For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ ಶರ್ಮಾ ಗೆ ಮತ್ತೆ ಸಂಕಷ್ಟ: ಬಿಜೆಪಿ ಶಾಸಕನಿಂದ ದೂರು

  |

  ಬಾಲಿವುಡ್ ನಟಿ, ನಿರ್ಮಾಪಕಿ ಅನುಷ್ಕಾ ಶರ್ಮಾ ನಿರ್ಮಿಸಿರುವ ಚೊಚ್ಚಿಲ ವೆಬ್ ಸೀರೀಸ್ 'ಪಾತಾಳ್ ಲೋಕ್‌' ಗೆ ವಿಘ್ನಗಳ ಮೇಲೆ ವಿಘ್ನಗಳು ಎದುರಾಗುತ್ತಿವೆ.

  ಅನುಷ್ಕಾ ಶರ್ಮಾ ನಿರ್ಮಾಣ ಮಾಡಿರುವ 'ಪಾತಾಳ್ ಲೋಕ್' ವೆಬ್ ಸೀರೀಸ್ ಅಮೆಜಾನ್ ಪ್ರೈಂ ನಲ್ಲಿ ಪ್ರಕಟವಾಗುತ್ತಿದ್ದು, ಬಿಡುಗಡೆ ಆದಾಗಿನಿಂದಲೂ ಒಂದಲ್ಲಾ ಒಂದು ವಿವಾದಕ್ಕೆ ಸಿಲುಕುತ್ತಲೇ ಇದೆ.

  ಅನುಷ್ಕಾ ಶರ್ಮಾ ನಿರ್ಮಾಣದ ವೆಬ್ ಸೀರೀಸ್ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿಅನುಷ್ಕಾ ಶರ್ಮಾ ನಿರ್ಮಾಣದ ವೆಬ್ ಸೀರೀಸ್ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ

  ಈ ಹಿಂದೆ ಗೂರ್ಖಾ ಸಮುದಾಯದವರು 'ಪಾತಾಳ್ ಲೋಕ್' ವೆಬ್ ಸೀರೀಸ್ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ನೇಪಾಳಿ ಸಮುದಾಯದವರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆಂದು ಆರೋಪಿಸಿದ್ದರು. ಈಗ ಬಿಜೆಪಿ ಶಾಸಕರೊಬ್ಬರು 'ಪಾತಾಳ್ ಲೋಕ್' ಪ್ರಸಾರವನ್ನು ರದ್ದು ಮಾಡಬೇಕೆಂದು ಒತ್ತಾಯಿಸಿದ್ದಾರೆ.

  ವೆಬ್ ಸೀರೀಸ್ ಪ್ರಸಾರ ತಡೆಗೆ ಒತ್ತಾಯ

  ವೆಬ್ ಸೀರೀಸ್ ಪ್ರಸಾರ ತಡೆಗೆ ಒತ್ತಾಯ

  ಉತ್ತರ ಪ್ರದೇಶದ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜರ್ 'ಪಾತಾಳ್ ಲೋಕ್' ವೆಬ್ ಸೀರೀಸ್ ಪ್ರಸಾರವನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದ್ದು, ಸ್ಥಳೀಯ ಎಸ್‌ಪಿ ಗೆ ದೂರು ಸಹ ನೀಡಿದ್ದಾರೆ.

  ಶಾಸಕ ನಂದಕಿಶೋರ್ ಚಿತ್ರ ಬಳಕೆ

  ಶಾಸಕ ನಂದಕಿಶೋರ್ ಚಿತ್ರ ಬಳಕೆ

  ಪಾತಾಳ್ ಲೋಕ್ ವೆಬ್ ಸೀರೀಸ್ ನಲ್ಲಿ ಶಾಸಕ ನಂದಕಿಶೋರ್ ಗುರ್ಜರ್ ಅವರ ಚಿತ್ರವನ್ನು ಬಳಸಲಾಗಿದೆ. ನಂದಕಿಶೋರ್ ಯಾವುದೋ ಕಾರ್ಯಕ್ರಮವೊಂದರಲ್ಲಿ ಇರುವ ಚಿತ್ರವನ್ನು ವೆಬ್ ಸೀರೀಸ್‌ ನಲ್ಲಿ ಬಳಸಿಕೊಳ್ಳಲಾಗಿದೆ. ಆ ಚಿತ್ರದಲ್ಲಿ ಇರುವ ಇತರೆ ಗಣ್ಯರ ಚಿತ್ರಗಳನ್ನು ಅಳಿಸಲಾಗಿದೆ ಆದರೆ ನಂದಕಿಶೋರ್ ಚಿತ್ರವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

  ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಇಷ್ಟವಾದ ವೆಬ್ ಸೀರೀಸ್ ಇದೇಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಇಷ್ಟವಾದ ವೆಬ್ ಸೀರೀಸ್ ಇದೇ

  ತನಿಖೆ ದೃಶ್ಯದ ವೇಳೆ ಚಿತ್ರ ಬಳಸಿಕೊಳ್ಳಲಾಗಿದೆ

  ತನಿಖೆ ದೃಶ್ಯದ ವೇಳೆ ಚಿತ್ರ ಬಳಸಿಕೊಳ್ಳಲಾಗಿದೆ

  ವೆಬ್ ಸೀರೀಸ್‌ನಲ್ಲಿ 'ಮಾಸ್ಟರ್ ಜೀ' ಎಂಬ ಪಾತ್ರದ ಬಗ್ಗೆ ತನಿಖೆ ನಡೆಸುವ ವೇಳೆ ಈ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಹಳೆಯ ನಿಜ ಚಿತ್ರವನ್ನು ತಿದ್ದಿ ಬಳಿಸಿಕೊಳ್ಳಲಾಗಿದೆಯಾದರೂ ನಂದಕಿಶೋರ್ ಚಿತ್ರವನ್ನು ಹಾಗೆಯೇ ಉಳಿಸಿಕೊಂಡು ಚಿತ್ರತಂಡ ಯಡವಟ್ಟು ಮಾಡಿಕೊಂಡಿದೆ.

  'ಪಾತಾಳ್ ಲೋಕ್' ದೇಶ ದ್ರೋಹಿ ಎಂದು ಪರಿಗಣಿಸಿ

  'ಪಾತಾಳ್ ಲೋಕ್' ದೇಶ ದ್ರೋಹಿ ಎಂದು ಪರಿಗಣಿಸಿ

  'ಪಾತಾಳ್ ಲೋಕ್' ದೇಶ ದ್ರೋಹಿ ಎಂದು ಪರಿಗಣಿಸಿ ಅದರ ನಿರ್ಮಾಪಕ, ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿ ಆ ವೆಬ್ ಸೀರೀಸ್ ಪ್ರಸಾರವನ್ನು ಕೂಡಲೇ ತಡೆಹಿಡಿಯಬೇಕು ಎಂದು ನಂದಕಿಶೋರ್ ಗುರ್ಜರ್ ಒತ್ತಾಯ ಮಾಡಿದ್ದಾರೆ.

  ಯಾವ ಕಾರಣಕ್ಕೂ 'ಪೊಗರು' ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡೊಲ್ಲ: ನಿರ್ದೇಶಕ ನಂದಕಿಶೋರ್ಯಾವ ಕಾರಣಕ್ಕೂ 'ಪೊಗರು' ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡೊಲ್ಲ: ನಿರ್ದೇಶಕ ನಂದಕಿಶೋರ್

  English summary
  Uttar Pradesh BJP MLA Nandakishore Gurjar files complaint against web series Patal Lok for using his photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X