»   » ಧೋನಿಗೆ ರು.80 ಕೋಟಿ ರಾಯಲ್ ಸಂಭಾವನೆ?

ಧೋನಿಗೆ ರು.80 ಕೋಟಿ ರಾಯಲ್ ಸಂಭಾವನೆ?

Posted By:
Subscribe to Filmibeat Kannada

ಇತ್ತೀಚೆಗಷ್ಟೆ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿ ಸಂಚನಲ ಸೃಷ್ಟಿಸಿದ್ದ ಕ್ರಿಕೆಟಿಗ ಎಂ.ಎಸ್. ಧೋನಿ ಅವರ ಜೀವನದ ಬಂಗಾರದಂತಹ ಪುಟಗಳು ಬೆಳ್ಳಿತೆರೆ ಅಲಂಕರಿಸಲಿವೆ. ಅವರ ಜೀವನ ಕಥೆಯಾಧಾರಿತ ಚಿತ್ರ ಸೆಟ್ಟೇರಲು ರೆಡಿಯಾಗಿದ್ದು ಕ್ರಿಕೆಟ್ ಪ್ರೇಮಿಗಳು ನಿರೀಕ್ಷಿಸುವಂತೆ ಮಾಡಿದೆ.

ಈ ಚಿತ್ರಕ್ಕೆ 'MS Dhoni: The Untold Story' ಎಂದು ಹೆಸರಿಡಲಾಗಿದೆ. ಚಿತ್ರದ ಶೀರ್ಷಿಕೆ ಕುತೂಹಲ ಕೆರಳಿಸುವಂತಿದ್ದು ಚಿತ್ರದಲ್ಲಿ ಧೋನಿ ಬಗೆಗಿನ ಏನೆಲ್ಲಾ ರಹಸ್ಯಗಳು ಬಯಲಾಗುತ್ತವೋ ಏನೋ ಎಂಬುದು ಈಗ ಚರ್ಚೆಗೂ ಗ್ರಾಸವಾಗುತ್ತಿದೆ. [ಬೆಳ್ಳಿಪರದೆ ಮೇಲೆ ಸಚಿನ್ ತೆಂಡೂಲ್ಕರ್ ಹೊಸ ಇನ್ನಿಂಗ್ಸ್]

Biopic On MS Dhoni Gets Sealed At Rs 80 Crores?

ಇದಕ್ಕಾಗಿ ಧೋನಿ ಅವರಿಗೆ ಭರ್ಜರಿ ಸಂಭಾವನೆಯನ್ನೂ ನೀಡಲಾಗಿದೆ. ಮೂಲಗಳ ಪ್ರಕಾರ ಅವರಿಗೆ ಈಗಾಗಲೆ ರು.20 ಕೋಟಿ ಸಂದಾಯವಾಗಿದೆಯಂತೆ. ಈ ಮೂಲಕ ಫಾಕ್ಸ್ ಸ್ಟಾರ್ ಸ್ಟುಡಿಯೋ ನಿರ್ಮಿಸುತ್ತಿರುವ ಈ ಭರ್ಜರಿ ಚಿತ್ರದ ಮೇಲೆ ಈಗ ಎಲ್ಲರ ಕಣ್ಣು ಬೀಳುವಂತಾಗಿದೆ.

ನೀರಜ್ ಪಾಂಡೆ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರು ಧೋನಿ ಪಾತ್ರವನ್ನು ಪೋಷಿಸುತ್ತಿದ್ದಾರೆ. ಇನ್ನೊಂದು ಮುಖ್ಯವಾದ ಸಂಗತಿ ಎಂದರೆ ರು.20 ಕೋಟಿ ಜೊತೆಗೆ ಚಿತ್ರದ ಗಳಿಕೆ ಪಾಲು ಹಾಗೂ ರಾಯಲ್ಟಿ ರೂಪದಲ್ಲಿ ಒಟ್ಟು ರು.80 ಕೋಟಿ ಧೋನಿ ಕೈಸೇರಲಿದೆ ಎಂಬುದು.

ಆದರೆ ಈ ಮಾತನ್ನು ಫಾಕ್ಸ್ ಸ್ಟಾರ್ ಸ್ಟುಡಿಯೋ ಸುತಾರಾಂ ಒಪ್ಪುತ್ತಿಲ್ಲ. ಇನ್ನೂ ಎಲ್ಲವೂ ಮಾತುಕತೆ ಹಂತದಲ್ಲಿದೆ. ಯಾವುದೂ ಫೈನಲ್ ಆಗಿಲ್ಲ. ಆಗಲೇ ಈ ರೀತಿ ಸುದ್ದಿ ಹಬ್ಬಿರುವ ಬಗ್ಗೆ ಸಂಸ್ಥೆ ಅಚ್ಚರಿ ವ್ಯಕ್ತಪಡಿಸಿದೆ. ಒಟ್ಟಾರೆ ಧೋನಿ ಚಿತ್ರಕ್ಕೆ ಭರ್ಜರಿ ದುಡ್ಡಂತೂ ಹಾಕಲಾಗುತ್ತಿದೆ. (ಏಜೆನ್ಸೀಸ್)

English summary
The upcoming Bollywood biopic on Mahendra Singh Dhoni which has been titled as MS Dhoni: The Untold Story has already grabbed much curiosity and the biopic is expected to receive great response. Now latest buzz is that Mahendra Singh Dhoni has already received Rs. 20 crores by the makers of the biopic for the rights to his life story.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada