»   » ಮಾಜಿ ಬಾಯ್ ಫ್ರೆಂಡ್ ಮುಖ ನೋಡಲೂ ಬೇಸರ!

ಮಾಜಿ ಬಾಯ್ ಫ್ರೆಂಡ್ ಮುಖ ನೋಡಲೂ ಬೇಸರ!

Posted By:
Subscribe to Filmibeat Kannada

ಒಂದುಕಾಲದ ಮಹಾನ್ ಪ್ರಣಯಪಕ್ಷಿಗಳಾಗಿದ್ದ ಜಾನ್ ಅಬ್ರಹಾಂ ಮತ್ತು ಬಿಪಾಶಾ ಬಸು ಈಗ ಬೇರ್ಪಟ್ಟಿರುವುದು ಹಳೆಯ ಸುದ್ದಿ. ಆದರೆ ಇವರಿಬ್ಬರೂ ಈಗ ಒಬ್ಬರ ಮುಖವನ್ನೊಬ್ಬರು ನೋಡಲೂ ಇಷ್ಟಪಡುವುದಿಲ್ಲ ಎಂಬುದು ಲೇಟೆಸ್ಟ್ ನ್ಯೂಸ್. ಈ ಜೋಡಿ ಲವ್ ಮಾಡುತ್ತಿದ್ದಾಗ ಎಲ್ಲೆಡೆ ಭಾರಿ ಸುದ್ದಿಯಾಗುತ್ತಿದ್ದರು. ಆದರೆ ಬೇರ್ಪಟ್ಟ ಮೇಲೆ ಮಾತ್ರ ಆಗಾಗ ಸುದ್ದಿ ಬರುತ್ತಿತ್ತಷ್ಟೇ!

ಆದರೀಗ ಬಂದಿರುವುದು ವೃತ್ತಿನಿಷ್ಠೆಗೂ ಮೀರಿದ ಇವರಬ್ಬರ ನಡುವಿನ ಒಡಕು. ಬಿಪಾಶಾ ಬಸು, ಜಾನ್ ಅಬ್ರಹಾಂ ನಾಯಕತ್ವದ 'ವಡಾಲಾ' ಚಿತ್ರದಲ್ಲಿ ಒಂಡು 'ಐಟಂ' ಹಾಡಿಗೆ ಕುಣಿಯಬೇಕಿತ್ತು. ಅದರಲ್ಲಿ ಮೊದಲು ಜಾನ್ ಅಬ್ರಹಾಂ ಇರುವುದಿಲ್ಲ ಎಂದಾಗಿತ್ತು. ಅದಕ್ಕೆ ಬಿಪಾಶಾ ಒಪ್ಪಿಯೂ ಆಗಿತ್ತು. ಇನ್ನೇನು ಶುರು ಅನ್ನವಷ್ಟರಲ್ಲಿ ಬದಲಾದ ಸ್ಕ್ರಿಪ್ಟ್ ಪ್ರಕಾರ ಬಿಪಾಶಾ ಕೆಲವು ದೃಶ್ಯಗಳಲ್ಲಿ ಜಾನ್ ಜೊತೆ ನಟಿಸಬೇಕು.

ಇದು ತಿಳಿಯುತ್ತಿದ್ದಂತೆ ಕೆಂಡಾಮಂಡಲವಾದ ಬಿಪಾಶಾ, 'ವಡಾಲಾ' ಚಿತ್ರದಿಂದಲೇ ಹೊರನಡೆದಿದ್ದಾರೆ. ಯಾವುದೇ ಕಾರಣಕ್ಕೂ ತಾವು ಜಾನ್ ಜೊತೆ ತೆರೆ ಹಂಚಿಕೊಳ್ಳುವುದಿಲ್ಲ ಎಂಬುದು ಸದ್ಯಕ್ಕೆ ಬಿಪಾಶಾ ಬಸು ಅವರ ಪ್ರತಿಜ್ಞೆ. ಅವರ ಪ್ರತಿಜ್ಞೆಯನ್ನು ಸದ್ಯದ ಮಟ್ಟಿಗೆ ಮುರಿಯಲು ಅವರಿಗಿಷ್ಟವಿಲ್ಲ ಎಂದಾಯ್ತು. ಆದರೆ, ಈ ವಿಷಯದಲ್ಲಿ ಜಾನ್ ಅಬ್ರಹಾಂ ಅಭಿಪ್ರಾಯ ಏನು ಎಂಬುದು ಸದ್ಯಕ್ಕೆ ಗೌಪ್ಯವಾಗಿದೆ.

ಈಗ ಬಿಪಾಶಾ ಜಾಗಕ್ಕೆ ಪ್ರಿಯಾಂಕಾ ಚೋಪ್ರಾ ಬರುವ ನಿರೀಕ್ಷೆಯಿದೆ. ಏನೇ ಆಗಲಿ, ಬಿಪಾಶಾ-ಜಾನ್ ಇಬ್ಬರನ್ನು ಮತ್ತೆ ತೆರೆಯಲ್ಲಿ ಒಟ್ಟಿಗೆ ನೋಡಬಹುದು ಎಂಬ ಅಭಿಮಾನಿಗಳ ನಿರೀಕ್ಷೆ ಈ ಮೂಲಕ ಸುಳ್ಳಾಗಿದೆ. ಕೆಲವರು ಲವ್ ಬ್ರೇಕಪ್ ಆದರೂ ವೃತ್ತಿ ಸಂಬಂಧವನ್ನು ಕೆಡಿಸಿಕೊಳ್ಳುವುದಿಲ್ಲ. ಆದರೆ ಬಿಪಾಶಾ ಹಾಗೂ ಜಾನ್ ಮಾತ್ರ ಮತ್ತೆ ಒಟ್ಟಾಗಿ ನಟಿಸಲಾರರು ಹಾಗೂ ಪರಸ್ಪರ ಮುಖ ನೋಡಲೂ ಇಷ್ಟಪಡುವುದಿಲ್ಲ ಎಂಬುದು ಸದ್ಯದ ಬಿಸಿಬಿಸಿ ಸುದ್ದಿ. (ಏಜೆನ್ಸೀಸ್)

English summary
Bipasha Basu refused to share screen space with ex-boyfriend John Abraham in Sanjay Gupta movie Shootout at Wadala.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada