದಿದ್ದಾರೆ. ಈ ಪುಸ್ತಕವನ್ನು ಪ್ಯಾನ್ ಮ್ಯಾಕ್‌ಮಿಲನ್ ಪಬ್ಲಿಷ್ ಮಾಡುತ್ತಿದೆ.

    ಸಿನಿಮಾದಲ್ಲಿರುವ ಅಂಶಗಳೇನು?

    ಸಿನಿಮಾದಲ್ಲಿರುವ ಅಂಶಗಳೇನು?

    'ಕಾಫಿ ಕಿಂಗ್: ದಿ ಸ್ವಿಫ್ಟ್ ರೈಸ್ ಅಂಡ್ ಸಡನ್ ಡೆತ್ ಆಫ್ ಕೆಫೆ ಕಾಫಿ ಡೇ ಫೌಂಡರ್ ವಿ.ಜಿ.ಸಿದ್ಧಾರ್ಥ' ಪುಸ್ತಕ ವಿ.ಜಿ.ಸಿದ್ಧಾರ್ಥ ಜೀವನ, ಉದ್ಯಮಿಯಾಗಿ ಅವರು ಬೆಳೆದ ರೀತಿ, ಉದ್ಯಮದಲ್ಲಿ ಅವರಿಗಾದ ನಷ್ಟ, ಆರ್ಥಿಕ ಬಿಕ್ಕಟ್ಟು, ಕೊನೆಗೆ ಅವರ ಸಾವಿನ ಕಾರಣಗಳನ್ನು ಬಿಚ್ಚಿಡಲಿದೆ. ಇದೇ ಅಂಶಗಳನ್ನು ಮುಖ್ಯವಾಗಿ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತದೆ. ಎಲ್ಲದ್ಧಕ್ಕಿಂದ ಮುಖ್ಯವಾಗಿ ಅವರ ನಷ್ಟ ಮತ್ತು ಸಾವಿನ ವಿಷಯ ಸಿನಿಮಾದಲ್ಲಿ ಹೈಲೈಟ್‌ ಆಗಿರಲಿದೆ.

    ನಮ್ಮಿಬ್ಬರ ನಡುವೆ ಏನೂ ಇಲ್ಲ: ಡಾಲಿ, ಅಮೃತಾ ಪ್ರೇಮಿಗಳಲ್ವಂತೆ!ನಮ್ಮಿಬ್ಬರ ನಡುವೆ ಏನೂ ಇಲ್ಲ: ಡಾಲಿ, ಅಮೃತಾ ಪ್ರೇಮಿಗಳಲ್ವಂತೆ!

    ಕಾಫಿ ಡೇ ಸಾಮ್ರಾಜ್ಯಕ್ಕೆ ಒಡೆಯ!

    ಕಾಫಿ ಡೇ ಸಾಮ್ರಾಜ್ಯಕ್ಕೆ ಒಡೆಯ!

    ವಿ.ಜಿ.ಸಿದ್ಧಾರ್ಥ ಒಬ್ಬ ಯಶಸ್ವಿ ಉದ್ಯಮಿ ಆಗಿದ್ದರು. ಕಾಫಿ ಡೇ ಎನ್ನುವ ಸಾಮ್ರಾಜ್ಯ ಕಟ್ಟಿಕೊಂಡು ಕಿಂಗ್ ಆಗಿದ್ದರು. ಅನೇಕರಿಗೆ ಉದ್ಯಮ ನೀಡುವ ಮೂಲಕ ಆಸರೆಯಾಗಿದ್ದರು. ಆದರೂ ಅವರ ಬದುಕು ದುರಂತ ಅಂತ್ಯ ಕಂಡಿದೆ. ಉದ್ಯಮದಲ್ಲಿ ಸಿದ್ಧಾರ್ಥ ನಷ್ಟ ಅನುಭವಿಸಿದ್ದು, 2019ರ ಜುಲೈ ತಿಂಗಳಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಹಾಗಾಗಿ ಸಿನಿಮಾದಲ್ಲಿ ಅವರ ಬದುಕಿನ ಪ್ರಮುಖ ಘಟ್ಟಗಳು ತೆರೆಮೇಲೆ ಮೂಡಲಿವೆ.

    English summary
    Biopic Based On Coffee Day Founder VG Siddhartha Real Life Story In Progress, Know More,
    Friday, June 17, 2022, 16:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X