»   » ಕತ್ರಿನಾ ಕೈಫ್ ಕುರಿತ ಕೆಲವು ಆಸಕ್ತಿಕರ ಸಂಗತಿಗಳು

ಕತ್ರಿನಾ ಕೈಫ್ ಕುರಿತ ಕೆಲವು ಆಸಕ್ತಿಕರ ಸಂಗತಿಗಳು

By: ಉದಯರವಿ
Subscribe to Filmibeat Kannada

ಬಾಲಿವುಡ್ ಬಾರ್ಬಿ ಗೊಂಬೆ ಕತ್ರಿನಾ ಕೈಫ್ ಬಾಳಿನಲ್ಲಿ ಇಂದು ಮರೆಯಲಾಗದ ದಿನ. ಕೇವಲ ಅವರಿಗಷ್ಟೇ ಅಲ್ಲ ಅವರ ಅಭಿಮಾನಿಗಳಿಗೂ ಇಂದು ಸಂಭ್ರಮದ ದಿನ. ಕಾರಣ ಕತ್ರಿನಾಗೆ (ಜು.16) ಹುಟ್ಟುಹಬ್ಬ ಸಂಭ್ರಮ. ಇಂದು ಅವರು 30ನೇ ಜನುಮದಿನ ಆಚರಿಸಿಕೊಳ್ಳುತ್ತಿದ್ದಾರೆ.

ಈ ಬಾರಿ ಕತ್ರಿನಾ ಅವರು ತಮ್ಮ ಹುಟ್ಟುಹಬ್ಬವನ್ನು ಫ್ರಾನ್ಸ್ ನಲ್ಲಿ ಆಚರಿಸಿಕೊಳ್ಳುತ್ತಿರುವುದು ವಿಶೇಷ. 'ಬ್ಯಾಂಗ್ ಬ್ಯಾಂಗ್' ಚಿತ್ರದ ಶೂಟಿಂಗ್ ನಡೆಯುತ್ತಿದ್ದು ಅಲ್ಲೇ ತಮ್ಮ ಹುಟ್ಟುಹಬ್ಬದ ಕ್ಯಾಂಡಲ್ ಹೊತ್ತಿಸುತ್ತಿದ್ದಾರೆ. ಅವರ ಬಾಯ್ ಫ್ರೆಂಡ್ ರಣಬೀರ್ ಕಪೂರ್ ಸಹ ಜೊತೆಗಿರುತ್ತಾರೆ ಎನ್ನುತ್ತವೆ ಬಾಲಿವುಡ್ ಮೂಲಗಳು. [ಧೂಮ್ 3 ವಿಮರ್ಶೆ]

ಸಾಮಾನ್ಯವಾಗಿ ಸಿನಿಮಾ ತಾರೆಗಳ ಕಷ್ಟ ಕೋಟಲೆಗಳನ್ನು ಯಾರೂ ಕೇಳುವುದಿಲ್ಲ. ಆದರೆ ಅವರ ಇಷ್ಟಗಳನ್ನು ಮಾತ್ರ ಇಷ್ಟಪಡುತ್ತಾರೆ. ಕತ್ರಿನಾ ಕುರಿತ ಕೆಲವು ಆಸಕ್ತಿಕರ ಸಂಗತಿಗಳು ಇಲ್ಲಿವೆ ನೋಡಿ. ಅವರಿಗೆ ಯಾವ ಪಾನೀಯ ಇಷ್ಟ, ಯಾವ ತಿಂಡಿ ಎಂದರೆ ಪ್ರಾಣ ಎಂಬ ಸಂಗತಿಗಳು ಸ್ಲೈಡ್ ನಲ್ಲಿ ನೋಡಿ.

ಕತ್ರಿನಾ ಕೈಫ್ ಅವರ ನೆಚ್ಚಿನ ಪಾನೀಯ

ಕತ್ರಿನಾ ಕೈಫ್ ಅವರ ನೆಚ್ಚಿನ ಪಾನೀಯ ಬ್ಲ್ಯಾಕ್ ಕಾಫಿ. ಹಾಗೆಯೇ ಅವರ ಮೆಚ್ಚಿನ ಆಹಾರ ದಹಿ ಮತ್ತು ರೈಸ್. ಉಳಿದಂತೆ ಅವರು ತಮ್ಮ ತೂಕ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಹಾಗಾಗಿಯೇ ಅವರು ತೆಳ್ಳಗೆ ಬಳುಕುವ ಬಳ್ಳಿಯಂತಿರುವುದು.

ಬೆಳಗ್ಗೆ 6 ಗಂಟೆಗೆಲ್ಲಾ ಹಾಸಿಗೆ ಬಿಟ್ಟು ಏಳುತ್ತಾರೆ

ಇನ್ನು ಅವರು ಬೆಳಗ್ಗೆ 6 ಗಂಟೆಗೆಲ್ಲಾ ಹಾಸಿಗೆ ಬಿಟ್ಟು ಏಳುತ್ತಾರೆ. ಆ ಬಳಿಕ ಮಾಡುವ ಮುಖ್ಯ ಕೆಲಸ ಎಂದರೆ ರಂಗೋಲಿ ಬಿಡಿಸುವುದಲ್ಲವೇ ಅಲ್ಲ, ಬೆಳಗ್ಗೆ 9 ಗಂಟೆಯ ತನಕ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡುವುದು.

ಆರಂಭದ ದಿನಗಳಲ್ಲಿ 16 ಗಂಟೆ ಕೆಲಸ

ಯಾರಿಗೇ ಆಗಲಿ ಆರಂಭದ ದಿನಗಳಲ್ಲಿ ವೃತ್ತಿಯಲ್ಲಿ ನೆಲೆನಿಲ್ಲುವುದು ಬಹಳ ಕಷ್ಟ. ಇದೇ ರೀತಿಯ ಕಷ್ಟವನ್ನು ಸತತ ಮೂರುವರೆ ವರ್ಷಗಳ ಕಾಲ ಕತ್ರಿನಾ ಸಹ ಅನುಭವಿಸಿದರು. ಆಗ ಪ್ರತಿ ದಿನ ಅವರು 16 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರಂತೆ.

ಆನ್ ಲೈನ್ ಶಾಪಿಂಗ್ ಎಂದರೆ ಇಷ್ಟ

ಕತ್ರಿನಾ ಅವರಿಗೆ ಆನ್ ಲೈನ್ ಶಾಪಿಂಗ್ ಎಂದರೆ ಎಲ್ಲಿಲ್ಲದ ಉತ್ಸಾಹ. ಅವರು ತಮ್ಮ ಬಟ್ಟೆಬರೆಗಳನ್ನು ಕೊಳ್ಳುವುದು ಆನ್ ಲೈನ್ ನಲ್ಲೇ ಎಂಬುದು ವಿಶೇಷ.

ಕತ್ರಿನಾಗೆ ಕತ್ತಲೆಂದರೆ ಬಲು ಭಯವಂತೆ

ಎಲ್ಲರಿಗೂ ಏನೋ ಒಂದು ಭಯ ಇರುತ್ತದೆ. ಕತ್ರಿನಾಗೆ ಕತ್ತಲೆಂದರೆ ಬಲು ಭಯವಂತೆ, ಹಾಗೆಯೇ ಹುಳಹುಪ್ಪಟಗಳೆಂದರೂ ಅಷ್ಟೇ ಬೆಚ್ಚಿ ಬೀಳುತ್ತಾರೆ.

ಪ್ರತಿ ಸಿನಿಮಾ ಬಿಡುಗಡೆಗೂ ಮುನ್ನ ಮಾಡುವ ಕೆಲಸ

ಪ್ರತಿ ಸಿನಿಮಾ ಬಿಡುಗಡೆಗೂ ಮುನ್ನ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನ, ಮೌಂಟ್ ಮಾರಿ ಚರ್ಚು ಹಾಗೂ ರಾಜಸ್ತಾನದ ಅಜ್ಮೀರ್ ಷರೀಫ್ ದರ್ಗಾಗೆ ಭೇಟಿ ನೀಡುತ್ತಾರೆ.

English summary
Katrina Kaif is turning 30 years today and we wish her a great birthday this year. Here is some unknown facts about Katrina Kaif. Her favourite beverage is well made black coffee and her favourite food is Dahi and rice. 
Please Wait while comments are loading...